WhatsApp: ಆನ್‌ಲೈನ್ ಸ್ಟೇಟಸ್ ಹೈಡ್ ಮಾಡುವ ಆಯ್ಕೆ: ವಾಟ್ಸ್ಆ್ಯಪ್ ಮುಂದಿನ ಅಪ್ಡೇಟ್ನಲ್ಲಿದೆ ವಿಶೇಷ ಫೀಚರ್
ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಿನೂತನ ಆಯ್ಕೆಯನ್ನು ಪರಿಚಯಿಸುವ ವಾಟ್ಸ್ಆ್ಯಪ್ನಲ್ಲಿ ಈಗಾಗಲೇ ಅನೇಕ ಆಯ್ಕೆಗಳು ಪರೀಕ್ಷಾ ಹಂತದಲ್ಲಿದೆ. ಇದೀಗ ವಾಟ್ಸ್ಆ್ಯಪ್ ಮತ್ತೊಂದು ಅತ್ಯಗತ್ಯ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ತರಲು ಮುಂದಾಗಿದೆ.
ಪ್ರಪಂಚದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಿನೂತನ ಆಯ್ಕೆಯನ್ನು ಪರಿಚಯಿಸುವ ವಾಟ್ಸ್ಆ್ಯಪ್ನಲ್ಲಿ ಇನ್ನೂ ಅನೇಕ ಆಯ್ಕೆಗಳು ಪರೀಕ್ಷಾ ಹಂತದಲ್ಲಿದೆ. ಇದೀಗ ವಾಟ್ಸ್ಆ್ಯಪ್ ಮತ್ತೊಂದು ಅತ್ಯಗತ್ಯ ಫೀಚರ್ಸ್‌ನಲ್ಲಿ (New Feature) ಹೊಸ ಬದಲಾವಣೆ ತರಲು ಮುಂದಾಗಿದೆ. ಹೌದು ವಾಟ್ಸ್ಆ್ಯಪ್ ಸದ್ಯದಲ್ಲೇ ನಿರ್ದಿಷ್ಟ ಜನರಿಂದ ಆನ್‌ಲೈನ್ ಸ್ಟೇಟಸ್ (Online Status) ಹೈಡ್ ಮಾಡುವ ಹೊಸ ಆಯ್ಕೆಯನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಅಂದರೆ ನಿಮಗೆ ಬೇಡ ಎನಿಸುವ ಜನರನ್ನು ಆನ್‌ಲೈನ್ ಸ್ಟೇಟಸ್ ನೋಡದಂತೆ ಹೈಡ್ ಮಾಡುವ ಆಯ್ಕೆ ಇದಾಗಿದೆ.
ಸಾಮಾನ್ಯವಾಗಿ ನಿಮ್ಮ ಕಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರಿಗೆ ನೀವು ಆನ್‌ಲೈನ್‌ನಲ್ಲಿದ್ದರೆ ತಿಳಿಯುತ್ತದೆ. ಆದರೆ ಈ ಹೊಸ ಆಯ್ಕೆಯು ಸೇರ್ಪಡೆಯಾದ ನಂತರ ನೀವು ಬಯಸದ ವ್ಯಕ್ತಿಗಳು ಆನ್‌ಲೈನ್ ಸ್ಟೇಟಸ್ ನೋಡದಂತೆ ಮಾಡುವುದಕ್ಕೆ ನಿಮಗೆ ಅವಕಾಶ ಸಿಗಲಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ ಈ ಫೀಚರ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು 2.22.16.12. ಅಪ್ಡೇಟ್ನಲ್ಲಿ ಬಳಕೆದಾರರಿಗೆ ಸಿಗಲಿದೆ ಎಂದು ಹೇಳಲಾಗಿದೆ.
ಇನ್ನು ವಾಟ್ಸ್ಆ್ಯಪ್ನಲ್ಲಿರುವ ಡಿಲಿಟ್ ಫಾರ್ ಎವರಿಒನ್ ಫೀಚರ್ನ ಸಮಯದಲ್ಲಿ ಬದಲಾವಣೆ ಆಗಲಿದೆ. ಅಂದರೆ ಮಾಡಿದ ಮೆಸೇಜ್ ಅನ್ನು ಯಾರಿಗೂ ಕಾಣದಂತೆ ಡಿಲೀಟ್ ಮಾಡಲು ಹೆಚ್ಚಿನ ಕಾಲವಕಾಶ ನೀಡಲಾಗುತ್ತಿದೆ.
ಪ್ರಸ್ತುತ ವಾಟ್ಸ್ಆ್ಯಪ್ ಬಳಕೆದಾರರು ಡಿಲೀಟ್ ಫಾರ್ ಎವರಿಒನ್ ಫೀಚರ್ನಲ್ಲಿ ತಾವು ಸೆಂಡ್ ಮಾಡಿದ ಸಂದೇಶವನ್ನು ಹಂಚಿಕೊಂಡ ಸಮಯದಿಂದ ಒಂದು ಗಂಟೆ ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯಲ್ಲಿ ಡಿಲೀಟ್ ಮಾಡಬಹುದು. ಇದೀಗ ಇದರ ಟೈಂ ಲಿಮಿಟ್ ಅನ್ನು ಹೆಚ್ಚಿಸಲಾಗುತ್ತಿದೆ.
ಮೆಟಾ ಕಂಪನಿ ಇದೀಗ ಈ ಸಮಯವನ್ನು ಬರೋಬ್ಬರಿ ಎರಡು ದಿನಗಳಿಗೆ ವಿಸ್ತರಿಸಲು ಮುಂದಾಗಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ ಎರಡು ದಿನಗಳ ನಂತರ ಡಿಲೀಟ್ ಫಾರ್ ಎವರಿಒನ್ ಬಳಸಿ ಡಿಲೀಟ್ ಮಾಡಬಹುದಾಗಿದೆ. ಸದ್ಯಕ್ಕೆ ಈ ಹೊಸ ಫೀಚರ್ ವಾಟ್ಸ್ಆ್ಯಪ್ ಬೀಟಾದ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರುವ ಆಯ್ದ ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ.