AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Galaxy M13: 6000mAh ಬ್ಯಾಟರಿ, 50MP ಕ್ಯಾಮೆರಾ: ಪ್ರೈಮ್ ಡೇ ಸೇಲ್​ನಲ್ಲಿ ಗ್ಯಾಲಕ್ಸಿ M13 ಭರ್ಜರಿ ಮಾರಾಟ

Amazon Prime Day sale: ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ ಎಮ್​13 (Samsung Galaxy M13) ಸ್ಮಾರ್ಟ್​​ಫೋನ್ 4G ಮತ್ತು 5G ಎರಡು ಆವೃತ್ತಿಯಲ್ಲಿ ಕಳೆದ ವಾರ ಅನಾವರಣಗೊಂಡಿತ್ತು. ಈ ಫೋನ್ ಇಂದಿನಿಂದ ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ಖರೀದಿಗೆ ಸಿಗುತ್ತಿದೆ.

Galaxy M13: 6000mAh ಬ್ಯಾಟರಿ, 50MP ಕ್ಯಾಮೆರಾ: ಪ್ರೈಮ್ ಡೇ ಸೇಲ್​ನಲ್ಲಿ ಗ್ಯಾಲಕ್ಸಿ M13 ಭರ್ಜರಿ ಮಾರಾಟ
Samsung Galaxy M13
TV9 Web
| Edited By: |

Updated on:Jul 23, 2022 | 3:06 PM

Share

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಪ್ರೈಮ್ ಡೇ ಸೇಲ್ ನಡೆಯುತ್ತಿದೆ. ಇಂದು ಮೊದಲ ದಿನದ ಪ್ರಯುಕ್ತ ಅನೇಕ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು ಮೊದಲ ಮಾರಾಟ ಕಾಣುತ್ತಿದೆ. ಇದರಲ್ಲಿ ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ ಎಮ್​13 (Samsung Galaxy M13) ಸ್ಮಾರ್ಟ್​​ಫೋನ್ ಕೂಡ ಒಂದು. ವಿಶೇಷ ಎಂದರೆ ಇದು 4G ಮತ್ತು 5G ಎರಡು ಆವೃತ್ತಿಯಲ್ಲಿ ಕಳೆದ ವಾರ ಅನಾವರಣಗೊಂಡಿತ್ತು. ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ. ಇದುಕೂಡ ಬಜೆಟ್ ಫೋನ್ ಆಗಿದ್ದು ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. 4ಜಿ ಆವೃತ್ತಿಯ ಫೋನ್​ನಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 5ಜಿ ಆವೃತ್ತಿಯಲ್ಲಿ ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ಅಳವಡಿಸಲಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಫೀಚರ್ಸ್​ ಏನು?, ಆಫರ್ ಏನಿದೆ? ಎಂಬುದನ್ನು ನೋಡೋಣ.

ಸ್ಯಾಮ್​ಸಂಗ್ ಗ್ಯಾಲಕ್ಸಿ M13 4G:

ಸ್ಯಾಮ್​ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್​ ಬ್ರೈಟ್​ನೆಸ್​ ಅನ್ನು ನೀಡುತ್ತದೆ. ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ಇದೆ. ಎಕ್ಸಿನೋಸ್ 850 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಅನ್ನು ಒನ್​ಯುಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಲೆನ್ಸ್‌ ಹೊಂದಿದ್ದು, 120 ಡಿಗ್ರಿಗಳ ಫೀಲ್ಡ್–ಆಫ್–ವ್ಯೂ ನೀಡಲಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, ಸ್ಯಾಮ್​ಸಂಗ್ ನಾಕ್ಸ್ ಸೆಕ್ಯೂರಿಟಿ ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ.

ಗ್ಯಾಲಕ್ಸಿ M13 4G ಸ್ಮಾರ್ಟ್​​ಫೋನ್ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB + 64GB ಸ್ಟೋರೆಜ್ ಮಾದರಿಗೆ ಕೇವಲ 11,999 ರೂ. ಇದೆ. ಅಂತೆಯೆ 6GB + 128GB ಸ್ಟೋರೆಜ್ ಸಾಮರ್ಥ್ಯಕ್ಕೆ 13,999 ರೂ. ನಿಗದಿ ಮಾಡಲಾಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ M13 5G:

ಗ್ಯಾಲಕ್ಸಿ M13 5G ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್​ ಬ್ರೈಟ್​ನೆಸ್​ ಅನ್ನು ನೀಡುತ್ತದೆ. 90Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12.0 ಅನ್ನು ಒನ್​ಯುಐ 4 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದ್ದರೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ. ಅಂತೆಯೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, ಸ್ಯಾಮ್​ಸಂಗ್ ನಾಕ್ಸ್ ಸೆಕ್ಯೂರಿಟಿ ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ.

ಗ್ಯಾಲಕ್ಸಿ M13 5G ಸ್ಮಾರ್ಟ್​​ಫೋನ್ ಕೂಡ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗಲಿದೆ. ಇದರ 4GB + 64GB ಸ್ಟೋರೆಜ್ ಮಾದರಿಗೆ ಕೇವಲ 13,999 ರೂ. ಇದೆ. ಅಂತೆಯೆ 6GB + 128GB ಸ್ಟೋರೆಜ್ ಸಾಮರ್ಥ್ಯಕ್ಕೆ 15,999 ರೂ. ನಿಗದಿ ಮಾಡಲಾಗಿದೆ. ಮೊದಲ ಸೇಲ್ ಪ್ರಯುಕ್ತ ಆಫರ್ ಕೂಡ ನೀಡಲಾಗಿದ್ದು, ICICI ಬ್ಯಾಂಕ್ ಕಾರ್ಡ್​​ ಮೂಲಕ ಪಡೆದುಕೊಂಡರೆ 1,000 ರೂ. ಗಳ ರಿಯಾಯತಿ ಘೋಷಿಸಲಾಗಿದೆ.

Published On - 3:06 pm, Sat, 23 July 22

Follow Us
TV9 Web
TV9 Web

TV9 Kannada

Read More
ಇಲ್ಲಿ ಇಂದಿಗೂ ಹಚ್ಚಲ್ಲ ದೀಪ, ಸಿಡಿಸಲ್ಲ ಪಟಾಕಿ
ಇಲ್ಲಿ ಇಂದಿಗೂ ಹಚ್ಚಲ್ಲ ದೀಪ, ಸಿಡಿಸಲ್ಲ ಪಟಾಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?