Galaxy M13 5G: ಬಜೆಟ್ ಬೆಲೆ, ಬಂಪರ್ ಫೀಚರ್ಸ್: ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ M13 4G, M13 5G ಸ್ಮಾರ್ಟ್​​ಫೋನ್ ಬಿಡುಗಡೆ

Samsung Galaxy M13 4G: ಸ್ಯಾಮ್​ಸಂಗ್ ಕಂಪನಿ ಇದೀಗ ತನ್ನ M ಸರಣಿಯಲ್ಲಿ ಒಂದು ಹೊಸ ಸ್ಮಾರ್ಟ್​​ಫೋನನ್ನು ಲಾಂಚ್ ಮಾಡಿದೆ. ಅದುವೇ ಗ್ಯಾಲಕ್ಸಿ ಎಮ್​13 (Samsung Galaxy M13). ವಿಶೇಷ ಎಂದರೆ ಇದು 4G ಮತ್ತು 5G ಎರಡು ಆವೃತ್ತಿಯಲ್ಲಿ ಅನಾವರಣಗೊಂಡಿದೆ.

Galaxy M13 5G: ಬಜೆಟ್ ಬೆಲೆ, ಬಂಪರ್ ಫೀಚರ್ಸ್: ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ M13 4G, M13 5G ಸ್ಮಾರ್ಟ್​​ಫೋನ್ ಬಿಡುಗಡೆ
Samsung Galaxy M13
Follow us
TV9 Web
| Updated By: Vinay Bhat

Updated on:Jul 14, 2022 | 1:36 PM

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಯಾಮ್​ಸಂಗ್ (Samsung) ಕಂಪನಿ ಈಗೀಗ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸುತ್ತಿದೆ. ಇದರಲ್ಲಿ ಯಶಸ್ಸು ಕೂಡ ಸಾಧಿಸುತ್ತಿದೆ. ಮುಖ್ಯವಾಗಿ ಸ್ಯಾಮ್​ಸಂಗ್​ನ ಗ್ಯಾಲಕ್ಸಿ M ಸರಣಿಯ ಫೋನ್​ಗಳು ಭಾರತದಲ್ಲಿ ಹೆಚ್ಚು ಸೇಲ್ ಕಾಣುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಡು ಕಂಪನಿ ಇದೀಗ ತನ್ನ M ಸರಣಿಯಲ್ಲಿ ಒಂದು ಹೊಸ ಸ್ಮಾರ್ಟ್​​ಫೋನನ್ನು ಲಾಂಚ್ ಮಾಡಿದೆ. ಅದುವೇ ಗ್ಯಾಲಕ್ಸಿ ಎಮ್​13 (Samsung Galaxy M13). ವಿಶೇಷ ಎಂದರೆ ಇದು 4G ಮತ್ತು 5G ಎರಡು ಆವೃತ್ತಿಯಲ್ಲಿ ಅನಾವರಣಗೊಂಡಿದೆ. ಇದುಕೂಡ ಬಜೆಟ್ ಫೋನ್ ಆಗಿದ್ದು ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. 4ಜಿ ಆವೃತ್ತಿಯ ಫೋನ್​ನಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 5ಜಿ ಆವೃತ್ತಿಯಲ್ಲಿ ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ಅಳವಡಿಸಲಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಫೀಚರ್ಸ್​ ಏನು? ಎಂಬುದನ್ನು ನೋಡೋಣ.

ಸ್ಯಾಮ್​ಸಂಗ್ ಗ್ಯಾಲಕ್ಸಿ M13 4G:

ಸ್ಯಾಮ್​ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ  ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್​ ಬ್ರೈಟ್​ನೆಸ್​ ಅನ್ನು ನೀಡುತ್ತದೆ. ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ಇದೆ. ಎಕ್ಸಿನೋಸ್ 850 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಅನ್ನು ಒನ್​ಯುಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದ್ದು, 120 ಡಿಗ್ರಿಗಳ ಫೀಲ್ಡ್-ಆಫ್-ವ್ಯೂ ನೀಡಲಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಇದನ್ನೂ ಓದಿ
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿಯನ್ನು ಇನ್ನಷ್ಟು ಪವರ್​​ಫುಲ್ ಮಾಡಬೇಕೆ?: ಇಲ್ಲಿದೆ ಟಿಪ್ಸ್
Image
WhatsApp: ಕೂಡಲೇ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ ಬೆರಗುಗೊಳಿಸುವ ಹೊಸ ಫೀಚರ್
Image
Nothing Phone 1: ಆಕರ್ಷಕ ವಿನ್ಯಾಸ, ಅದ್ಭುತ ಫೀಚರ್ಸ್​: ಕಡಿಮೆ ಬೆಲೆಯ ನಥಿಂಗ್ ಫೋನ್ 1 ಬಿಡುಗಡೆ
Image
WhatsApp: ನಕಲಿ ವಾಟ್ಸ್​ಆ್ಯಪ್ ಬಂದಿದೆ…ವಾಟ್ಸ್​ಆ್ಯಪ್ ಎಚ್ಚರಿಕೆ..!

ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, ಸ್ಯಾಮ್​ಸಂಗ್ ನಾಕ್ಸ್ ಸೆಕ್ಯೂರಿಟಿ ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ.

ಗ್ಯಾಲಕ್ಸಿ M13 4G ಸ್ಮಾರ್ಟ್​​ಫೋನ್ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗಲಿದೆ. ಇದರ 4GB  + 64GB ಸ್ಟೋರೆಜ್ ಮಾದರಿಗೆ ಕೇವಲ 11,999 ರೂ. ಇದೆ. ಅಂತೆಯೆ 6GB  + 128GB ಸ್ಟೋರೆಜ್ ಸಾಮರ್ಥ್ಯಕ್ಕೆ 13,999 ರೂ. ನಿಗದಿ ಮಾಡಲಾಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ M13 5G:

ಗ್ಯಾಲಕ್ಸಿ M13 5G ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ  ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್​ ಬ್ರೈಟ್​ನೆಸ್​ ಅನ್ನು ನೀಡುತ್ತದೆ. 90Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12.0 ಅನ್ನು ಒನ್​ಯುಐ 4 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದ್ದರೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ. ಅಂತೆಯೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, ಸ್ಯಾಮ್​ಸಂಗ್ ನಾಕ್ಸ್ ಸೆಕ್ಯೂರಿಟಿ ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ.

ಗ್ಯಾಲಕ್ಸಿ M13 5G ಸ್ಮಾರ್ಟ್​​ಫೋನ್ ಕೂಡ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗಲಿದೆ. ಇದರ 4GB  + 64GB ಸ್ಟೋರೆಜ್ ಮಾದರಿಗೆ ಕೇವಲ 13,999 ರೂ. ಇದೆ. ಅಂತೆಯೆ 6GB  + 128GB ಸ್ಟೋರೆಜ್ ಸಾಮರ್ಥ್ಯಕ್ಕೆ 15,999 ರೂ. ನಿಗದಿ ಮಾಡಲಾಗಿದೆ. ಈ ಎರಡೂ ಸ್ಮಾರ್ಟ್​​ಫೋನ್ ಜುಲೈ 23 ರಿಂದ ಸ್ಯಾಮ್​ಸಂಗ್​ನ ಅಧಿಕೃತ ವೆಬ್​ಸೈಟ್ ಮತ್ತು ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್ ಮೂಲಕ ಖರೀದಿಗೆ ಸಿಗಲಿದೆ. ಮೊದಲ ಸೇಲ್ ಪ್ರಯುಕ್ತ ಆಫರ್ ಕೂಡ ನೀಡಲಾಗಿದ್ದು, ICICI ಬ್ಯಾಂಕ್ ಕಾರ್ಡ್​​ ಮೂಲಕ ಪಡೆದುಕೊಂಡರೆ 1,000 ರೂ. ಗಳ ಡಿಸ್ಕೌಂಟ್ ನಿಮ್ಮದಾಗಿಸಬಹುದು.

Published On - 1:18 pm, Thu, 14 July 22

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ