WhatsApp: ನಕಲಿ ವಾಟ್ಸ್ಆ್ಯಪ್ ಬಂದಿದೆ…ವಾಟ್ಸ್ಆ್ಯಪ್ ಎಚ್ಚರಿಕೆ..!
WhatsApp: ಪ್ರಸ್ತುತ ವಿಶ್ವದ ಅತಿದೊಡ್ಡ ಮಲ್ಟಿಮೀಡಿಯಾ ಅಪ್ಲಿಕೇಶನ್ ಆಗಿರುವ ವಾಟ್ಸ್ಆ್ಯಪ್ನ ನಕಲಿ ಆ್ಯಪ್ಗಳು ಕೂಡ ಲಭ್ಯವಿದೆ. ಅದರಲ್ಲೂ ಇತ್ತೀಚೆಗೆ ಪ್ಲೇಸ್ಟೋರ್ನಲ್ಲೇ ಹೇ ವಾಟ್ಸ್ಆ್ಯಪ್ ಹೆಸರಿನ ನಕಲಿ ಆ್ಯಪ್ ಕೂಡ ಕಂಡು ಬಂದಿತ್ತು.
Updated on: Jul 13, 2022 | 11:58 AM

ಮೆಟಾ-ಮಾಲೀಕತ್ವದ ವಿಶ್ವದ ಜನಪ್ರಿಯ ಅಪ್ಲಿಕೇಶನ್ ವಾಟ್ಸ್ಆ್ಯಪ್ನ (WhatsApp) ನಕಲಿ ಆ್ಯಪ್ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಖುದ್ದು ವಾಟ್ಸ್ಆ್ಯಪ್ ಮುಖ್ಯಸ್ಥರೇ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಹಲವು ರೀತಿಯ ಫೇಕ್ ವಾಟ್ಸ್ಆ್ಯಪ್ ಅಪ್ಲಿಕೇಶನ್ ಇದ್ದು, ಇಂತಹ ಆ್ಯಪ್ಗಳ ಬಳಕೆದಾರರನ್ನು ಹ್ಯಾಕರ್ಗಳು ಗುರಿಯಾಗಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವಾಟ್ಸ್ಆ್ಯಪ್ ಸಿಇಒ ಕ್ಯಾತ್‌ಕಾರ್ಟ್, ಬಳಕೆದಾರರು ನಕಲಿ ಅಥವಾ ಮೋಡಿಫೈ ವಾಟ್ಸ್ಆ್ಯಪ್ಗಳನ್ನು ಡೌನ್‌ಲೋಡ್ ಮಾಡುವುದು ಒಳ್ಳೆಯದಲ್ಲ. ಈ ಆ್ಯಪ್ಗಳು ನಿಮ್ಮ ಗೌಪ್ಯತೆ ಮತ್ತು ಭದ್ರತೆಗೆ ಮಾರಕ ಎಂಬುದರ ಬಗ್ಗೆ ಎಚ್ಚರವಿರಲಿ. ವಂಚಕರು ಇಂತಹ ಆ್ಯಪ್ಗಳ ಮೂಲಕ ನಿಮ್ಮ ಡೇಟಾ ಮೇಲೆ ಕಣ್ಣಿಟ್ಟಿರುತ್ತಾರೆ ಎಂದು ಎಚ್ಚರಿಸಿದ್ದಾರೆ.

ಪ್ರಸ್ತುತ ವಿಶ್ವದ ಅತಿದೊಡ್ಡ ಮಲ್ಟಿಮೀಡಿಯಾ ಅಪ್ಲಿಕೇಶನ್ ಆಗಿರುವ ವಾಟ್ಸ್ಆ್ಯಪ್ನ ನಕಲಿ ಆ್ಯಪ್ಗಳು ಕೂಡ ಲಭ್ಯವಿದೆ. ಅದರಲ್ಲೂ ಇತ್ತೀಚೆಗೆ ಪ್ಲೇಸ್ಟೋರ್ನಲ್ಲೇ ಹೇ ವಾಟ್ಸ್ಆ್ಯಪ್ ಹೆಸರಿನ ನಕಲಿ ಆ್ಯಪ್ ಕೂಡ ಕಂಡು ಬಂದಿತ್ತು. ಈ ಆ್ಯಪ್ ಅನ್ನು ಹೇಮೊಡ್ಸ್ ಎಂಬ ಡೆವಲಪರ್ ಅಭಿವೃದ್ಧಿಪಡಿಸಿದ್ದರು.

ಹೇ ವಾಟ್ಸ್ಆ್ಯಪ್ನಲ್ಲಿ ಮಾಲ್ವೇರ್ ಕಂಡು ಬಂದಿದ್ದು, ಇದರ ಬಳಕೆದಾರರ ಡೇಟಾ ಮೇಲೆ ಹ್ಯಾಕರುಗಳು ಕಣ್ಣಿಟ್ಟಿರುವುದು ಕೂಡ ಖಚಿತವಾಗಿತ್ತು. ಇದರ ಬೆನ್ನಲ್ಲೇ ಇದೀಗ ನಕಲಿ ವಾಟ್ಸ್ಆ್ಯಪ್ಗಳ ಬಳಕೆಯ ಬಗ್ಗೆ ವಾಟ್ಸ್ಆ್ಯಪ್ ಸಿಇಓ ಕ್ಯಾತ್‌ಕಾರ್ಟ್ ಅವರೇ ಎಚ್ಚರಿಸಿದ್ದಾರೆ.

ವಿಲ್ ಕ್ಯಾತ್‌ಕಾರ್ಟ್ ಅವರು ಈ ನಿಟ್ಟಿನಲ್ಲಿ ಗೂಗಲ್‌ನೊಂದಿಗೆ ಚರ್ಚಿಸಿದ್ದು, ಇದಾದ ಬಳಿಕ ಹೇ ವಾಟ್ಸ್ಆ್ಯಪ್ ಅನ್ನು ತೆಗೆದು ಹಾಕಲಾಯಿತು.

ಆದರೆ ಇದೇ ಅಪ್ಲಿಕೇಶನ್ ಅನ್ನು ಥರ್ಡ್ ಪಾರ್ಟಿ ಮೂಲಕ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ಯಾರೂ ಕೂಡ ನಕಲಿ ವಾಟ್ಸ್ಆ್ಯಪ್ಗಳನ್ನು ಡೌನ್‌ಲೋಡ್ ಮಾಡದಂತೆ ಎಚ್ಚರವಹಿಸಲು ತಿಳಿಸಲಾಗಿದೆ.

TV9 Kannada
Read More
