WhatsApp: ಕೂಡಲೇ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ ಬೆರಗುಗೊಳಿಸುವ ಹೊಸ ಫೀಚರ್

ವಾಟ್ಸ್​ಆ್ಯಪ್ ಮೆಸೇಜ್‌ ರಿಯಾಕ್ಷನ್‌ ಫಿಚರ್ಸ್​ಗೆ ಮತ್ತಷ್ಟು ಆಯ್ಕೆಗಳು ಸೇರಿದೆ. ಅಂದರೆ ಲೈಕ್ ಥಂಬ್, ಹಾರ್ಟ್, ಹಾಹಾ, ವಾವ್ಹ್, ಕ್ರೈ ಮತ್ತು ಕೈ ಮುಗಿಯುವ ಆರು ಎಮೋಜಿಗಳ ಜೊತೆಗೆ ಇನ್ನೊಂದಷ್ಟು ಎಮೋಜಿಗಳು ಸೇರ್ಪಡೆಯಾಗಿದೆ.

WhatsApp: ಕೂಡಲೇ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ ಬೆರಗುಗೊಳಿಸುವ ಹೊಸ ಫೀಚರ್
Whatsapp
Follow us
| Updated By: Vinay Bhat

Updated on:Jul 14, 2022 | 12:16 PM

ಈ ವರ್ಷ ವಾಟ್ಸ್​ಆ್ಯಪ್​ (WhatsApp) ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಕರ್ಷಕ ಫೀಚರ್​​ಗಳನ್ನು ಒಂದರ ಹಿಂದೆ ಒಂದರಂತೆ ಪರಿಚಯಿಸುತ್ತಲೇ ಬರುತ್ತಿದೆ. ದಿನದಿಂದ ದಿನಕ್ಕೆ ವಾಟ್ಸ್​ಆ್ಯಪ್​​ ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಸಾಲು ಸಾಲು ನೂತನ ಆಯ್ಕೆಗಳು ಬರಲು ಪ್ರಾರಂಭವಾಗಿದೆ. ಕಳೆದ ತಿಂಗಳಷ್ಟೆ ವಾಟ್ಸ್​ಆ್ಯಪ್​​ ಮೆಸೇಜ್‌ ರಿಯಾಕ್ಷನ್ಸ್ ಫೀಚರ್ ಅನ್ನು ತನ್ನ ಬಳಕೆದಾರರಿಗೆ ನೀಡಿ ಖಷಿ ಪಡಿಸಿತ್ತು. ಈಗಾಗಲೇ ಇನ್​ಸ್ಟಾಗ್ರಾಮ್, ಟೆಲಿಗ್ರಾಂ (Telegram), ಫೇಸ್​ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್​ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೆಸೇಜ್‌ ರಿಯಾಕ್ಷನ್ಸ್ (Emoji Reactions) ಫೀಚರ್ ಅನ್ನು ನೀಡುತ್ತಿವೆ. ಇದೇ ಕಾರಣಕ್ಕೆ ವಾಟ್ಸ್​ಆ್ಯಪ್​ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಈ ಆಯ್ಕೆಯನ್ನು ಸೇರಿಸಿತ್ತು. ಇದೀಗ ಈ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ತಂದಿದೆ.

ವಾಟ್ಸ್​ಆ್ಯಪ್​ನಲ್ಲಿ ಸದ್ಯಕ್ಕೆ ಲೈಕ್ ಥಂಬ್, ಹಾರ್ಟ್, ಹಾಹಾ, ವಾವ್ಹ್, ಕ್ರೈ ಮತ್ತು ಕೈ ಮುಗಿಯುವ ಆರು ಎಮೋಜಿಗಳು ಲಭ್ಯವಾಗುತ್ತಿದೆ. ಇದೀಗ ಇದರಲ್ಲಿ ಮತ್ತೊಂದಿಷ್ಟು ಹೊಸ ಆಯ್ಕೆಯನ್ನು ವಾಟ್ಸ್​ಆ್ಯಪ್​ ನೀಡಿದೆ. ಹೌದು, ವಾಟ್ಸ್​ಆ್ಯಪ್​ನ ಮೆಸೇಜ್‌ ರಿಯಾಕ್ಷನ್ಸ್ ಫಿಚರ್ಸ್‌ ಎಮೋಜಿ ಐಕಾನ್‌ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ. ಅಂದರೆ ಎಮೋಜಿಗಳ ರಿಯಾಕ್ಷನ್​ಗಾಗಿ ನೀವು ಸಂದೇಶವನ್ನು ಲಾಂಗ್‌ ಪ್ರೆಸ್‌ ಮಾಡಬೇಕಾಗುತ್ತದೆ. ಪಾಪ್ ಅಪ್ ಆಗುವ ಯಾವುದೇ ಎಮೋಜಿಗಳಿಂದ ಆಯ್ಕೆ ಮಾಡಬೇಕಾಗುತ್ತದೆ.

ಇದೀಗ ಈ ಮೆಸೇಜ್‌ ರಿಯಾಕ್ಷನ್‌ ಫಿಚರ್ಸ್​ಗೆ ಮತ್ತಷ್ಟು ಆಯ್ಕೆಗಳು ಸೇರಿದೆ. ಅಂದರೆ ಲೈಕ್ ಥಂಬ್, ಹಾರ್ಟ್, ಹಾಹಾ, ವಾವ್ಹ್, ಕ್ರೈ ಮತ್ತು ಕೈ ಮುಗಿಯುವ ಆರು ಎಮೋಜಿಗಳ ಜೊತೆಗೆ ಇನ್ನೊಂದಷ್ಟು ಎಮೋಜಿಗಳು ಸೇರ್ಪಡೆಯಾಗಿದೆ. ಈ ಬಗ್ಗೆ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ಆಯ್ಕೆ ಎಲ್ಲರಿಗೂ ಸಿಗುತ್ತಿಲ್ಲ. ಆಯ್ದ ಕೆಲ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಇನ್ನೆರಡು ದಿನಗಳ ಒಳಗೆ ಅನೇಕ ಮೆಸೇಜ್ ರಿಯಾಕ್ಷನ್ ಫೀಚರ್​ಗಳಿರುವ ಆಯ್ಕೆ ಎಲ್ಲರಿಗೂ ಸಿಗಲಿದೆ.

ಇದನ್ನೂ ಓದಿ
Image
Nothing Phone 1: ಆಕರ್ಷಕ ವಿನ್ಯಾಸ, ಅದ್ಭುತ ಫೀಚರ್ಸ್​: ಕಡಿಮೆ ಬೆಲೆಯ ನಥಿಂಗ್ ಫೋನ್ 1 ಬಿಡುಗಡೆ
Image
WhatsApp: ನಕಲಿ ವಾಟ್ಸ್​ಆ್ಯಪ್ ಬಂದಿದೆ…ವಾಟ್ಸ್​ಆ್ಯಪ್ ಎಚ್ಚರಿಕೆ..!
Image
125W ಫಾಸ್ಟ್ ಚಾರ್ಜರ್​, 200MP ಕ್ಯಾಮೆರಾದ ಮೋಟೋ ಎಡ್ಜ್ 30 ಅಲ್ಟ್ರಾ ಫೋನಿನ ಬೆಲೆ ಸೋರಿಕೆ
Image
Nokia C21 Plus: ಕೇವಲ 10,299 ರೂ.: ನೋಕಿಯಾದಿಂದ ಅತಿ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್​​ಫೋನ್ ಬಿಡುಗಡೆ

ವಾಟ್ಸ್​ಆ್ಯಪ್​ ಪರಿಚಯಿಸಿರುವ ಈ ಆಯ್ಕೆ ಟೆಲಿಗ್ರಾಂಗೆ ನೇರವಾಗಿ ಸೆಡ್ಡೆಹೊಡಯಲಿದೆ. ಸದ್ಯಕ್ಕೆ ಟೆಲಿಗ್ರಾಂನಲ್ಲಿ 17 ಎಮೋಜಿ ರಿಯಾಕ್ಷನ್​ಗಳು ಲಭ್ಯವಿದೆ. ಇನ್ನು ಅನೇಕ ಎಮೋಜಿ ಬೇಕಾದಲ್ಲಿ ಟೆಲಿಗ್ರಾಂ ಪ್ರೀಮಿಯಂ ಉಪಯೋಗಿಸಬೇಕು. ಇದಕ್ಕೆ ನೀವು ಹಣಕೊಡಬೇಕಾಗಿದೆ. ಹೀಗಿರುವಾಗ ವಾಟ್ಸ್​ಆ್ಯಪ್​ ಉಚಿತವಾಗಿ ಇನ್ನೂ ಕೆಲ ವಿಶೇಷ ಎಮೋಜಿ ರಿಯಾಕ್ಷನ್ಸ್ ನೀಡಿದ್ದು ಟೆಲಿಗ್ರಾಂಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ಇನ್ನು ವಾಟ್ಸ್​ಆ್ಯಪ್ ಸದ್ಯದಲ್ಲೇ ನಿರ್ದಿಷ್ಟ ಜನರಿಂದ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡುವ ಹೊಸ ಆಯ್ಕೆಯನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಅಂದರೆ ನಿಮಗೆ ಬೇಡ ಎನಿಸುವ ಜನರನ್ನು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಹೈಡ್‌ ಮಾಡುವ ಆಯ್ಕೆ ಇದಾಗಿದೆ. ಇದರಿಂದ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಸಾಮಾನ್ಯವಾಗಿ ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವವರಿಗೆ ನೀವು ಆನ್‌ಲೈನ್‌ನಲ್ಲಿದ್ದರೆ ತಿಳಿಯುತ್ತದೆ. ಆದರೆ ಈ ಹೊಸ ಆಯ್ಕೆಯು ಸೇರ್ಪಡೆಯಾದ ನಂತರ ನೀವು ಬಯಸದ ವ್ಯಕ್ತಿಗಳು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಮಾಡುವುದಕ್ಕೆ ನಿಮಗೆ ಅವಕಾಶ ಲಭಸುತ್ತದೆ.

Published On - 12:16 pm, Thu, 14 July 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ