WhatsApp: ವಾಟ್ಸ್​ಆ್ಯಪ್ ಮೆಸೇಜ್ ರಿಯಾಕ್ಷನ್​ನಲ್ಲಿ ​​ನೂತನ ಆಯ್ಕೆ: ದಂಗಾದ ಟೆಲಿಗ್ರಾಂ ಆ್ಯಪ್

Telegram: ಇದೀಗ ಈ ಮೆಸೇಜ್‌ ರಿಯಾಕ್ಷನ್‌ ಫಿಚರ್ಸ್​ಗೆ ಮತ್ತಷ್ಟು ಆಯ್ಕೆಗಳು ಸೇರಲಿದೆಯಂತೆ. ಇದು ಟೆಲಿಗ್ರಾಂಗೆ ನೇರವಾಗಿ ಸೆಡ್ಡೆಹೊಡಯಲಿದೆ. ಸದ್ಯಕ್ಕೆ ಟೆಲಿಗ್ರಾಂನಲ್ಲಿ 17 ಎಮೋಜಿ ರಿಯಾಕ್ಷನ್​ಗಳು ಲಭ್ಯವಿದೆ.

WhatsApp: ವಾಟ್ಸ್​ಆ್ಯಪ್ ಮೆಸೇಜ್ ರಿಯಾಕ್ಷನ್​ನಲ್ಲಿ ​​ನೂತನ ಆಯ್ಕೆ: ದಂಗಾದ ಟೆಲಿಗ್ರಾಂ ಆ್ಯಪ್
WhatsApp
Follow us
| Updated By: Vinay Bhat

Updated on:Jul 12, 2022 | 12:32 PM

ಮೆಟಾ (Meta) ಮಾಲೀಕತ್ವದ ವಾಟ್ಸ್​ಆ್ಯಪ್​​ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್​​ಗಳನ್ನು ಪರಿಚಯಿಸುತ್ತಲೇ ಬಂದಿದೆ. ದಿನದಿಂದ ದಿನಕ್ಕೆ ವಾಟ್ಸ್​ಆ್ಯಪ್​​ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ತಿಂಗಳಷ್ಟೆ ವಾಟ್ಸ್​ಆ್ಯಪ್​​ ಮೆಸೇಜ್‌ ರಿಯಾಕ್ಷನ್ಸ್ ಫೀಚರ್ ಅನ್ನು ತನ್ನ ಬಳಕೆದಾರರಿಗೆ ನೀಡಿ ಖಷಿ ಪಡಿಸಿತ್ತು. ಈಗಾಗಲೇ ಇನ್​ಸ್ಟಾಗ್ರಾಮ್, ಫೇಸ್​ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್​ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೆಸೇಜ್‌ ರಿಯಾಕ್ಷನ್‌ (Emoji Reactions) ಫೀಚರ್​ಗಳನ್ನು ನೀಡುತ್ತಿವೆ. ಇದೇ ಕಾರಣಕ್ಕೆ ವಾಟ್ಸ್​ಆ್ಯಪ್​ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಈ ಆಯ್ಕೆಯನ್ನು ಸೇರಿಸಿದೆ.

ವಾಟ್ಸ್​ಆ್ಯಪ್​ನಲ್ಲಿ ಸದ್ಯಕ್ಕೆ ಲೈಕ್ ಥಂಬ್, ಹಾರ್ಟ್, ಹಾಹಾ, ವಾವ್ಹ್, ಕ್ರೈ ಮತ್ತು ಹೈ–ಫೈ ಎನ್ನುವ ಆರು ಎಮೋಜಿಗಳು ಲಭ್ಯವಾಗುತ್ತಿದೆ. ಇದೀಗ ಇದರಲ್ಲಿ ಮತ್ತೊಂದಿಷ್ಟು ಹೊಸ ಆಯ್ಕೆಯನ್ನು ವಾಟ್ಸ್​ಆ್ಯಪ್​ ನೀಡಲು ಮುಂದಾಗಿದೆ. ಹೌದು, ವಾಟ್ಸ್​ಆ್ಯಪ್​ನ ಮೆಸೇಜ್‌ ರಿಯಾಕ್ಷನ್‌ ಫಿಚರ್ಸ್‌ ಎಮೋಜಿ ಐಕಾನ್‌ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ. ಅಂದರೆ ಎಮೋಜಿಗಳ ರಿಯಾಕ್ಷನ್​ಗಾಗಿ ನೀವು ಸಂದೇಶವನ್ನು ಲಾಂಗ್‌ ಪ್ರೆಸ್‌ ಮಾಡಬೇಕಾಗುತ್ತದೆ. ಪಾಪ್ ಅಪ್ ಆಗುವ ಯಾವುದೇ ಎಮೋಜಿಗಳಿಂದ ಆಯ್ಕೆ ಮಾಡಬೇಕಾಗುತ್ತದೆ.

ಇದೀಗ ಈ ಮೆಸೇಜ್‌ ರಿಯಾಕ್ಷನ್‌ ಫಿಚರ್ಸ್​ಗೆ ಮತ್ತಷ್ಟು ಆಯ್ಕೆಗಳು ಸೇರಲಿದೆಯಂತೆ. ಅಂದರೆ ಲೈಕ್ ಥಂಬ್, ಹಾರ್ಟ್, ಹಾಹಾ, ವಾವ್ಹ್, ಕ್ರೈ ಮತ್ತು ಹೈ–ಫೈ ಎನ್ನುವ ಈಗಿರುವ ಆರು ಎಮೋಜಿಗಳ ಜೊತೆಗೆ ಇನ್ನೊಂದಷ್ಟು ಎಮೋಜಿಗಳು ಸೇರ್ಪಡೆಯಾಗಲಿದೆ ಎಂದು ವಾಟ್ಸ್​ಆ್ಯಪ್ ಹೇಳಿದೆ. ಇದು ಟೆಲಿಗ್ರಾಂಗೆ ನೇರವಾಗಿ ಸೆಡ್ಡೆಹೊಡಯಲಿದೆ. ಸದ್ಯಕ್ಕೆ ಟೆಲಿಗ್ರಾಂನಲ್ಲಿ 17 ಎಮೋಜಿ ರಿಯಾಕ್ಷನ್​ಗಳು ಲಭ್ಯವಿದೆ. ಇನ್ನು ಅನೇಕ ಎಮೋಜಿ ಬೇಕಾದಲ್ಲಿ ಟೆಲಿಗ್ರಾಂ ಪ್ರೀಮಿಯಂ ಉಪಯೋಗಿಸಬೇಕು. ಇದಕ್ಕೆ ನೀವು ಹಣಕೊಡಬೇಕಾಗಿದೆ.

ಇದನ್ನೂ ಓದಿ
Image
Nothing phone (1): ಇಂದು ವಿಶ್ವವೇ ಕಾಯುತ್ತಿರುವ ನಥಿಂಗ್ ಫೋನ್ 1 ಬಿಡುಗಡೆ: ಬೆಲೆ ಎಷ್ಟು? ಫೀಚರ್ಸ್​ ಏನು?
Image
Xiaomi 12 Lite: 108MP ಕ್ಯಾಮೆರಾ, 67W ಫಾಸ್ಟ್ ಚಾರ್ಜರ್: ಶವೋಮಿಯಿಂದ ಮತ್ತೊಂದು ಪವರ್​​ಫುಲ್ ಫೋನ್ ರಿಲೀಸ್
Image
Moto G42: 50MP ಕ್ಯಾಮೆರಾ, 5000mAh ಬ್ಯಾಟರಿ: ಭರ್ಜರಿ ಸೇಲ್ ಕಾಣುತ್ತಿದೆ ಕಡಿಮೆ ಬೆಲೆಯ ಮೋಟೋ G42
Image
Vivo V23 5G: ಕಲರ್ ಚೇಂಜ್ ಆಗುವ ವಿವೋ V23 5G ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ

ಹೀಗಿರುವಾಗ ವಾಟ್ಸ್​ಆ್ಯಪ್​ ಉಚಿತವಾಗಿ ಇನ್ನೂ ಕೆಲ ವಿಶೇಷ ಎಮೋಜಿ ರಿಯಾಕ್ಷನ್ಸ್ ನೀಡಲು ಮುಂದಾಗಿದೆ. ಬರುವ ವಾರದಲ್ಲಿ ಈ ಆಯ್ಕೆ ಬಳಕೆದಾರರಿಗೆ ಸಿಗಲಿದೆಯಂತೆ. ಜುಲೈ 17 ವಿಶ್ವ ಎಮೋಜಿ ದಿನವಾಗಿದ್ದು, ಇದೇ ದಿನದಂದು ಬಿಡುಗಡೆ ಮಾಡಿದರೆ ಅಚ್ಚರಿ ಪಡಬೇಕಿಲ್ಲ. ಮೂಲಗಳ ಪ್ರಕಾರ ವಾಟ್ಸ್​ಆ್ಯಪ್​ನ ತನ್ನ ಮುಂದಿನ ಎಮೋಜಿ ರಿಯಾಕ್ಷನ್​ನಲ್ಲಿ ಮೆಲ್ಟಿಂಗ್ ಫೇಸ್, ಬ್ಲೂ ಕ್ಯಾಪ್, ಲೌಡ್ಲಿ ಕ್ರೈಯಿಂಗ್, ಪ್ಲೀಡಿಂಗ್ ಫೇಸ್, ಐಸ್, ಸ್ಪಾರ್ಕ್​ಲೆಸ್, ಟೇಕಿಂಗ್ ನೋಟ್ ಆಯ್ಕೆಯನ್ನು ನೀಡಲಿದೆಯಂತೆ.

ಆನ್​ಲೈನ್ ಸ್ಟೇಟಸ್​​ನಲ್ಲಿ ಮಹತ್ವದ ಬದಲಾವಣೆ:

ವಾಟ್ಸ್​ಆ್ಯಪ್ ಸದ್ಯದಲ್ಲೇ ನಿರ್ದಿಷ್ಟ ಜನರಿಂದ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡುವ ಹೊಸ ಆಯ್ಕೆಯನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಅಂದರೆ ನಿಮಗೆ ಬೇಡ ಎನಿಸುವ ಜನರನ್ನು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಹೈಡ್‌ ಮಾಡುವ ಆಯ್ಕೆ ಇದಾಗಿದೆ. ಇದರಿಂದ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಸಾಮಾನ್ಯವಾಗಿ ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವವರಿಗೆ ನೀವು ಆನ್‌ಲೈನ್‌ನಲ್ಲಿದ್ದರೆ ತಿಳಿಯುತ್ತದೆ. ಆದರೆ ಈ ಹೊಸ ಆಯ್ಕೆಯು ಸೇರ್ಪಡೆಯಾದ ನಂತರ ನೀವು ಬಯಸದ ವ್ಯಕ್ತಿಗಳು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಮಾಡುವುದಕ್ಕೆ ನಿಮಗೆ ಅವಕಾಶ ಸಿಗಲಿದೆ.

Published On - 12:31 pm, Tue, 12 July 22