AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nothing phone (1): ಇಂದು ವಿಶ್ವವೇ ಕಾಯುತ್ತಿರುವ ನಥಿಂಗ್ ಫೋನ್ 1 ಬಿಡುಗಡೆ: ಬೆಲೆ ಎಷ್ಟು? ಫೀಚರ್ಸ್​ ಏನು?

ತನ್ನ ಡಿಸೈನ್‌, ಲುಕ್ ಮೂಲಕವೇ ಸಖತ್ ಸೌಂಡ್ ಮಾಡುತ್ತಿರುವ ನಥಿಂಗ್ ಫೋನ್ 1 (Nothing Phone 1) ಇಂದು ಜುಲೈ 12 ರಂದು ಬಿಡುಗಡೆ ಆಗಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:30ಕ್ಕೆ ಈ ಫೋನ್ ಗ್ರ್ಯಾಂಡ್‌ ಎಂಟ್ರಿ ನೀಡಲು ಸಜ್ಜಾಗಿದೆ.

Nothing phone (1): ಇಂದು ವಿಶ್ವವೇ ಕಾಯುತ್ತಿರುವ ನಥಿಂಗ್ ಫೋನ್ 1 ಬಿಡುಗಡೆ: ಬೆಲೆ ಎಷ್ಟು? ಫೀಚರ್ಸ್​ ಏನು?
Nothing phone (1)
TV9 Web
| Edited By: |

Updated on: Jul 12, 2022 | 6:45 AM

Share

ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿರುವ ಐಫೋನ್, ಶವೋಮಿ (Xiaomi), ಸ್ಯಾಮ್​ಸಂಗ್ ನಂತಹ ಪ್ರಸಿದ್ಧ ಬ್ರ್ಯಾಂಡ್​ಗಳಿಗೆ ಈಗ ನಡುಕ ಶುರುವಾಗಿದೆ. ಇದಕ್ಕೆ ಕಾರಣ ನಥಿಂಗ್. ಹೌದು, ಒನ್‍ ಪ್ಲಸ್‍ (OnePlus) ಕಂಪನಿಯ ಸಹಸ್ಥಾಪಕ ಕಾರ್ಲ್‍ ಪೇ ಒಡೆತನದ ನಥಿಂಗ್‍ ಕಂಪನಿ ತನ್ನ ಮೊಟ್ಟ ಮೊದಲ ಸ್ಮಾರ್ಟ್​​ಫೋನ್‍ ನಥಿಂಗ್ ಫೋನ್ 1 (Nothing Phone 1) ಅನ್ನು ಹೊರತರುತ್ತಿದ್ದು, ತನ್ನ ಡಿಸೈನ್‌, ಲುಕ್ ಮೂಲಕವೇ ಸಖತ್ ಸೌಂಡ್ ಮಾಡುತ್ತಿದೆ. ಈ ಫೋನ್ ಇಂದು ಜುಲೈ 12 ರಂದು ಬಿಡುಗಡೆ ಆಗಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:30ಕ್ಕೆ ಈ ಫೋನ್ ಗ್ರ್ಯಾಂಡ್‌ ಎಂಟ್ರಿ ನೀಡಲು ಸಜ್ಜಾಗಿದೆ. ಈಗಾಗಲೇ ನಥಿಂಗ್‌ ಫೋನ್‌ (1) ಭಾರತದಲ್ಲಿ ಪ್ರಿ ಆರ್ಡರ್‌ ಕೂಡ ಶುರುವಾಗಿದ್ದು ಇದು ಮಧ್ಯಮ ಬೆಲೆಯ ಬೆಸ್ಟ್ ಫೋನ್ ಆಗಿರಲಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ನಥಿಂಗ್ ಫೋನ್ (1) ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಲಾಂಚ್‌ ಆಗಲಿದೆ. ಅದೇ ದಿನ ನಥಿಂಗ್ ಫೋನ್ (1) ಖರೀದಿಸಲು ಬಯಸುವ ಗ್ರಾಹಕರು ಫ್ಲಿಪ್‌ಕಾರ್ಟ್‌ಗೆ ಲಾಗ್‌ ಇನ್‌ ಮಾಡಿ, ನಥಿಂಗ್ ಫೋನ್ (1) ಮಾದರಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಪ್ರಿ-ಆರ್ಡರ್ ಪಾಸ್ ಪಡೆಯಲು ಭದ್ರತಾ ಠೇವಣಿ ಮೊತ್ತವನ್ನು ಕೂಡ ಪಾವತಿಸಬೇಕಾಗುತ್ತದೆ. ಈಗಾಗಲೇ ಫ್ಲಿಪ್​ಕಾರ್ಟ್​​ನಲ್ಲಿ ನಥಿಂಗ್ ಫೋನ್ (1) ಪ್ರೀ ಆರ್ಡರ್‌ ಶುರುವಾಗಿದ್ದು ಬುಕ್ ಮಾಡಬಹುದು. ಇದಕ್ಕಾಗಿ 2,000 ರೂಪಾಯಿಗಳನ್ನು ಭದ್ರತಾ ಠೇವಣಿಯಾಗಿ ಪಾವತಿಸಬೇಕಾಗುತ್ತದೆ. ನಂತರ ಈ ಹಣ ನಿಮಗೆ ಮರು ಪಾವತಿಯಾಗುತ್ತದೆ.

ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು ಆಂಡ್ರಾಯ್ಡ್ ಫೋನ್‍ ಆಗಿದ್ದು, ನಥಿಂಗ್‍ ಆಪರೇಟಿಂಗ್‍ ಸಿಸ್ಟಂ (ಓಎಸ್‍) ಹೊಂದಿರುತ್ತದೆ. ತನ್ನದೇ ಆದ ಹೊಸ ರೀತಿಯ ವಿನ್ಯಾಸ ಹೊಂದಿರಲಿದೆ. ಅಂದರೆ ನಥಿಂಗ್‍ ಇಯರ್ ಬಡ್‍ ರೀತಿ ಪಾರದರ್ಶಕ ವಿನ್ಯಾಸ ಹೊಂದಿರಲಿದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್‍ ಪ್ರಿಯರು ಬಯಸುವ ಕ್ವಾಲ್‍ ಕಾಂ ಸ್ನಾಪ್‍ ಡ್ರಾಗನ್‍ ಪ್ರೊಸೆಸರ್ ಹೊಂದಿರುತ್ತದೆ. ನಥಿಂಗ್‍ಗೆ ಕ್ವಾಲ್‍ ಕಾಂ ಕೂಡ ಹೂಡಿಕೆದಾರ ಎಂಬುದು ವಿಶೇಷ.

ಇದನ್ನೂ ಓದಿ
Image
Moto G42: 50MP ಕ್ಯಾಮೆರಾ, 5000mAh ಬ್ಯಾಟರಿ: ಭರ್ಜರಿ ಸೇಲ್ ಕಾಣುತ್ತಿದೆ ಕಡಿಮೆ ಬೆಲೆಯ ಮೋಟೋ G42
Image
Vivo V23 5G: ಕಲರ್ ಚೇಂಜ್ ಆಗುವ ವಿವೋ V23 5G ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ
Image
WhatsApp: ವಾಟ್ಸ್​ಆ್ಯಪ್​ ಆನ್​ಲೈನ್ ಸ್ಟೇಟಸ್​​ನಲ್ಲಿ ಮಹತ್ವದ ಬದಲಾವಣೆ: ಬರುತ್ತಿದೆ ಹೊಸ ಫೀಚರ್

Xiaomi 12 Lite: 108MP ಕ್ಯಾಮೆರಾ, 67W ಫಾಸ್ಟ್ ಚಾರ್ಜರ್: ಶವೋಮಿಯಿಂದ ಮತ್ತೊಂದು ಪವರ್​​ಫುಲ್ ಫೋನ್ ರಿಲೀಸ್

ಇನ್ನು ನಥಿಂಗ್ ಫೋನ್ (1) ಸ್ಮಾರ್ಟ್​​ಫೋನ್ ಜೊತೆಗೆ ಯಾವುದೇ ಚಾರ್ಜರ್ ಬರುವುದಿಲ್ಲ ಎಂದು ಹೇಳಲಾಗಿದೆ. ಹೌದು, ನಥಿಂಗ್ ಫೋನ್ (1) ಬಾಕ್ಸ್​ನಲ್ಲಿ ಚಾರ್ಜರ್​ಗಳು ಇರುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. 4500mAh ಬ್ಯಾಟರಿಯನ್ನು ಬಳಸುವ ಸಾಧ್ಯತೆಯಿದೆ.

ಕ್ಯಾಮೆರಾಗಳು 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ತೃತೀಯ ಸಂವೇದಕವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಮುಂಭಾಗದಲ್ಲಿ, ನಥಿಂಗ್ ಫೋನ್ (1) ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುವ ಸಾಧ್ಯತೆಯಿದೆ. ಭಾರತದಲ್ಲಿ ಈ ಫೋನಿನ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ 30,000 ರೂ. ಒಳಗಡೆ ಇರಬಹುದು ಎಂದು ಅಂದಾಜಿಸಲಾಗಿದೆ.

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ