Xiaomi 12 Lite: 108MP ಕ್ಯಾಮೆರಾ, 67W ಫಾಸ್ಟ್ ಚಾರ್ಜರ್: ಶವೋಮಿಯಿಂದ ಮತ್ತೊಂದು ಪವರ್​​ಫುಲ್ ಫೋನ್ ರಿಲೀಸ್

ಶವೋಮಿ ಕಂಪನಿ ತನ್ನ 12 ಸರಣಿಯಲ್ಲಿ ಶವೋಮಿ 12 ಲೈಟ್ (Xiaomi 12 Lite) ಸ್ಮಾರ್ಟ್​​ಫೋನನ್ನು ಅನಾವರಣ ಮಾಡಿದೆ. ಸದ್ಯಕ್ಕೆ ಚೀನಾದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್​​ಫೋನ್​ಗಳು ಕೆಲವೇ ತಿಂಗಳಲ್ಲಿ ಭಾರತಕ್ಕೂ ಕಾಲಿಡಲಿದೆ.

Xiaomi 12 Lite: 108MP ಕ್ಯಾಮೆರಾ, 67W ಫಾಸ್ಟ್ ಚಾರ್ಜರ್: ಶವೋಮಿಯಿಂದ ಮತ್ತೊಂದು ಪವರ್​​ಫುಲ್ ಫೋನ್ ರಿಲೀಸ್
Xiaomi 12 Lite
Follow us
| Updated By: Vinay Bhat

Updated on:Jul 11, 2022 | 3:32 PM

ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ತನ್ನ ನಂಬರ್ ಒನ್ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಆಕರ್ಷಕ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಕಳೆದ ವಾರವಷ್ಟೆ ಜಾಗತೀಕ ಮಾರುಕಟ್ಟೆಯಲ್ಲಿ ಶವೋಮಿ 12S, ಶವೋಮಿ 12S ಪ್ರೊ (Xiaomi 12S Pro), ಶವೋಮಿ 12S ಅಲ್ಟ್ರಾ (Xiaomi 12S Ultra) ಹಾಗೂ ಶವೋಮಿ 12 ಪ್ರೊ ಡೈಮೆನ್ಸಿಟಿ ಎಡಿಷನ್‌ ಅನ್ನು ಬಿಡುಗಡೆ ಮಾಡಿತ್ತು. ಹುಬ್ಬೇರಿಸುವಂತಹ ಫೀಚರ್​ಗಳು ಇದರಲ್ಲಿ ಅಡಕವಾಗಿದೆ. ಹೀಗಿರುವಾಗ ಇದೇ ಸರಣಿಯಲ್ಲಿ ಶವೋಮಿ 12 ಲೈಟ್ (Xiaomi 12 Lite) ಸ್ಮಾರ್ಟ್​​ಫೋನನ್ನು ಅನಾವರಣ ಮಾಡಿದೆ. ಸದ್ಯಕ್ಕೆ ಚೀನಾದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್​​ಫೋನ್​ಗಳು ಕೆಲವೇ ತಿಂಗಳಲ್ಲಿ ಭಾರತಕ್ಕೂ ಕಾಲಿಡಲಿದೆ. ಇದರ ವಿಶೇಷತೆ?, ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಶವೋಮಿ 12 ಲೈಟ್ ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಿಂದ ಕೂಡಿದೆ. ಹೆಚ್​ಡಿಆರ್​+ ಮತ್ತು ಡಾಲ್ ವರ್ಷನ್ ಸಪೋರ್ಟ್ ಕೂಡ ನೀಡಲಾಗಿದೆ. 120Hz ರಿಫ್ರೆಶ್ ರೇಟ್​ನಿಂದ ಕೂಡಿರುವ ಈ ಡಿಸ್ ಪ್ಲೇ ಗೇಮಿಂಗ್​ಗೆ ಹೇಳಿ ಮಾಡಿಸಿದಂತಿದೆ.

ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್‌ ಅನ್ನು ಅಳವಡಿಸಲಾಗಿದ್ದು. ಇದು ಆಂಡ್ರಾಯ್ಡ್‌ 12 ನ ಇತ್ತೀಚಿನ ಆವೃತ್ತಿಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಗರಿಷ್ಠ ಎಂದರೆ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಲಭ್ಯವಾಗಲಿದೆ.

ಇದನ್ನೂ ಓದಿ
Image
Moto G42: 50MP ಕ್ಯಾಮೆರಾ, 5000mAh ಬ್ಯಾಟರಿ: ಭರ್ಜರಿ ಸೇಲ್ ಕಾಣುತ್ತಿದೆ ಕಡಿಮೆ ಬೆಲೆಯ ಮೋಟೋ G42
Image
Vivo V23 5G: ಕಲರ್ ಚೇಂಜ್ ಆಗುವ ವಿವೋ V23 5G ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ
Image
Nothing Phone (1): ನಥಿಂಗ್ ಫೋನ್ 1 ಖರೀದಿಸುವವರಿಗೆ ಭಾರೀ ನಿರಾಸೆ: ಲೀಕ್ ಆದ ವಿಡಿಯೋದಲ್ಲಿ ಏನಿದೆ ನೋಡಿ
Image
WhatsApp: ವಾಟ್ಸ್​ಆ್ಯಪ್​ ಆನ್​ಲೈನ್ ಸ್ಟೇಟಸ್​​ನಲ್ಲಿ ಮಹತ್ವದ ಬದಲಾವಣೆ: ಬರುತ್ತಿದೆ ಹೊಸ ಫೀಚರ್

Moto G42: 50MP ಕ್ಯಾಮೆರಾ, 5000mAh ಬ್ಯಾಟರಿ: ಭರ್ಜರಿ ಸೇಲ್ ಕಾಣುತ್ತಿದೆ ಕಡಿಮೆ ಬೆಲೆಯ ಮೋಟೋ G42

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸ್ಯಾಮ್​ಸಂಗ್ HM2 ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮಾಕ್ರೊ ಸೆನ್ಸಾರ್‌ ಅನ್ನು ಹೊಂದಿದೆ. ಇದರಲ್ಲಿ ಮ್ಯಾಜಿಕ್ ಕಟೌಟ್ ಎಂಬ ವಿಶೇಷ ಆಯ್ಕೆ ನೀಡಲಾಗಿದ್ದು ಅತ್ಯುತ್ತಮ ಅನುಭವ ನೀಡುತ್ತದೆ. ಇದರ ಜೊತೆಗೆ 32 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ಕೂಡ ಇದೆ.

4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. 5ಜಿ ಬೆಂಬಲ ಕೂಡ ಪಡೆದುಕೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡಾಲ್ಬಿ ಅಟ್ಮೋಸ್‌ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

ಒಟ್ಟು ಮೂರು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿರುವ ಈ ಸ್ಮಾರ್ಟ್​ಫೋನಿನ 6GB RAM ಮತ್ತು 128GB ಸ್ಟೋರೆಜ್​ ಸಾಮರ್ಥ್ಯದ ಬೆಲೆ $399, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 31,700 ರೂ. ಎನ್ನಬಹುದು. ಹಾಗೆಯೆ 8GB RAM + 128GB ಸ್ಟೋರೆಜ್​ಗೆ  $449 (35,700) ಮತ್ತು 8GB RAM + 256GB ಸ್ಟೋರೆಜ್ ಆಯ್ಕೆಗೆ USD 499 (ಭಾರತದಲ್ಲಿ ಅಂದಾಜಿ 40,000 ರೂ. ಎನ್ನಬಹುದು.

Published On - 3:31 pm, Mon, 11 July 22