Xiaomi 12S series: ಒಂದಲ್ಲ ಎರಡಲ್ಲ ಬರೋಬ್ಬರಿ 4 ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿದ ಶವೋಮಿ: ಯಾವುವು?, ಬೆಲೆ ಎಷ್ಟು?

Xiaomi 12S, Xiaomi 12S Pro, Xiaomi 12S Ultra and Xiaomi 12S Pro Dimensity: ಶವೋಮಿ ಕಂಪನಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಇದೀಗ ನಾಲ್ಕು ಆಕರ್ಷಕ ಫೋನನ್ನು ಅನಾವರಣ ಮಾಡಿದೆ. ಅದುವೇ ಶವೋಮಿ 12S, ಶವೋಮಿ 12S ಪ್ರೊ ಮತ್ತು ಶವೋಮಿ 12S ಅಲ್ಟ್ರಾ. ಇದರೊಂದಿಗೆ ಶವೋಮಿ 12 ಪ್ರೊ ಡೈಮೆನ್ಸಿಟಿ ಎಡಿಷನ್‌ ಅನ್ನು ಕೂಡ ಬಿಡುಗಡೆ ಮಾಡಿದೆ.

Xiaomi 12S series: ಒಂದಲ್ಲ ಎರಡಲ್ಲ ಬರೋಬ್ಬರಿ 4 ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿದ ಶವೋಮಿ: ಯಾವುವು?, ಬೆಲೆ ಎಷ್ಟು?
Xiaomi 12S Series
Follow us
| Updated By: Vinay Bhat

Updated on:Jul 05, 2022 | 1:37 PM

ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾ ಮೂಲದ ಶವೋಮಿ ಕಂಪನಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಇದೀಗ ನಾಲ್ಕು ಆಕರ್ಷಕ ಫೋನನ್ನು ಅನಾವರಣ ಮಾಡಿದೆ. ಅದುವೇ ಶವೋಮಿ 12S (Xiaomi 12S), ಶವೋಮಿ 12S ಪ್ರೊ (Xiaomi 12S Pro) ಮತ್ತು ಶವೋಮಿ 12S ಅಲ್ಟ್ರಾ (Xiaomi 12S Ultra). ಇದರೊಂದಿಗೆ ಶವೋಮಿ 12 ಪ್ರೊ ಡೈಮೆನ್ಸಿಟಿ ಎಡಿಷನ್‌ ಅನ್ನು ಕೂಡ ಬಿಡುಗಡೆ ಮಾಡಿದೆ. ಹುಬ್ಬೇರಿಸುವಂತಹ ಫೀಚರ್​ಗಳು ಇದರಲ್ಲಿ ಅಡಕವಾಗಿದ್ದು ಮೊದಲ ಮೂರು ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳು ಲೈಕಾ ಆಪ್ಟಿಕ್ಸ್‌ ಅನ್ನು ಒಳಗೊಂಡಿವೆ. ಸದ್ಯಕ್ಕೆ ಚೀನಾದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್​​ಫೋನ್​ಗಳು ಸದ್ಯದಲ್ಲೇ ಭಾರತಕ್ಕೂ ಕಾಲಿಡಲಿದೆಯಂತೆ. ಇದರ ವಿಶೇಷತೆ?, ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಶವೋಮಿ 12S:

ಶವೋಮಿ 12S ಬೇಸ್ ಮಾಡೆಲ್‌ 8GB RAM + 128GB ಆಯ್ಕೆಯ ಬೆಲೆ CNY 3,999. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 47,100 ರೂ. ಎನ್ನಬಹುದು. ಈ ಸ್ಮಾರ್ಟ್‌ಫೋನ್‌ 6.28 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ ಆಧಾರಿತ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಪ್ರೈಮೆರಿ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೈರ್ಡ್, 50W ವೈರ್‌ಲೆಸ್ ಮತ್ತು 10W ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಇದನ್ನೂ ಓದಿ
Image
ಭಾರತಕ್ಕೆ ಬಂದಿದೆ ಒನ್​ಪ್ಲಸ್ 50 ಇಂಚಿನ Y1S ಪ್ರೊ ಟಿವಿ: ಫೀಚರ್ಸ್​ ನೋಡಿದ್ರೆ ಫಿದಾ ಆಗ್ತೀರಾ
Image
Moto G42: ಭಾರತದಲ್ಲಿ ಮೋಟೋ G42 ಬಿಡುಗಡೆ: ರೆಡ್ಮಿ, ಪೋಕೋ ಫೋನ್​ಗೆ ಶುರುವಾಯ್ತು ನಡುಕ
Image
Asus ROG Phone 6: ಏಸಸ್ ರಾಗ್ ಫೋನ್ 6, 6 ಪ್ರೊ ಬಿಡುಗಡೆಗೆ ಡೇಟ್ ಫಿಕ್ಸ್: ಕಾದು ಕುಳಿತಿದ್ದಾರೆ ಟೆಕ್ ಪ್ರಿಯರು
Image
Arnav Sivram: 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಕಲಿತ 13 ವರ್ಷದ ತಮಿಳುನಾಡಿನ ಬಾಲಕ ಅರ್ನವ್

Infinix Note 12 5G: ಬಜೆಟ್ ಬೆಲೆಯ ಸ್ಮಾರ್ಟ್​​ಫೋನ್ ಕಿಂಗ್ ಇನ್ಫಿನಿಕ್ಸ್​ನಿಂದ ನೋಟ್‌ 12 5G ಬಿಡುಗಡೆಗೆ ಸಿದ್ಧತೆ

ಶವೋಮಿ 12S ಪ್ರೊ:

ಶವೋಮಿ 12S ಪ್ರೊ ಬೇಸ್ ಮಾಡೆಲ್‌ 8GB RAM + 128GB ಬೆಲೆ CNY 4,699, ಭಾರತದಲ್ಲಿ ಅಂದಾಜು 55,400 ರೂ., ಈ ಸ್ಮಾರ್ಟ್‌ಫೋನ್‌ 6.73 ಇಂಚಿನ 2K ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದುಕೂಡ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX707 ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಜೊತೆಗೆ 4,600mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 120W ವೈರ್ಡ್, 50W ವೈರ್‌ಲೆಸ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಶವೋಮಿ 12S ಅಲ್ಟ್ರಾ:

ಶವೋಮಿ 12S ಅಲ್ಟ್ರಾ ಸ್ಮಾರ್ಟ್‌ಫೋನ್‌ ಬೆಲೆ 8GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ CNY 5,999, ಭಾರತದಲ್ಲಿ ಅಂದಾಜು 70,700 ರೂ. ಈ ಸ್ಮಾರ್ಟ್‌ಫೋನ್‌ 6.73-ಇಂಚಿನ 2K ಅಮೋಲೆಡ್‌ ಮೈಕ್ರೋ-ಕರ್ವ್‌ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದರಲ್ಲಿ ಕೂಡ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 4,860mAh ಸಾಮರ್ಥ್ಯದ ಬ್ಯಾಟರಿ, 67W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವಾಯರ್‌ಲೆಸ್‌ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಶವೋಮಿ 12 ಪ್ರೊ ಡೈಮೆನ್ಸಿಟಿ:

ಶವೋಮಿ 12 ಪ್ರೊ ಡೈಮೆನ್ಸಿಟಿ ಎಡಿಷನ್‌ ಆವೃತ್ತಿಯ 8GB + 128GB ಆಯ್ಕೆಗೆ CNY 3,999, ಭಾರತದಲ್ಲಿ ಸುಮಾರು 47,100 ರೂ. ಬೆಲೆಯನ್ನು ಹೊಂದಿದೆ. ಈ ಫೋನ್‌ ಶವೋಮಿ 12 ಪ್ರೊ ಮಾದರಿಯನ್ನೇ ಹೋಲುತ್ತದೆ. ಆದರೆ ಈ ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಪ್ರೈಮೆರಿ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಈ ಫೋನ್​ಗೆ 5,160mAh ಬ್ಯಾಟರಿಯನ್ನು ನೀಡಲಾಗಿದ್ದು, 67W ವೇಗದ ಚಾರ್ಜಿಂಗ್​ನೊಂದಿಗೆ ಬರುತ್ತದೆ.

OnePlus Nord 2T: 50MP ಕ್ಯಾಮೆರಾ, 80W ಫಾಸ್ಟ್ ಚಾರ್ಜರ್: ಒನ್​​ಪ್ಲಸ್ ನಾರ್ಡ್ 2T ಹೇಗಿದೆ?, ಖರೀದಿಸಬಹುದೇ?

Published On - 1:37 pm, Tue, 5 July 22

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ