Arnav Sivram: 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಕಲಿತ 13 ವರ್ಷದ ತಮಿಳುನಾಡಿನ ಬಾಲಕ ಅರ್ನವ್
13 ವರ್ಷ ಬಾಲಕ ಬರೋಬ್ಬರಿ 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಲಾಂಗ್ವೆಜ್‌ಗಳನ್ನು ಕಲಿತು ವಿಶೇಷ ಸಾಧನೆ ಮಾಡಿದ್ದಾರೆ. ಇವರ ಹೆಸರು ಅರ್ನವ್ ಶಿವರಾಮ್ (Arnav Sivram).
ಕಂಪ್ಯೂಟರ್ನಲ್ಲಿ (Computer) ಜಾವಾ, ಪೈಥಾನ್, ಸಿ, ಸಿ ++ ಹೀಗೆ ಅನೇಕ ರೀತಿಯ ಪ್ರೊಗ್ರಾಮ್ಗಳಿವೆ. ಇದನ್ನು ಕಲಿಯುವುದು ಅಷ್ಟೊಂದು ಸುಲಭವಲ್ಲ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳೇ ಈ ಪ್ರೊಗ್ರಾಮ್ಗಳನ್ನು ಕಲಿಯಲು ಹರಸಾಹಸ ಪಡುತ್ತಾರೆ. ಹೀಗಿರುವಾಗ ತಮಿಳುನಾಡಿನ (Tamil Nadu) 13 ವರ್ಷ ಬಾಲಕ ಬರೋಬ್ಬರಿ 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಲಾಂಗ್ವೆಜ್‌ಗಳನ್ನು ಕಲಿತು ವಿಶೇಷ ಸಾಧನೆ ಮಾಡಿದ್ದಾರೆ. ಇವರ ಹೆಸರು ಅರ್ನವ್ ಶಿವರಾಮ್ (Arnav Sivram). 13ನೇ ವಯಸ್ಸಿನಲ್ಲಿ 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಲಾಂಗ್ವೆಜ್‌ಗಳನ್ನು ಕಲಿತ ಕಿರಿಯ ವಯಸ್ಸಿನ ಬಾಲಕ ಎಂಬ ಸಾಧನೆ ಇವರು ಮಾಡಿದ್ದಾರೆ.
ಈ ಬಗ್ಗೆ ANI ಸುದ್ದಿ ಸಂಸ್ಥೆ ಟ್ವೀಟ್ ಮಾಡಿ ತಿಳಿಸಿದ್ದು, “ಮೂಲತಃ ತಮಿಳುನಾಡಿನ ಕೊಯಮತ್ತೂರಿನ ಅರ್ನವ್ ಶಿವರಾಮ್ 13 ನೇ ವಯಸ್ಸಿನಲ್ಲಿ 17 ಕಂಪ್ಯೂಟರ್ ಭಾಷೆಗಳನ್ನು ಕಲಿತ ಕಿರಿಯ ಮಕ್ಕಳಲ್ಲಿ ಒಬ್ಬರಾಗಿದ್ದಾರೆ,” ಎಂದು ಟ್ವೀಟ್ ಮಾಡಿದೆ. ಈ ಸಾಧನೆಯ ಕುರಿತು ANI ಯೊಂದಿಗೆ ಮಾತನಾಡಿದ 13 ವರ್ಷದ ಬಾಲಕ, “ನಾನು 4 ನೇ ತರಗತಿಯಲ್ಲಿದ್ದಾಗ ಕಂಪ್ಯೂಟರ್ ಕಲಿಯಲು ಪ್ರಾರಂಭಿಸಿದೆ. ನಾನು ಜಾವಾ ಮತ್ತು ಪೈಥಾನ್ ಸೇರಿದಂತೆ 17 ಪ್ರೋಗ್ರಾಮಿಂಗ್ ಭಾಷೆಗಳನ್ನು ಕಲಿತಿದ್ದೇನೆ”.
Moto G42: ಭಾರತದಲ್ಲಿಂದು ಬಹುನಿರೀಕ್ಷಿತ ಮೋಟೋ G42 ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಎಷ್ಟು?
“13 ನೇ ವಯಸ್ಸಿನಲ್ಲಿ 17 ಕಂಪ್ಯೂಟರ್ ಲಾಂಗ್ವೆಜ್‌ಗಳನ್ನು ಕಲಿತಿದ್ದೇನೆ. ಕಡಿಮೆ ಹೂಡಿಕೆಯಲ್ಲಿ ಆಟೊ-ಪೈಲಟ್‌ಗಾಗಿ ಕೃತಕ ಬುದ್ಧಿಮತ್ತೆಯನ್ನು ತಯಾರಿಸಲು ಯೋಜಿಸುತ್ತಿದ್ದೇನೆ,” ಎಂದು ಅರ್ನವ್ ಹೇಳಿಕೊಂಡಿದ್ದಾನೆ.
Tamil Nadu | Coimbatore’s Arnav Sivram becomes one of the youngest children to have learnt 17 computer languages at the age of 13
I started learning computers when I was in 4th grade. I have learnt 17 programming languages including Java & Python, he said pic.twitter.com/FTehgFHrBt
— ANI (@ANI) July 2, 2022
ಕೆಲವು ಜನಪ್ರಿಯ ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಜಾವಾ, ಪೈಥಾನ್, ಸಿ ++, ಡಾರ್ಟ್ ಮುಖ್ಯವಾದವು. ಇಂದಿನ ಯುಗದಲ್ಲಿ ಡಿಜಿಟಲೀಕರಣ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಗಳ ಬಳಕೆ ಹೆಚ್ಚುತ್ತಿದ್ದು ಇವುಗಳನ್ನು ಕಲಿತುಗೊಂಡರೆ ಸಾಕಷ್ಟು ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ಜಾವಾ ಪ್ರೋಗ್ರಾಮಿಂಗ್ ಒಂದು ಭಾಷೆ ಮತ್ತು ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು 1995 ರಲ್ಲಿ ಸನ್ ಮೈಕ್ರೋಸಿಸ್ಟಮ್ಸ್‌ನಿಂದ ಬಿಡುಗಡೆಯಾಯಿತು. ಇದು ಅನೇಕ ಸೇವೆಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿರ್ಮಿಸುವ ವಿಶ್ವಾಸಾರ್ಹ ವೇದಿಕೆಯಾಗಿದೆ. ಅದರಂತೆ java.com, ಭವಿಷ್ಯಕ್ಕಾಗಿ ವಿನ್ಯಾಸಗೊಳಿಸಲಾದ ಹೊಸ ಉತ್ಪನ್ನಗಳು ಮತ್ತು ಡಿಜಿಟಲ್ ಸೇವೆಗಳನ್ನು ಅವಲಂಬಿಸಿವೆ. ಅಂತೆಯೇ, ಪೈಥಾನ್ ಕೂಡ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು ಇದು ನಿಮಗೆ ಹೆಚ್ಚು ವೇಗವಾಗಿ ಕೆಲಸ ಮಾಡಲು ಮತ್ತು ನಿಮ್ಮ ಸಿಸ್ಟಮ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂಯೋಜಿಸಲು ಅನುವು ಮಾಡಿಕೊಡುತ್ತದೆ.
ಬರೋಬ್ಬರಿ 21000mAh ಬ್ಯಾಟರಿ ಫೋನ್ ಲಾಂಚ್: ಒಮ್ಮೆ ಚಾರ್ಜ್ ಫುಲ್ ಮಾಡಿದ್ರೆ 100 ದಿನ ನೋ ಟೆನ್ಶನ್
Published On - 11:04 am, Mon, 4 July 22