Moto G42: ಭಾರತದಲ್ಲಿಂದು ಬಹುನಿರೀಕ್ಷಿತ ಮೋಟೋ G42 ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಎಷ್ಟು?

ಮೋಟೋರೊಲ ಕಂಪನಿ ಹೊಸ ಫೋನೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮೋಟೋ ಜಿ42 (Moto G42) ಸ್ಮಾರ್ಟ್​​ಫೋನನ್ನು ಮೋಟೋರೊಲ ಕಂಪನಿ ಜುಲೈ 4 ಇಂದು ಭಾರತದಲ್ಲಿ ರಿಲೀಸ್ ಮಾಡುತ್ತಿದೆ.

Moto G42: ಭಾರತದಲ್ಲಿಂದು ಬಹುನಿರೀಕ್ಷಿತ ಮೋಟೋ G42 ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಎಷ್ಟು?
Moto G42
Follow us
| Updated By: Vinay Bhat

Updated on: Jul 04, 2022 | 6:45 AM

ಈ ಜುಲೈ ತಿಂಗಳಲ್ಲಿ ಭಾರತದಲ್ಲಿ ಸಾಲು ಸಾಲು ಸ್ಮಾರ್ಟ್​​ಫೋನ್​ಗಳು ಬಿಡುಗಡೆ ಆಗುವುದರಲ್ಲಿದೆ. ಸ್ಯಾಮ್​ಸಂಗ್, ಶವೋಮಿ (Xiaomi), ರಿಯಲ್ ಮಿ, ಒನ್​ಪ್ಲಸ್​, ಒಪ್ಪೋ ಹೀಗೆ ಅನೇಕ ಕಂಪನಿಗಳ ಮೊಬೈಲ್ ಮುಂದಿನ ತಿಂಗಳು ದೇಶದಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಒನ್​ಪ್ಲಸ್ ನಾರ್ಡ್ 2ಟಿ ರಿಲೀಸ್ ಆಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇದೀಗ ಮೋಟೋರೊಲ ಕಂಪನಿ ಕೂಡ ಹೊಸ ಫೋನೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ಕಳೆದ ತಿಂಗಳು ವಿದೇಶದಲ್ಲಿ ರಿಲೀಸ್ ಮಾಡಿ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದ ಮೋಟೋ ಜಿ42 (Moto G42) ಸ್ಮಾರ್ಟ್​​ಫೋನನ್ನು ಮೋಟೋರೊಲ ಕಂಪನಿ ಜುಲೈ 4 ಇಂದು ಭಾರತದಲ್ಲಿ ರಿಲೀಸ್ ಮಾಡುತ್ತಿದೆ. ಈ ಬಗ್ಗೆ ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಫ್ಲಿಪ್​ಕಾರ್ಟ್ (Flipkart)​​ ಟೀಸರ್ ಒಂದನ್ನು ಬಿಟ್ಟಿದ್ದು ಕೆಲ ಫೀಚರ್​ಗಳು ಕೂಡ ರಿವೀಲ್ ಆಗಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು ಎಂಬುದನ್ನು ನೋಡೋಣ.

  1. ಮೋಟೋ G42 ಸ್ಮಾರ್ಟ್‌ಫೋನ್‌ 6.4 ಇಂಚಿನ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಿಂದ ಕೂಡಿದೆ.
  2. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್‌ 12 ನ ಇತ್ತೀಚಿನ ಆವೃತ್ತಿಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
  3. ಇದು 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಲಭ್ಯವಾಗಲಿದೆ.
  4. ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 20W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಒಟ್ಟಾರೆ ಬ್ಯಾಟರಿ ಕಾರ್ಯಕ್ಷಮತೆಯಲ್ಲಿ 20 ಪ್ರತಿಶತದಷ್ಟು ವರ್ಧಕವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.
  5. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಅನ್ನು ಹೊಂದಿದೆ.
  6. ಇದು ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿಯೊಂದಿಗೆ ಬರುತ್ತಿರುವುದು ವಿಶೇಷ. ಜೊತೆಗೆ ಲೋ ಲೈಟ್‌ ಸ್ಟೇಟಸ್‌ನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಲು ನೈಟ್ ವಿಷನ್ ಮೋಡ್ ಅನ್ನು ಒಳಗೊಂಡಿದೆ.
  7. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ ಯನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡಾಲ್ಬಿ ಅಟ್ಮೋಸ್‌ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.
  8. ಮೋಟೋ G42 ಫೋನ್‌ ಬೆಲೆ ಭಾರತದಲ್ಲಿ ಎಷ್ಟೆಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ 20,000 ರೂ. ಒಳಗೆ ಮಾರಾಟ ಕಾಣಲಿದೆ ಎಂದು ಹೇಳಲಾಗಿದೆ.

ಬರೋಬ್ಬರಿ 21000mAh ಬ್ಯಾಟರಿ ಫೋನ್ ಲಾಂಚ್: ಒಮ್ಮೆ ಚಾರ್ಜ್ ಫುಲ್ ಮಾಡಿದ್ರೆ 100 ದಿನ ನೋ ಟೆನ್ಶನ್