Asus ROG Phone 6: ಏಸಸ್ ರಾಗ್ ಫೋನ್ 6, 6 ಪ್ರೊ ಬಿಡುಗಡೆಗೆ ಡೇಟ್ ಫಿಕ್ಸ್: ಕಾದು ಕುಳಿತಿದ್ದಾರೆ ಟೆಕ್ ಪ್ರಿಯರು
Asus ROG Phone 6 Pro: ಏಸಸ್ ಇದೀಗ ಹೊಸದಾಗಿ ರಾಗ್ ಫೋನ್ 6 ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಒಟ್ಟು ಎರಡು ಫೋನ್ಗಳಿದ್ದು ಏಸಸ್ ರಾಗ್ ಫೋನ್ 6 ಮತ್ತು ರಾಗ್ ಫೋನ್ 6 ಪ್ರೊ ಅನ್ನು ದೇ ಜುಲೈ 5 ರಂದು ದೇಶದಲ್ಲಿ ಅನಾವರಣ ಮಾಡಲಿದೆ.
ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಏಸಸ್ (Asus) ಸದ್ಯ ಹೊಸ ಮೊಬೈಲ್ನೊಂದಿಗೆ ಮತ್ತೆ ಬಂದಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್ಫೋನ್ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇದೀಗ ಹೊಸದಾಗಿ ರಾಗ್ ಫೋನ್ 6 ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಒಟ್ಟು ಎರಡು ಫೋನ್ಗಳಿದ್ದು ಏಸಸ್ ರಾಗ್ ಫೋನ್ 6 ಮತ್ತು ರಾಗ್ ಫೋನ್ 6 ಪ್ರೊ (Asus ROG Phone 6 and ROG Phone 6 Pro) ಅನ್ನು ದೇ ಜುಲೈ 5 ರಂದು ದೇಶದಲ್ಲಿ ಅನಾವರಣ ಮಾಡಲಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು (Smartphone) 5G ಬೆಂಬಲ ಪಡೆದುಕೊಂಡಿದ್ದು ಏಸಸ್ ರಾಗ್ ಫೋನ್ 5 ಸರಣಿಯ ಮುಂದಿನ ಆವೃತ್ತಿಯಾಗಿದೆ. ಅಚ್ಚರಿಗೊಳ್ಳುವಂತಹ ಫೀಚರ್ಗಳು ಈ ಹೊಸ ಫೋನ್ನಲ್ಲಿದ್ದು, ಟೆಕ್ ಪ್ರಿಯರಂತು ಕಾದುಕುಳಿತಿದ್ದಾರೆ.
ಏನು ಹೈಲೇಟ್?:
ಏಸಸ್ ROG ಫೋನ್ 6 ಮತ್ತು ROG ಫೋನ್ 6 ಪ್ರೊ ಈ ಎರಡು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ಇನ್ನೂ ಹೊರ ಹಾಕಿಲ್ಲ. ಆದರೆ, ROG ಫೋನ್ 6 ನಲ್ಲಿ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ಅನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರೊಸೆಸರ್ನಲ್ಲಿ ಏಸಸ್ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ.
Arnav Sivram: 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಕಲಿತ 13 ವರ್ಷದ ತಮಿಳುನಾಡಿನ ಬಾಲಕ ಅರ್ನವ್
ಏಸಸ್ ROG ಫೋನ್ 6 1,080×2,448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಈ ಡಿಸ್‌ಪ್ಲೇ ಸ್ಯಾಮ್‌ಸಂಗ್ ಅಮೋಲೆಡ್ ಡಿಸ್‌ಪ್ಲೇ ಆಗಿದ್ದು, 165Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿವೆ. ಇದಲ್ಲದೆ 1ms ರೆಸ್ಪಾನ್ಸ್ ಟೈಂ, 24ms ಟಚ್ ಲೇಟೆನ್ಸಿ, HDR10+ ಬೆಂಬಲ ಮತ್ತು 1200 ವರೆಗೆ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆಯಂತೆ. ಇದಲ್ಲದೆ ಈ ಎರಡೂ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಪಡೆದುಕೊಂಡಿವೆ.
ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ಬಲವನ್ನು ಪಡೆದುಕೊಂಡಿರುವುದು ಖಚಿತವಾಗಿದೆ. 64GB RAM ಮತ್ತು 1TB ಸ್ಟೋರೇಜ್ ಅನ್ನು ಹೊಂದಿವೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರುವ ಸಾಧ್ಯತೆ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೋನಿ IMX686 ಸೆನ್ಸಾರ್, ಎರಡನೇ ಕ್ಯಾಮೆರಾ 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಪಡೆದಿದೆ. ಇದಲ್ಲದೆ 24 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಇದರಲಿದೆ ಎಂಬ ಮಾತಿದೆ.
ಏಸಸ್ ROG ಫೋನ್ 6 ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಭಾರತದಲ್ಲಿ ಏಸಸ್ ROG ಫೋನ್ 6 ಮತ್ತು ಏಸಸ್ ROG ಫೋನ್ 6 ಪ್ರೊ ಸ್ಮಾರ್ಟ್‌ಫೋನ್ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಇದು ಜುಲೈ 5 ರಂದು ಸಂಜೆ 5:30ಕ್ಕೆ ಬಿಡುಗಡೆ ಆಗಲಿದೆ.
Moto G42: ಭಾರತದಲ್ಲಿಂದು ಬಹುನಿರೀಕ್ಷಿತ ಮೋಟೋ G42 ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?