ಭಾರತಕ್ಕೆ ಬಂದಿದೆ ಒನ್ಪ್ಲಸ್ 50 ಇಂಚಿನ Y1S ಪ್ರೊ ಟಿವಿ: ಫೀಚರ್ಸ್ ನೋಡಿದ್ರೆ ಫಿದಾ ಆಗ್ತೀರಾ
ಒನ್ ಪ್ಲಸ್ (OnePlus) ಕಂಪನಿ ಇದೀಗ ದೇಶದಲ್ಲಿ ಹೊಸ ಒನ್ಪ್ಲಸ್ ಟಿವಿ 50 ಇಂಚಿನ ವೈಟೆಸ್ ಪ್ರೊ (OnePlus TV 50 Y1S Pro) ಅನ್ನು ಲಾಂಚ್ ಮಾಡಿದೆ. ಹೊಸ ಟಿವಿ ಖರೀದಿಸುವ ಪ್ಲಾನ್ನಲ್ಲಿ ನೀವಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಕೇವಲ ಸ್ಮಾರ್ಟ್ಫೋನ್ಗಳಿಂದ ಮಾತ್ರವಲ್ಲದೆ ಸ್ಮಾರ್ಟ್ ಟಿವಿಗಳಿಂದಲೂ ಯಶಸ್ಸು ಸಾಧಿಸಿರುವ ಪ್ರಸಿದ್ಧ ಒನ್ ಪ್ಲಸ್ (OnePlus) ಕಂಪನಿ ಇದೀಗ ದೇಶದಲ್ಲಿ ಹೊಸ ಒನ್ಪ್ಲಸ್ ಟಿವಿ 50 ಇಂಚಿನ ವೈ1ಎಸ್ ಪ್ರೊ (OnePlus TV 50 Y1S Pro) ಅನ್ನು ಲಾಂಚ್ ಮಾಡಿದೆ. ಹೊಸ ಟಿವಿ ಖರೀದಿಸುವ ಪ್ಲಾನ್ನಲ್ಲಿ ನೀವಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ. ಮಧ್ಯಮ ಬೆಲೆಯ ಟಿವಿ ಇದು ಆಗಿದ್ದು ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಜೆಲ್-ಲೆಸ್ ವಿನ್ಯಾಸ, 4K ಡಿಸ್‌ಪ್ಲೇ, ಮೀಡಿಯಾ ಟೆಕ್ ಪ್ರೊಸೆಸರ್ ಮತ್ತು ಡಾಲ್ಬಿ ಆಡಿಯೊದಿಂದ ಟ್ಯೂನ್ ಮಾಡಲಾದ 24W ಸ್ಪೀಕರ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊತ್ತು ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಕಾಲಿಟ್ಟಿದೆ.
ಒನ್ ಪ್ಲಸ್ ಟಿವಿ 50 Y1S ಪ್ರೊ HDR10+ ಬೆಂಬಲದೊಂದಿಗೆ 50-ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಇದು ರಿಯಲ್ ಟೈಂನಲ್ಲಿ ಇಮೇಜ್ ಗುಣಮಟ್ಟವನ್ನು ಹೆಚ್ಚಿಸಲು ಗಾಮಾ ಎಂಜಿನ್ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ HDR10+, HDR10, ಮತ್ತು HLG ಫಾರ್ಮ್ಯಾಟ್ ಬೆಂಬಲ ಪಡೆದುಕೊಂಡಿದೆ. ಈ ಟಿವಿಯು ಪ್ರೀಮಿಯಂ ಮತ್ತು ಸೊಗಸಾದ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿದ್ದು, 24Wನ ಸಂಯೋಜಿತ ಆಡಿಯೊ ಔಟ್‌ಪುಟ್ ಅನ್ನು ನೀಡುವ ಎರಡು ಫುಲ್-ರೇಂಜ್ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.
Moto G42: ಭಾರತದಲ್ಲಿ ಮೋಟೋ G42 ಬಿಡುಗಡೆ: ರೆಡ್ಮಿ, ಪೋಕೋ ಫೋನ್ಗೆ ಶುರುವಾಯ್ತು ನಡುಕ
ಇನ್ನು ಈ ಹೊಸ ಸ್ಮಾರ್ಟ್ ಟಿವಿಯನ್ನು ಹೋಮ್ ಎಂಟರ್ಟೈನ್ಮೆಂಟ್ ಹಬ್ ಆಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಮಕ್ಕಳಿಗಾಗಿ ಕಿಡ್ಸ್ ಮೋಡ್ ಎಂಬ ಆಯ್ಕೆ ಕೂಡ ಇದೆ. ಜೊತೆಗೆ ಇದು ಒನ್ ಪ್ಲಸ್ ಕನೆಕ್ಟ್ 2.0 ತಂತ್ರಜ್ಞಾನವನ್ನು ಒಳಗೊಂಡಿದೆ. ಅಲ್ಲದೆ ಒನ್ ಪ್ಲಸ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೇರವಾಗಿ ಟಿವಿಗೆ ಕನೆಕ್ಟ್ ಮಾಡುವುದಕ್ಕೆ ಅನುಮತಿಸುತ್ತದೆ.
ಒನ್ ಪ್ಲಸ್ TV 50 Y1S ಪ್ರೊ ಒಂದು ಗೇಮ್ ಮೋಡ್‌ನೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ HDMI ಮೂಲಕ ಗೇಮಿಂಗ್ ಕನ್ಸೋಲ್ ಅನ್ನು ಕನೆಕ್ಟ್ ಮಾಡುವುದಕ್ಕೆ ಮತ್ತು ಸ್ಪೀಡ್ ರೆಸ್ಪಾನ್ ಮತ್ತು ಸುಗಮ ಗೇಮಿಂಗ್ ಅನುಭವವನ್ನು ಸಕ್ರಿಯಗೊಳಿಸಲು ಆಟೋ ಲೋ ಲೇಟೆನ್ಸಿ ಮೋಡ್ (ALLM) ಅನ್ನು ಸಕ್ರಿಯಗೊಳಿಸುತ್ತದೆ. ಇದರೊಂದಿಗೆ ಮಕ್ಕಳು ಆರೋಗ್ಯಕರ ವಿಷಯವನ್ನು ಆನಂದಿಸಲು ಅನುವು ಮಾಡಿಕೊಡುವ ಕಿಡ್ಸ್ ಮೋಡ್ ಸಹ ನೀಡಲಾಗಿದೆ. ಅಲ್ಲದೆ ಅಂತರ್ನಿರ್ಮಿತ ಗೂಗಲ್ ಅಸಿಸ್ಟೆಂಡ್, Google Chromecast ಬೆಂಬಲ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಪೂರ್ವ-ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.
ಒನ್ ಪ್ಲಸ್ TV 50 Y1S ಪ್ರೊ ಸ್ಮಾರ್ಟ್‌ಟಿವಿ ಬೆಲೆ 32,999 ರೂ. ಆಗಿದ್ದು, ಅಮೆಜಾನ್ ಮತ್ತು ಒನ್ ಪ್ಲಸ್.ಇನ್ ಮೂಲಕ ಆನ್‌ಲೈನ್‌ನಲ್ಲಿ ಜುಲೈ 7 ರಿಂದ ಖರೀದಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಒನ್ ಪ್ಲಸ್ ಎಕ್ಸ್‌ಪಿರಿಯನ್ಸ್ ಸ್ಟೋರ್‌ಗಳು, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಇತರ ಆಫ್‌ಲೈನ್ ಪಾಲುದಾರ ಅಂಗಡಿಗಳ ಮೂಲಕ ಲಭ್ಯವಿರುತ್ತದೆ.
Asus ROG Phone 6: ಏಸಸ್ ರಾಗ್ ಫೋನ್ 6, 6 ಪ್ರೊ ಬಿಡುಗಡೆಗೆ ಡೇಟ್ ಫಿಕ್ಸ್: ಕಾದು ಕುಳಿತಿದ್ದಾರೆ ಟೆಕ್ ಪ್ರಿಯರು