Sign In

By signing in or creating an account, you agree with Associated Broadcasting Company's Terms & Conditions and Privacy Policy.

OnePlus TV 43 Y1S Pro: ಹೊಸ ಟಿವಿ ಖರೀದಿಸುವ ಪ್ಲಾನ್​​ನಲ್ಲಿದ್ದೀರಾ?: ಇದೀಗ ಸೇಲ್ ಕಾಣುತ್ತಿದೆ ಈ ಬೊಂಬಾಟ್ ಸ್ಮಾರ್ಟ್​ ಟಿವಿ

ಒನ್​ ಪ್ಲಸ್ ಬಿಡುಗಡೆ ಮಾಡಿದ್ದ ಹೊಸ ಟಿವಿಯ ಹೆಸರು ಒನ್‌ ಪ್ಲಸ್‌ ಟಿವಿ Y1S ಪ್ರೊ (OnePlus TV 43 Y1S Pro). ಇಂದಿನಿಂದ ಈ 43-ಇಂಚಿನ ಹೊಸ ಸ್ಮಾರ್ಟ್​ ಟಿವಿ ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್‌ (Amazon) ಮತ್ತು ಒನ್‌ ಪ್ಲಸ್‌.ಇನ್‌ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಲು ಸಿಗುತ್ತಿದೆ.

OnePlus TV 43 Y1S Pro: ಹೊಸ ಟಿವಿ ಖರೀದಿಸುವ ಪ್ಲಾನ್​​ನಲ್ಲಿದ್ದೀರಾ?: ಇದೀಗ ಸೇಲ್ ಕಾಣುತ್ತಿದೆ ಈ ಬೊಂಬಾಟ್ ಸ್ಮಾರ್ಟ್​ ಟಿವಿ
OnePlus TV 43 Y1S Pro
Follow us
TV9 Web
| Updated By: Vinay Bhat

Updated on: Apr 11, 2022 | 6:35 AM

ಭಾರತದ ಮಾರುಕಟ್ಟೆಯಲ್ಲಿ ಕೇವಲ ಸ್ಮಾರ್ಟ್​ಫೋನ್​ಗಳಿಂದ ಮಾತ್ರವಲ್ಲದೆ ಸ್ಮಾರ್ಟ್​ ಟಿವಿಗಳಿಂದಲೂ ಯಶಸ್ಸು ಸಾಧಿಸಿರುವ ಪ್ರಸಿದ್ಧ ಒನ್​​ ಪ್ಲಸ್ (OnePlus) ಕಂಪನಿ ಇತ್ತೀಚೆಗಷ್ಟೆ ಹೊಸ ಸ್ಮಾರ್ಟ್‌ಟಿವಿಯನ್ನು ದೇಶದಲ್ಲಿ ಅನಾವರಣ ಮಾಡಿತ್ತು. ಹೊಸ ಟಿವಿ ಖರೀದಿಸುವ ಪ್ಲಾನ್​ನಲ್ಲಿ ನೀವಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ. ಒನ್​ ಪ್ಲಸ್ ಬಿಡುಗಡೆ ಮಾಡಿದ್ದ ಹೊಸ ಟಿವಿಯ ಹೆಸರು ಒನ್‌ ಪ್ಲಸ್‌ ಟಿವಿ Y1S ಪ್ರೊ (OnePlus TV 43 Y1S Pro). ಇಂದಿನಿಂದ ಈ 43-ಇಂಚಿನ ಹೊಸ ಸ್ಮಾರ್ಟ್​ ಟಿವಿ ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್‌ (Amazon) ಮತ್ತು ಒನ್‌ ಪ್ಲಸ್‌.ಇನ್‌ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಲು ಸಿಗುತ್ತಿದೆ. ಬಜೆಟ್ ಬೆಲೆಯ ಟಿವಿ ಇದು ಆಗಿದ್ದು ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ಜೆಲ್-ಲೆಸ್ ವಿನ್ಯಾಸ, 4K ಡಿಸ್‌ಪ್ಲೇ, ಮೀಡಿಯಾ ಟೆಕ್ MT9216 ಪ್ರೊಸೆಸರ್ ಮತ್ತು ಡಾಲ್ಬಿ ಆಡಿಯೊದಿಂದ ಟ್ಯೂನ್ ಮಾಡಲಾದ 24W ಸ್ಪೀಕರ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊತ್ತು ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಕಾಲಿಟ್ಟಿದೆ.

ಒನ್‌ ಪ್ಲಸ್‌ ಟಿವಿ 43 Y1S ಪ್ರೊ 1840 x 2160 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು HDR10+ ಬೆಂಬಲದೊಂದಿಗೆ 43-ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಇದು ರಿಯಲ್‌ ಟೈಂನಲ್ಲಿ ಇಮೇಜ್‌ ಗುಣಮಟ್ಟವನ್ನು ಹೆಚ್ಚಿಸಲು ಗಾಮಾ ಎಂಜಿನ್ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ HDR10+, HDR10, ಮತ್ತು HLG ಫಾರ್ಮ್ಯಾಟ್ ಬೆಂಬಲ ಪಡೆದುಕೊಂಡಿದೆ. ಈ ಟಿವಿಯು ಪ್ರೀಮಿಯಂ ಮತ್ತು ಸೊಗಸಾದ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿದ್ದು, 24Wನ ಸಂಯೋಜಿತ ಆಡಿಯೊ ಔಟ್‌ಪುಟ್ ಅನ್ನು ನೀಡುವ ಎರಡು ಫುಲ್‌-ರೇಂಜ್‌ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.

ಇನ್ನು ಈ ಹೊಸ ಸ್ಮಾರ್ಟ್ ಟಿವಿಯನ್ನು ಹೋಮ್ ಎಂಟರ್ಟೈನ್ಮೆಂಟ್ ಹಬ್ ಆಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಮೀಡಿಯಾ ಟೆಕ್ MT9216 ಪ್ರೊಸೆಸರ್ ಜೊತೆಗೆ 2GB RAM ಮತ್ತು 8GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಆಂಡ್ರಾಯ್ಡ್ 11 ಟಿವಿ OS ಸಾಫ್ಟ್‌ವೇರ್ನಲ್ಲಿ ಸ್ಮಾರ್ಟ್‌ಟಿವಿ ಕೆಲಸ ಮಾಡಲಿದೆ. ಜೊತೆಗೆ ಇದು ಒನ್‌ ಪ್ಲಸ್‌ ಕನೆಕ್ಟ್ 2.0 ತಂತ್ರಜ್ಞಾನವನ್ನು ಒಳಗೊಂಡಿದೆ. ಅಲ್ಲದೆ ಒನ್‌ ಪ್ಲಸ್‌ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೇರವಾಗಿ ಟಿವಿಗೆ ಕನೆಕ್ಟ್‌ ಮಾಡುವುದಕ್ಕೆ ಅನುಮತಿಸುತ್ತದೆ.

ಇದಲ್ಲದೆ ಒನ್‌ ಪ್ಲಸ್‌ TV 43 Y1S ಪ್ರೊ ಒಂದು ಗೇಮ್ ಮೋಡ್‌ನೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ HDMI ಮೂಲಕ ಗೇಮಿಂಗ್ ಕನ್ಸೋಲ್ ಅನ್ನು ಕನೆಕ್ಟ್‌ ಮಾಡುವುದಕ್ಕೆ ಮತ್ತು ಸ್ಪೀಡ್‌ ರೆಸ್ಪಾನ್‌ ಮತ್ತು ಸುಗಮ ಗೇಮಿಂಗ್ ಅನುಭವವನ್ನು ಸಕ್ರಿಯಗೊಳಿಸಲು ಆಟೋ ಲೋ ಲೇಟೆನ್ಸಿ ಮೋಡ್ (ALLM) ಅನ್ನು ಸಕ್ರಿಯಗೊಳಿಸುತ್ತದೆ. ಇದರೊಂದಿಗೆ ಮಕ್ಕಳು ಆರೋಗ್ಯಕರ ವಿಷಯವನ್ನು ಆನಂದಿಸಲು ಅನುವು ಮಾಡಿಕೊಡುವ ಕಿಡ್ಸ್ ಮೋಡ್ ಸಹ ನೀಡಲಾಗಿದೆ.  ಅಲ್ಲದೆ ಅಂತರ್ನಿರ್ಮಿತ ಗೂಗಲ್ ಅಸಿಸ್ಟೆಂಡ್, Google Chromecast ಬೆಂಬಲ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಪೂರ್ವ-ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ

ಒನ್‌ ಪ್ಲಸ್‌ TV 43 Y1S ಪ್ರೊ ಸ್ಮಾರ್ಟ್‌ಟಿವಿ ಬೆಲೆ 29,999 ರೂ. ಆಗಿದ್ದು, ಅಮೆಜಾನ್‌ ಮತ್ತು ಒನ್‌ ಪ್ಲಸ್‌.ಇನ್‌ ಮೂಲಕ ಆನ್‌ಲೈನ್‌ನಲ್ಲಿ ಇಂದಿನಿಂದ ಖರೀದಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಒನ್‌ ಪ್ಲಸ್‌ ಎಕ್ಸ್‌ಪಿರಿಯನ್ಸ್‌ ಸ್ಟೋರ್‌ಗಳು, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಇತರ ಆಫ್‌ಲೈನ್ ಪಾಲುದಾರ ಅಂಗಡಿಗಳ ಮೂಲಕ ಲಭ್ಯವಿರುತ್ತದೆ. ಖರೀದಿಯ ಕೊಡುಗಡೆಯಾಗಿ SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 2,500 ರೂ.ಗಳ ತ್ವರಿತ ರಿಯಾಯಿತಿಯು ನಿಡಲಾಗಿದೆ.

Google: ಮುಸ್ಲಿಂ ಪ್ರಾರ್ಥನೆ ಆ್ಯಪ್​ಗಳನ್ನು ಪ್ಲೇ ಸ್ಟೋರ್​ನಿಂದ ಕಿತ್ತೆಸೆದ ಗೂಗಲ್

Galaxy A73: 108MP ಕ್ಯಾಮೆರಾದ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ A73 5G ಫೋನ್ ಖರೀದಿಸಬಹುದೇ?

ಅತಿಯಾದ ಮಾತೇ ಯತ್ನಾಳ್ ಪಾಲಿಗೆ ಕುತ್ತಾಯಿತು: ವಿಜಯಾನಂದ್ ಕಾಶಪ್ಪನವರ್
ಅತಿಯಾದ ಮಾತೇ ಯತ್ನಾಳ್ ಪಾಲಿಗೆ ಕುತ್ತಾಯಿತು: ವಿಜಯಾನಂದ್ ಕಾಶಪ್ಪನವರ್
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು