WhatsApp: ಫೈಲ್ ಶೇರ್ ಮಾಡುವಾಗ ಕಾಣಿಸುತ್ತೆ ಹೊಸ ಆಯ್ಕೆ: ವಾಟ್ಸ್ಆ್ಯಪ್ನಿಂದ ನೂತನ ಫೀಚರ್
WhatsApp New Feature: ಇದೀಗ ಮತ್ತೊಂದು ಹೊಸ ಫೀಚರ್ನೊಂದಿಗೆ ವಾಟ್ಸ್ಆ್ಯಪ್ ಬಂದಿದೆ. ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಫೈಲ್ ಶೇರಿಂಗ್ನಲ್ಲಿ ನೂತನ ಆಯ್ಕೆ ನೀಡಲು ಮುಂದಾಗಿದೆ.
ಮೆಟಾ ಒಡೆತನದ ವಾಟ್ಸ್ಆ್ಯಪ್ (WhatsApp) ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ಬಳಕೆದಾರರ ಮನಸ್ಥಿತಿಯನ್ನು ಅರ್ಥಹಿಸಿ ಅವರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಲೇ ಇದೆ. ಇನ್ನೂ ಸಾಲು ಸಾಲು ಅಪ್ಡೇಟ್ಗಳು ಬರಲು ತಯಾರಾಗಿದೆ. ಮೊನ್ನೆಯಷ್ಟೆ ವಾಟ್ಸ್ಆ್ಯಪ್ನಲ್ಲಿ ಬರೋಬ್ಬರಿ 2GB ವರೆಗೆ ಫೈಲ್ಗಳನ್ನು ಕಳುಹಿಸಲು ಅನುವು ಮಾಡಿಕೊಡುವ ಫೀಚರ್ ಪರಿಚಯಿಸುತ್ತೇವೆ ಎಂದು ಹೇಳಿತ್ತು. ಈ ಆಯ್ಕೆ ಆಂಡ್ರಾಯ್ಡ್ (Android) ಮತ್ತು ಐಒಸ್ (iOS) ಎರಡೂ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುತ್ತೇವೆ ಎಂದು ತಿಳಿಸಿತ್ತು. ಇದೀಗ ಮತ್ತೊಂದು ಹೊಸ ಫೀಚರ್ನೊಂದಿಗೆ ವಾಟ್ಸ್ಆ್ಯಪ್ ಬಂದಿದೆ. ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಫೈಲ್ ಶೇರಿಂಗ್ನಲ್ಲಿ ನೂತನ ಆಯ್ಕೆ ನೀಡಲು ಮುಂದಾಗಿದೆ.
ಈ ಹೊಸ ಫೀಚರ್ಗಳಿಂದ ವಾಟ್ಸ್ಆ್ಯಪ್ನಲ್ಲಿ ನೀವು ಡೌನ್ಲೋಡ್ ಮಾಡಲು ಕೊಟ್ಟ ಫೈಲ್ ಪೂರ್ತಿ ಡೌನ್ಲೋಡ್ ಆಗಲು ಇನ್ನೆಷ್ಟು ಸಮಯ ಬೇಕು ಎಂಬುದನ್ನು ತೋರಿಸುತ್ತದೆ. ಜೊತೆಗೆ ಫೈಲ್ ಅಪ್ಲೋಡ್ ಆಗಲು ಎಷ್ಟು ನಿಮಿಷ ಬೇಕು ಎಂಬ ಸಮಯವನ್ನು ನಿಮಗೆ ಕಾಣಿಸುವಂತೆ ಮಾಡುತ್ತದೆ. ಸದ್ಯಕ್ಕೆ ಈ ಆಯ್ಕೆ ಬೇಟಾ ಆವೃತ್ತಿಯಲ್ಲಿ ಲಭ್ಯವಿದ್ದು ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಬಳಕೆದಾರರಿಗೆ ಸಿಗಲಿದೆ ಎಂದು ವರದಿಯಾಗಿದೆ. ವಾಟ್ಸ್ಆ್ಯಪ್ ಬೀಟಾಇನ್ಫೋ ಮಾಡಿರುವ ವರದಿಯ ಪ್ರಕಾರ, ನೀವು ಒಂದು ಫೈಲ್ ಅನ್ನು ಇನ್ನೊಬ್ಬರಿಗೆ ಶೇರ್ ಮಾಡಿದರೆ ಅದು ಅವರಿಗೆ ಸೆಂಡ್ ಆಗಲು ಎಷ್ಟು ಸಮಯ ಬೇಕು ಎಂಬುದನ್ನು ಡಿಸ್ ಪ್ಲೇ ಮಾಡುತ್ತದಂತೆ. ಸದ್ಯಕ್ಕೆ ಈ ಆಯ್ಕೆ ಬೇಟಾ ವರ್ಷನಲ್ಲಿ ಪರೀಕ್ಷಾ ಹಂತದಲ್ಲಿದ್ದು, ಇದು ಯಶಸ್ವಿಯಾದ ಬೆನ್ನಲ್ಲೇ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ.
ಈಗಾಗಲೇ ವಾಟ್ಸ್ಆ್ಯಪ್ ತನ್ನ ಮುಂಬರುವ ಫೀಚರ್ಗಳ ಬಗ್ಗೆ ಒಂದೊಂದೆ ಮಾಹಿತಿ ಹೊರಹಾಕುತ್ತಿದೆ. ಮೊನ್ನೆಯಷ್ಟೆ ವಾಟ್ಸ್ಆ್ಯಪ್ನಲ್ಲಿ ಬರೋಬ್ಬರಿ 2GB ವರೆಗೆ ಫೈಲ್ಗಳನ್ನು ಕಳುಹಿಸಲು ಅನುವು ಮಾಡಿಕೊಡುವ ಫೀಚರ್ ಪರಿಚಯಿಸುತ್ತೇವೆ ಎಂದು ಹೇಳಿತ್ತು. ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಸ್ ಎರಡೂ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುತ್ತೇವೆ ಎಂದು ತಿಳಿಸಿತ್ತು. ಇದರ ಜೊತೆಗೆ ತನ್ನ ವಾಯ್ಸ್ ಮೆಸೇಜ್ ಎಕೋ ಸಿಸ್ಟಂನಲ್ಲಿ ಅನೇಕ ಫೀಚರ್ಗಳನ್ನು ಘೋಷಣೆ ಮಾಡಿದೆ. ಬಳಕೆದಾರರಿಗೆ ಇನ್ನೂ ಹೆಚ್ಚು ಅನುಕೂಲವಾಗುವಂತೆ ಹೊಸ ಫೀಚರ್ಸ್ ಪರಿಚಯಿಸುತ್ತಿದ್ದು, ಇದುಕೂಡ ಆಂಡ್ರಾಯ್ಡ್, ಐಒಎಸ್ ಬಳಕೆದಾರರಿಗೆ ಏಕಕಾಲದಲ್ಲಿ ಲಭ್ಯವಾಗಲಿದೆ.
ಅಂತೆಯೆ ಔಟ್ ಆಪ್ ಚಾಟ್ ಪ್ಲೇ ಬ್ಯಾಕ್ ಫೀಚರ್ ಕೂಡ ಸದ್ಯದಲ್ಲೇ ವಾಟ್ಸ್ಆ್ಯಪ್ ಬಳಕೆದಾರರಿಗೆ ಲಭ್ಯವಾಗಲಿದೆ. ಇದು ವಾಯ್ಸ್ ಮೆಸೇಜ್ ಅನ್ನು ಚಾಟ್ ಹೊರಗಡೆಯೂ ಕೇಳಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ನೀವು ಮಲ್ಟಿ ಟಾಸ್ಕ್ ಮಾಡಬಹುದು. ಇದರ ಜೊತೆಗೆ ವಾಯ್ಸ್ ಮೆಸೇಜ್ ಅನ್ನು ರೆಕಾರ್ಡ್ ಮಾಡುವಾಗ, ನೀವು ರೆಕಾರ್ಡಿಂಗ್ ಅನ್ನು ವಿರಾಮಗೊಳಿಸಬಹುದು. ಮತ್ತೇ ಬೇಕು ಎನಿಸಿದಾಗ ಪುನರಾರಂಭಿಸಬಹುದು. ಅಷ್ಟೇ ಅಲ್ಲದೆ ನಿಮ್ಮ ವಾಯ್ಸ್ ಮೆಸೇಜ್‌ಗಳನ್ನು ಸೆಂಡ್ ಮಾಡುವುದಕ್ಕು ಮೊದಲೇ ನೀವೊಮ್ಮೆ ಕೇಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ.
AC: ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ ಎಸಿ: ಈ ಬೇಸಿಗೆಗೆ ಇದುವೇ ಉತ್ತಮ ಆಯ್ಕೆ