Google: ಮುಸ್ಲಿಂ ಪ್ರಾರ್ಥನೆ ಆ್ಯಪ್ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಿದ ಗೂಗಲ್
Google Play Store: ಇದೀಗ ಬಳಕೆದಾರರ ಸುರಕ್ಷತೆಗಾಗಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಅನುಮಾನಸ್ಪಾದವಾಗಿ ಕಾಣುವ ಅಪ್ಲಿಕೇಶನ್‌ಗಳನ್ನು ರಿಮೂವ್ ಮಾಡಿದೆ. ಈ ಬಾರಿ ಗೂಗಲ್ ತೆಗೆದು ಹಾಕಿರುವುದು ಸುಮಾರು ಒಂದು ಡಜನ್ ಅಪ್ಲಿಕೇಶನ್‌ಗಳನ್ನು.
ಇಂದು ಗೂಗಲ್ (Google) ಪ್ಲೇ ಸ್ಟೋರ್‌ನಲ್ಲಿ ನಿಮಗೆ ಯಾವ ರೀತಿಯ ಆ್ಯಪ್ ಬೇಕು ಅದೆಲ್ಲ ಸಿಗುತ್ತದೆ. ಆ್ಯಪ್ಗಳನ್ನು ಕ್ರಿಯೆಟ್ ಮಾಡಿ ಪ್ಲೇ ಸ್ಟೋರ್ ಒಳಗೆ ಹಂಚಿಕೊಳ್ಳಲು ಯಾವುದೇ ದೊಡ್ಡ ಮಟ್ಟದ ಸೆಕ್ಯುರಿಟಿ ಇಲ್ಲದ ಕಾರಣ ಇದರಲ್ಲಿ ರಾಶಿ ರಾಶಿ ಆ್ಯಪ್ಗಳು ತುಂಬಿಕೊಂಡಿವೆ. ಈ ಪೈಕಿ ಅದೆಷ್ಟೋ ಫೇಕ್ ಆ್ಯಪ್ಗಳು (Fake App) ಕೂಡ ಇದರಲ್ಲಿರುತ್ತದೆ. ಅವುಗಳನ್ನು ಗೊತ್ತಿಲ್ಲದೆ ಅನೇಕರು ಇನ್‌ಸ್ಟಾಲ್ ಮಾಡಿರುತ್ತಾರೆ. ಇಂತಹ ನಕಲಿ ಆ್ಯಪ್ಗಳು ಬಳಕೆದಾರರ ಮಾಹಿತಿ ಕದಿಯುವಲ್ಲಿ ಎತ್ತಿದ ಕೈ. ನಿಮ್ಮ ಫೋನ್ನಲ್ಲಿದ್ದ ಫೋಟೋ, ವಿಡಿಯೋ, ಬ್ಯಾಂಕ್ಗೆ ಸಂಬಂಧಿಸಿದ ಮಾಹಿತಿ ಹೀಗೆ ಎಲ್ಲವನ್ನು ಫೇಕ್ ಆ್ಯಪ್ಗಳು ದೋಚುತ್ತಿದೆ. ಇದೀಗ ಬಳಕೆದಾರರ ಸುರಕ್ಷತೆಗಾಗಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ (Google Play Store) ಅನುಮಾನಸ್ಪಾದವಾಗಿ ಕಾಣುವ ಅಪ್ಲಿಕೇಶನ್‌ಗಳನ್ನು ರಿಮೂವ್ ಮಾಡಿದೆ. ಈ ಬಾರಿ ಗೂಗಲ್ ತೆಗೆದು ಹಾಕಿರುವುದು ಸುಮಾರು ಒಂದು ಡಜನ್ ಅಪ್ಲಿಕೇಶನ್‌ಗಳನ್ನು.
ಹೌದು, ಬಳಕೆದಾರರ ಫೋನ್ ಸಂಖ್ಯೆಗಳು ಮತ್ತು ಇತರ ಪ್ರಮುಖ ಡೇಟಾವನ್ನು ರಹಸ್ಯವಾಗಿ ಸಂಗ್ರಹಿಸುತ್ತಿದ್ದ ಹತ್ತಾರು ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಲ್ಲಿ ಗೂಗಲ್ ನಿಷೇಧಿಸಿದೆ. ಈ ನಿಷೇಧಿತ ಅಪ್ಲಿಕೇಶನ್ ಗಳಲ್ಲಿ 10 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾದ ಮುಸ್ಲಿಂ ಪ್ರಾರ್ಥನೆ ಅಪ್ಲಿಕೇಶನ್‌ಗಳು ಕೂಡ ಸೇರಿವೆ. ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರ ಫೋನ್‌ಗಳಿಂದ ಡೇಟಾವನ್ನು ಕದಿಯಲಾಗುತ್ತಿದ್ದ ಕಾರಣಕ್ಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಮೇಲೆ ಮುಸಲ್ಮಾನರ ಪ್ರಸಿದ್ಧ ಪ್ರಾರ್ಥನೆಯ ಆ್ಯಪ್ ಅನ್ನು ನಿಷೇಧಿಸಲಾಗಿದೆ.
ಪ್ಲೇ ಸ್ಟೋರ್ ನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳು ಕೆಲವೊಂದು ನೀತಿ, ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಅವುಗಳನ್ನು ಉಲ್ಲಂಘಿಸಿದಾಗ ಗೂಗಲ್ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ 10 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಆದ ಬಾರ್‌ಕೋಡ್ ಸ್ಕ್ಯಾನಿಂಗ್ ಅಪ್ಲಿಕೇಶನ್ ಮತ್ತು ಹೈವೇ ಸ್ಪೀಡ್ ಟ್ರ್ಯಾಪ್ ಡಿಟೆಕ್ಷನ್ ಅಪ್ಲಿಕೇಶನ್‌ಗಳು ಸೇರಿವೆ. ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಆ್ಯಪ್ ನಲ್ಲಿ ಡೇಟಾ-ಸ್ಕ್ರ್ಯಾಪಿಂಗ್ ಕೋಡ್ ಒಳಗೊಂಡಿರುವುದು ಕಂಡುಬಂದಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಈಗ ಗೂಗಲ್ ಪ್ಲೇ ಸ್ಟೋರ್ ನಿಂದ ನಿಷೇಧಿಸಲಾದ ಅಪ್ಲಿಕೇಶನ್‌ಗಳು ಬಳಕೆದಾರರ ನಿಖರವಾದ ಸ್ಥಳ ಮಾಹಿತಿ, ಇಮೇಲ್ ಮತ್ತು ಫೋನ್ ಸಂಖ್ಯೆಗಳು ಮತ್ತು ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಕಂಡುಬರುವ ಆಕ್ರಮಣಕಾರಿ ಕೋಡ್ ಅನ್ನು ಇಬ್ಬರು ಸಂಶೋಧಕರು ಕಂಡುಹಿಡಿದ್ದಾರೆ. ಸೆರ್ಜ್ ಈಗೆಲ್‌ಮನ್ ಮತ್ತು ಜೋಯಲ್ ರಿಯರ್ಡನ್ ಎಂಬಿಬ್ಬರು ಆಪ್‌ಸೆನ್ಸಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, ಮೊಬೈಲ್ ಆ್ಯಪ್ಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಪರಿಶೀಲಿಸುವ ಕೆಲಸ ಮಾಡುತ್ತಾರೆ.
ಇದಕ್ಕೂ ಮುನ್ನ ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್ ಸೊಂಕಿತ ಆರು ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿತ್ತು. ಮೆಲ್ನೋಟಕ್ಕೆ ಈ ಅಪ್ಲಿಕೇಶನ್‌ಗಳು ಆಂಟಿವೈರಸ್ ಅಪ್ಲಿಕೇಶನ್‌ಗಳ ಮಾದರಿಯಲ್ಲಿ ಕಾಣಿಸಿಕೊಂಡಿವೆ. ಈ ಅಪ್ಲಿಕೇಶನ್‌ಗಳು ವಿವಿಧ ವೆಬ್‌ಸೈಟ್‌ಗಳು ಮತ್ತು ಸೇವೆಗಳಿಗೆ ಬಳಕೆದಾರರ ಲಾಗಿನ್ ಮಾಹಿತಿಯನ್ನು ಕದಿಯುತ್ತದೆ ಎನ್ನಲಾಗಿದೆ. ಅಲ್ಲದೆ ಈ ಸೋಂಕಿತ ಅಪ್ಲಿಕೇಶನ್‌ಗಳನ್ನು ಇಟಲಿ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ಬಳಕೆದಾರರನ್ನು ಗುರಿಯಾಗಿಸಲು ಬಳಸಲಾಗಿದೆ ಎಂದು ವರದಿಯಾಗಿದೆ. ಇದನ್ನು ಶಾರ್ಕ್‌ಬಾಟ್ ಮಾಲ್‌ವೇರ್ ಎಂದು ಹೇಳಲಾಗಿದೆ. ಶಾರ್ಕ್‌ಬಾಟ್ ಎಂಬುದು ಆಂಡ್ರಾಯ್ಡ್ ಸ್ಟೀಲರ್ ಆಗಿದ್ದು, ಇದನ್ನು ಡಿವೈಸ್‌ಗಳಿಗೆ ಸೋಂಕು ತಗುಲಿಸಲು ಮತ್ತು ಬಳಕೆದಾರರ ಲಾಗಿನ್ ರುಜುವಾತು ಕದಿಯಲು ಬಳಸಲಾಗುತ್ತಿದೆ. ಈ ಡ್ರಾಪ್ಪರ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿದ ನಂತರ, ನಿಮ್ಮ ಡಿವೈಸ್‌ನಲ್ಲಿ ಮಾಲ್‌ವೇರ್ ಕಂಡುಬರುತ್ತದಂತೆ.
Galaxy A73: 108MP ಕ್ಯಾಮೆರಾದ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ A73 5G ಫೋನ್ ಖರೀದಿಸಬಹುದೇ?
Published On - 1:53 pm, Sun, 10 April 22