AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix Note 12 5G: ಬಜೆಟ್ ಬೆಲೆಯ ಸ್ಮಾರ್ಟ್​​ಫೋನ್ ಕಿಂಗ್ ಇನ್ಫಿನಿಕ್ಸ್​ನಿಂದ ನೋಟ್‌ 12 5G ಬಿಡುಗಡೆಗೆ ಸಿದ್ಧತೆ

ಇದೀಗ ಇನ್ಫಿನಿಕ್ಸ್‌ ನೋಟ್‌ 12 ಸರಣಿಯನ್ನು ಹೊಸ 5G ಅವತಾರದಲ್ಲಿ ಬಿಡುಗಡೆ ಮಾಡಲು ಕಂಪನಿ ಪ್ಲಾನ್ ಮಾಡಿಕೊಂಡಿದೆ. ಈ ಫೋನ್ ಇದೇ ಜುಲೈ 8 ರಂದು ದೇಶದಲ್ಲಿ ರಿಲೀಸ್ ಆಗಲಿದೆ.

Infinix Note 12 5G: ಬಜೆಟ್ ಬೆಲೆಯ ಸ್ಮಾರ್ಟ್​​ಫೋನ್ ಕಿಂಗ್ ಇನ್ಫಿನಿಕ್ಸ್​ನಿಂದ ನೋಟ್‌ 12 5G ಬಿಡುಗಡೆಗೆ ಸಿದ್ಧತೆ
Infinix Note 12 series
Follow us
TV9 Web
| Updated By: Vinay Bhat

Updated on:Jul 05, 2022 | 12:42 PM

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಇನ್ಫಿನಿಕ್ಸ್‌ (Infinix) ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡುವುದಕ್ಕಾಗಿ ಹೆಸರುವಾಸಿ. ಇದಕ್ಕಾಗಿಯೆ ಮಾರುಕಟ್ಟೆಯಲ್ಲಿ ಈ ಕಂಪನಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗಷ್ಟೆ ಇನ್ಫಿನಿಕ್ಸ್‌ ಮೊಬೈಲ್ ಕಂಪನಿ ಭಾರತದಲ್ಲಿ ಇನ್ಫಿನಿಕ್ಸ್‌ ನೋಟ್‌ 12 ಸರಣಿ (Infinix Note 12 series) ಅನಾವರಣಮಾಡಿತ್ತು. ಇದರಲ್ಲಿ ಇನ್ಫಿನಿಕ್ಸ್‌ ನೋಟ್‌ 12 ಮತ್ತು ಇನ್ಫಿನಿಕ್ಸ್‌ ನೋಟ್‌ 12 ಪ್ರೊ ಸ್ಮಾರ್ಟ್‌ಫೋನ್​ಗಳಿದ್ದವು. ಇದೀಗ ಇನ್ಫಿನಿಕ್ಸ್‌ ನೋಟ್‌ 12 ಸರಣಿಯನ್ನು ಹೊಸ 5G ಅವತಾರದಲ್ಲಿ ಬಿಡುಗಡೆ ಮಾಡಲು ಕಂಪನಿ ಪ್ಲಾನ್ ಮಾಡಿಕೊಂಡಿದೆ. ಈ ಫೋನ್ ಇದೇ ಜುಲೈ 8 ರಂದು ದೇಶದಲ್ಲಿ ರಿಲೀಸ್ ಆಗಲಿದೆ. ವಿಶೇಷ ಎಂದರೆ ಇದುಕೂಡ ಬಜೆಟ್ ಬೆಲೆಯಿಂದಲೇ ಕೂಡಿದೆಯಂತೆ. ಹಾಗಾದ್ರೆ ಈ ಫೋನಿನ ಫೀಚರ್ಸ್ ಏನಿರಬಹುದು ಎಂಬುದನ್ನು ನೋಡೋಣ.

  1. ಇನ್ಫಿನಿಕ್ಸ್‌ ನೋಟ್‌ 12 5G ಆವೃತ್ತಿಯ ಬೆಲೆ ಬಹಿರಂಗಹೊಂಡಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ 4G ಆವೃತ್ತಿಯ ಬೆಲೆಯನ್ನು ನೋಡುವುದಾದರೆ ಇದರ 4GB RAM + 64GB ಸ್ಟೋರೇಜ್ ಮಾದರಿಗೆ 11,499 ರೂ., ಅಂತೆಯೆ 6GB RAM + 128GB ಸ್ಟೋರೇಜ್ ಮಾದರಿಗೆ 12,999 ರೂ. ಬೆಲೆ ಹೊಂದಿದೆ.
  2. ಇನ್ಫಿನಿಕ್ಸ್‌ ನೋಟ್‌ 12 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 11 ಆಧಾರಿತ X OS 10.6 ನಲ್ಲಿ ಕಾರ್ಯನಿರ್ವಹಿಸುತ್ತದೆ.
  3. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಫಿಕ್ಸೆಲ್​ನ ಆಕರ್ಷಕ ಕ್ಯಾಮೆರಾ ಇರುವ ಸಾಧ್ಯತೆ ಇದೆ. 4ಜಿ ಆವೃತ್ತಿಯಲ್ಲಿ 50 ಮೆಗಾಪಿಕ್ಸೆಲ್ ಸೆನ್ಸಾರ್‌ ನೀಡಲಾಗಿತ್ತು. ಅಂತೆಯೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ.
  4. ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ಫ್ಲಾಶ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11ac, ಬ್ಲೂಟೂತ್, FM ರೇಡಿಯೋ, GPS/ A-GPS, USB ಟೈಪ್-C ನೀಡಲಾಗಿದೆ.
  5. ಇದನ್ನೂ ಓದಿ
    Image
    ಭಾರತಕ್ಕೆ ಬಂದಿದೆ ಒನ್​ಪ್ಲಸ್ 50 ಇಂಚಿನ Y1S ಪ್ರೊ ಟಿವಿ: ಫೀಚರ್ಸ್​ ನೋಡಿದ್ರೆ ಫಿದಾ ಆಗ್ತೀರಾ
    Image
    Moto G42: ಭಾರತದಲ್ಲಿ ಮೋಟೋ G42 ಬಿಡುಗಡೆ: ರೆಡ್ಮಿ, ಪೋಕೋ ಫೋನ್​ಗೆ ಶುರುವಾಯ್ತು ನಡುಕ
    Image
    Asus ROG Phone 6: ಏಸಸ್ ರಾಗ್ ಫೋನ್ 6, 6 ಪ್ರೊ ಬಿಡುಗಡೆಗೆ ಡೇಟ್ ಫಿಕ್ಸ್: ಕಾದು ಕುಳಿತಿದ್ದಾರೆ ಟೆಕ್ ಪ್ರಿಯರು
    Image
    Arnav Sivram: 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಕಲಿತ 13 ವರ್ಷದ ತಮಿಳುನಾಡಿನ ಬಾಲಕ ಅರ್ನವ್

OnePlus Nord 2T: 50MP ಕ್ಯಾಮೆರಾ, 80W ಫಾಸ್ಟ್ ಚಾರ್ಜರ್: ಒನ್​​ಪ್ಲಸ್ ನಾರ್ಡ್ 2T ಹೇಗಿದೆ?, ಖರೀದಿಸಬಹುದೇ?

Published On - 12:42 pm, Tue, 5 July 22

ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ರೈಲಿನಡಿ ಬೀಳುತ್ತಿದ್ದವನ ದೇವರಂತೆ ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ
ರೈಲಿನಡಿ ಬೀಳುತ್ತಿದ್ದವನ ದೇವರಂತೆ ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ
ಹಂಸಲೇಖ ಮತ್ತು ನಾನು ದೂರ ಆಗಲು ಕಾರಣ ಏನೆಂದರೆ.. ವಿವರಿಸಿದ ರವಿಚಂದ್ರನ್
ಹಂಸಲೇಖ ಮತ್ತು ನಾನು ದೂರ ಆಗಲು ಕಾರಣ ಏನೆಂದರೆ.. ವಿವರಿಸಿದ ರವಿಚಂದ್ರನ್
ನಮ್ಮತ್ರ ದುಡ್ಡಿಲ್ಲ, ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ
ನಮ್ಮತ್ರ ದುಡ್ಡಿಲ್ಲ, ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ
ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ, ಬಾಲಕಿಯ ಮನವಿಗೆ ಸ್ಪಂದಿಸಿದ ಯೋಗಿ
ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ, ಬಾಲಕಿಯ ಮನವಿಗೆ ಸ್ಪಂದಿಸಿದ ಯೋಗಿ
6,6,6,6,6,6,6... IPLನಲ್ಲಿ ಠುಸ್... MLCಯಲ್ಲಿ ಬುಸ್..!
6,6,6,6,6,6,6... IPLನಲ್ಲಿ ಠುಸ್... MLCಯಲ್ಲಿ ಬುಸ್..!
ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಸುರೇಶ್ ಗೌಡ ಹೇಳಿದ್ದೇನು?
ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಸುರೇಶ್ ಗೌಡ ಹೇಳಿದ್ದೇನು?
ವೃಷಭ ರಾಶಿಯಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ತಿಳಿಯಿರಿ
ವೃಷಭ ರಾಶಿಯಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ತಿಳಿಯಿರಿ