Sign In

By signing in or creating an account, you agree with Associated Broadcasting Company's Terms & Conditions and Privacy Policy.

OnePlus Nord 2T: 50MP ಕ್ಯಾಮೆರಾ, 80W ಫಾಸ್ಟ್ ಚಾರ್ಜರ್: ಒನ್​​ಪ್ಲಸ್ ನಾರ್ಡ್ 2T ಹೇಗಿದೆ?, ಖರೀದಿಸಬಹುದೇ?

ಒನ್​ಪ್ಲಸ್ ನಾರ್ಡ್ 2ಟಿ (OnePlus Nord 2T) ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ?, ಮುಖ್ಯವಾಗಿ ಒನ್​ಪ್ಲಸ್ ನಾರ್ಡ್​ 2T ಫೋನನ್ನು ಖರೀದಿಸಬಹುದೇ? ಎಂಬುದನ್ನು ನೋಡೋಣ.

OnePlus Nord 2T: 50MP ಕ್ಯಾಮೆರಾ, 80W ಫಾಸ್ಟ್ ಚಾರ್ಜರ್: ಒನ್​​ಪ್ಲಸ್ ನಾರ್ಡ್ 2T ಹೇಗಿದೆ?, ಖರೀದಿಸಬಹುದೇ?
OnePlus Nord 2T
Follow us
TV9 Web
| Updated By: Vinay Bhat

Updated on: Jul 05, 2022 | 6:45 AM

ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಕಂಡಿರುವ ಒನ್​ಪ್ಲಸ್ (OnePlus) ಕಂಪನಿ ಕಳೆದ ವಾರವಷ್ಟೆ ದೇಶದಲ್ಲಿ ಒನ್​ಪ್ಲಸ್ ನಾರ್ಡ್ 2ಟಿ (OnePlus Nord 2T) ಫೋನನ್ನು ಅನಾವರಣ ಮಾಡಿತ್ತು. ಆಕರ್ಷಕ ಫೀಚರ್​​ಗಳಿಂದ ಕೂಡಿರುವ ಈ ಸ್ಮಾರ್ಟ್​​ಫೋನ್ ಇಂದು ಮೊದಲ ಸೇಲ್ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ (Amazon), ಒನ್‌ಪ್ಲಸ್‌.ಇನ್‌, ಒನ್‌ಪ್ಲಸ್‌ ಸ್ಟೋರ್‌ ಅಪ್ಲಿಕೇಶನ್‌, ಒನ್‌ಪ್ಲಸ್‌ ಎಕ್ಸ್‌ಪೀರಿಯೆನ್ಸ್‌ ಸ್ಟೋರ್‌ಗಳಲ್ಲಿ ಇಂದು ಮಾರಾಟವಾಗಲಿದೆ. ಇದು ಗ್ರೇ ಶ್ಯಾಡೋ ಮತ್ತು ಜೇಡ್ ಫಾಗ್ ಬಣ್ಣದ ಆಯ್ಕೆಗಳಲ್ಲಿ ರಿಲೀಸ್ ಆಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ?, ಮುಖ್ಯವಾಗಿ ಒನ್​ಪ್ಲಸ್ ನಾರ್ಡ್​ 2T ಫೋನನ್ನು ಖರೀದಿಸಬಹುದೇ? ಎಂಬುದನ್ನು ನೋಡೋಣ.

  1. ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 8GB RAM + 128GB ಸ್ಟೋರೇಜ್ ಆಯ್ಕೆಗೆ 28,999 ರೂ. ಇದೆ. ಹಾಗೆಯೇ 12GB + 256GB ಮಾದರಿಯ ಆಯ್ಕೆಗೆ 33,999 ರೂಪಾಯಿಯನ್ನು ನಿಗದಿ ಮಾಡಲಾಗಿದೆ.
  2. ಲಾಂಚ್‌ ಆಫರ್‌ನಲ್ಲಿ ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು 1,500 ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಒನ್‌ಪ್ಲಸ್‌.ಇನ್‌ ವೆಬ್‌ಸೈಟ್ ಮತ್ತು ಒನ್‌ಪ್ಲಸ್‌ ಸ್ಟೋರ್ ಅಪ್ಲಿಕೇಶನ್ ಮೂಲಕ ಖರೀದಿಸುವ ಗ್ರಾಹಕರು ಹೆಚ್ಚುವರಿ 3,000 ರೂ. ಎಕ್ಸ್‌ಚೇಂಜ್‌ ಆಫರ್ ಪಡೆಯಲಿದ್ದಾರೆ.
  3. ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಿಂದ ಕೂಡಿದೆ.
  4. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಅನ್ನು ಆಕ್ಷಿಜನ್‌ OS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
  5. ಇದನ್ನೂ ಓದಿ
    Image
    Moto G42: ಭಾರತದಲ್ಲಿ ಮೋಟೋ G42 ಬಿಡುಗಡೆ: ರೆಡ್ಮಿ, ಪೋಕೋ ಫೋನ್​ಗೆ ಶುರುವಾಯ್ತು ನಡುಕ
    Image
    Asus ROG Phone 6: ಏಸಸ್ ರಾಗ್ ಫೋನ್ 6, 6 ಪ್ರೊ ಬಿಡುಗಡೆಗೆ ಡೇಟ್ ಫಿಕ್ಸ್: ಕಾದು ಕುಳಿತಿದ್ದಾರೆ ಟೆಕ್ ಪ್ರಿಯರು
    Image
    Arnav Sivram: 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಕಲಿತ 13 ವರ್ಷದ ತಮಿಳುನಾಡಿನ ಬಾಲಕ ಅರ್ನವ್
    Image
    ಬರೋಬ್ಬರಿ 21000mAh ಬ್ಯಾಟರಿ ಫೋನ್ ಲಾಂಚ್: ಒಮ್ಮೆ ಚಾರ್ಜ್ ಫುಲ್ ಮಾಡಿದ್ರೆ 100 ದಿನ ನೋ ಟೆನ್ಶನ್
  6. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲವನ್ನು ಹೊಂದಿದೆ.
  7. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದ್ದು, 120 ಡಿಗ್ರಿಗಳ ಫೀಲ್ಡ್-ಆಫ್-ವ್ಯೂ ನೀಡಲಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
  8. ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
  9. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS/ NavIC, NFC, ಮತ್ತು USB ಟೈಪ್-C ಪೋರ್ಟ್ ಸೇರಿದೆ. ಅಂತೆಯೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ.
  10. ಖರೀದಿಸಬಹುದೇ?: ನೀವು ಕ್ಯಾಮೆರಾ ಪ್ರಿಯರಾಗಿದ್ದಲ್ಲಿ ಈ ಫೋನನ್ನು ಕಣ್ಣುಮುಚ್ಚಿ ಖರೀದಿಸಬಹುದು. ಯಾಕೆಂದರೆ ಇದರಲ್ಲಿ ಸೋನಿ IMX766 ಸೆನ್ಸಾರ್‌ ಅನ್ನು ಅಳವಡಿಸಲಾಗಿದೆ. ಇದು ಅತ್ಯುತ್ತಮ ಗುಣಮಟ್ಟದ ಫೋಟೋವನ್ನು ಸೆರೆ ಹಿಡಿಯುತ್ತದೆ. ಡೀಸೆಂಟ್ ಬ್ಯಾಟರಿ ಇದ್ದರೂ ವೇಗದ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. ಪ್ರೊಸೆಸರ್ ಕೂಡ ಉತ್ತಮವಾಗಿದ್ದು ಸಣ್ಣ ಮಟ್ಟದ ಗೇಮಿಂಗ್​ ಆಡಬಹುದು.

ಭಾರತಕ್ಕೆ ಬಂದಿದೆ ಒನ್​ಪ್ಲಸ್ 50 ಇಂಚಿನ Y1S ಪ್ರೊ ಟಿವಿ: ಫೀಚರ್ಸ್​ ನೋಡಿದ್ರೆ ಫಿದಾ ಆಗ್ತೀರಾ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ