OnePlus Nord: ಭಾರತದಲ್ಲಿ ಬಿಡುಗಡೆಯಾಯ್ತು OnePlus Nord 2T 5G, ಬಿಡುಗಡೆಯ ವಿಶೇಷ ಕೊಡುಗೆಗಳು ಇಲ್ಲಿವೆ ನೋಡಿ

ಭಾರತದಲ್ಲಿ OnePlus Nord 2T 5G ಬಿಡುಗಡೆಯಾಗಿದ್ದು, OnePlus Nord 2 5Gಗೆ ಹೋಲಿಸಿದರೆ ಕೊಂಚ ಅಪ್​ಗ್ರೇಡ್​ ಆಗಿ ಬಿಡುಗಡೆಯಾಗಿದೆ. ಬೆಲೆ, ವಿಶೇಷ ಕೊಡುಗೆ, ಫೀಚರ್ಸ್​ ಮಾಹಿತಿ ಇಲ್ಲಿದೆ.

OnePlus Nord: ಭಾರತದಲ್ಲಿ ಬಿಡುಗಡೆಯಾಯ್ತು OnePlus Nord 2T 5G, ಬಿಡುಗಡೆಯ ವಿಶೇಷ ಕೊಡುಗೆಗಳು ಇಲ್ಲಿವೆ ನೋಡಿ
OnePlus NordImage Credit source: Andy Boxall/Digital Trends
Follow us
TV9 Web
| Updated By: Rakesh Nayak Manchi

Updated on:Jul 01, 2022 | 4:46 PM

ಭಾರತದ ಮಾರುಕಟ್ಟೆಗೆ ಇಂದು (ಜು.1) OnePlus Nord 2T 5G ಬಿಡುಗಡೆಯಾಗಿದ್ದು, OnePlus Nord 2 5Gಗೆ ಹೋಲಿಸಿದರೆ ಕೊಂಚ ಅಪ್​ಗ್ರೇಡ್​ ಆಗಿ ಬಿಡುಗಡೆಯಾಗಿದೆ. ಆ ಮೂಲಕ OnePlus Nord 2T 5Gಯು Motorola Edge 30, iQoo Neo 6, Poco F4 5G, Mi 11X, ಮತ್ತು Samsung Galaxy A33 5G ಮೊಬೈಲ್​ಗಳ ವಿರುದ್ಧ ಸ್ಪರ್ಧಿಸುತ್ತಿದೆ. ಹಾಗಿದ್ದರೆ OnePlus Nord 2T 5G ಮೊಬೈಲ್​ ಫೋನ್​ನಲ್ಲಿ ಯಾವೆಲ್ಲಾ ಫೀಚರ್​ಗಳು ಒಳಗೊಂಡಿವೆ ಎಂದು ಈ ಸುದ್ದಿಯಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ. 

ಬಿಡುಗಡೆ ಕೊಡುಗೆಗಳು

OnePlus Nord 2T 5G ಬಿಡುಗಡೆಯ ಹಿನ್ನೆಲೆ ಗ್ರಾಹಕರಿಗಾಗಿ ವಿಶೇಷ ಕೊಡುಗೆ ನೀಡುತ್ತಿದೆ. Amazon, OnePlus.in, OnePlus Store ಅಪ್ಲಿಕೇಶನ್, OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಇತರ ಪ್ರಮುಖ ಆಫ್‌ಲೈನ್ ಪಾಲುದಾರ ಅಂಗಡಿಗಳಾದ ರಿಲಯನ್ಸ್ ಡಿಜಿಟಲ್, MyJio, Croma, Poorvika ಮೂಲಕ ಖರೀದಿಸುವಾಗ ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ 1,500 ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ನೀಡಲಾಗುತ್ತದೆ. ಈ ರಿಯಾಯಿತಿಯು ಜುಲೈ 5ರಿಂದ 11ರ ವರೆಗೆ ಲಭ್ಯವಿರುತ್ತದೆ.

ಅದಾಗ್ಯೂ, OnePlus.in ವೆಬ್‌ಸೈಟ್ ಮತ್ತು OnePlus ಸ್ಟೋರ್ ಅಪ್ಲಿಕೇಶನ್ ಮೂಲಕ OnePlus Nord 2T 5G ಅನ್ನು ಜುಲೈ 5–14 ರ ನಡುವೆ ಖರೀದಿಸುವ ಗ್ರಾಹಕರಿಗೆ 3,000 ವಿನಿಮಯ ರಿಯಾಯಿತಿ ನೀಡಲಾಗುತ್ತಿದೆ. OnePlus ಸ್ಟೋರ್ ಅಪ್ಲಿಕೇಶನ್‌ನಲ್ಲಿ ಮೊದಲ 1,000 ಶಾಪರ್‌ಗಳು OnePlus ನಾರ್ಡ್ ಹ್ಯಾಂಡಿ ಫ್ಯಾನಿ ಪ್ಯಾಕ್ ಅನ್ನು ಸಹ ಪಡೆಯುತ್ತಾರೆ.

ಇದನ್ನೂ ಓದಿ: Nokia G11 Plus: ಬಜೆಟ್ ಬೆಲೆಗೆ ಬಂಪರ್ ಫೋನ್: ನೋಕಿಯಾದಿಂದ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ

OnePlus Nord 2T 5G ಬೆಲೆ ಮತ್ತು ಬಣ್ಣ

8GB RAM + 128GB ಸ್ಟೋರೇಜ್ ಮಾದರಿಯ OnePlus Nord 2T 5G ಮೊಬೈಲ್ ಫೋನ್​ನ ಆರಂಭಿಕ ಬೆಲೆ ಭಾರತದಲ್ಲಿ 28,999 ರೂಪಾಯಿ ಇದ್ದು, 12GB + 256GB ಮಾದರಿಯ ಮೊಬೈಲ್​ಗೆ 33,999 ರೂಪಾಯಿ ಇದೆ. ಮೊಬೈಲ್​ಗಳು ಗ್ರೇ ಶ್ಯಾಡೋ ಮತ್ತು ಜೇಡ್ ಫಾಗ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

OnePlus Nord 2T 5G ವೈಶಿಷ್ಟ್ಯಗಳು

ಡ್ಯುಯಲ್-ಸಿಮ್ (Nano),  6.43-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) AMOLED  ಡಿಸ್ಪ್ಲೇ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5, 12GB LPDDR4X RAM ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲವನ್ನು ಹೊಂದಿರುವ f/1.8 ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಸೋನಿ IMX766 ಪ್ರೈಮರಿ ಸೆನ್ಸಾರ್​ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದೆ. ಕ್ಯಾಮರಾ ಸೆಟಪ್ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಅನ್ನು 120 ಡಿಗ್ರಿಗಳ ಫೀಲ್ಡ್-ಆಫ್-ವ್ಯೂ ಮತ್ತು 2-ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸಾರ್ ಜೊತೆಗೆ f/2.2 ಲೆನ್ಸ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ: Tech Tips: ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಪವರ್ ಇನ್ನಷ್ಟು ಸ್ಟ್ರಾಂಗ್ ಆಗಬೇಕೇ?: ಇಲ್ಲಿದೆ ಟಿಪ್ಸ್

OnePlus 30fpsನಲ್ಲಿ 4K ವೀಡಿಯೊ ರೆಕಾರ್ಡಿಂಗ್, 960fps ವರೆಗಿನ ಸೂಪರ್ ಸ್ಲೋ ಮೋಷನ್ ವೀಡಿಯೊ, ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, OnePlus Nord 2T 5G ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ Sony IMX615 ಸಂವೇದಕದೊಂದಿಗೆ f/2.4 ಲೆನ್ಸ್‌ನೊಂದಿಗೆ ಕ್ಯಾಮರಾ ಹೊಂದಿದೆ. 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS/ NavIC, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಅನ್ನು ಒಳಗೊಂಡಿದೆ.

ಫೋನ್ 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4,500mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಹೊಂದಿರುವ ಈ ಮೊಬೈಲ್, ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ನಿಂದ ಚಾಲಿತವಾಗಿದೆ.

ಇದನ್ನೂ ಓದಿ: Galaxy F13: 11,000 ರೂ. ಒಳಗಿನ ಬೆಸ್ಟ್​ ಸ್ಮಾರ್ಟ್​​​ಫೋನ್​ ಗ್ಯಾಲಕ್ಸಿ F13 ಖರೀದಿಗೆ ಲಭ್ಯ: ಆಫರ್ ಮಿಸ್ ಮಾಡ್ಬೇಡಿ

Published On - 4:46 pm, Fri, 1 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ