Nokia G11 Plus: ಬಜೆಟ್ ಬೆಲೆಗೆ ಬಂಪರ್ ಫೋನ್: ನೋಕಿಯಾದಿಂದ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ

ನೋಕಿಯಾ (Nokia) ಕಂಪೆನಿ ಸದ್ಯ ಟೆಕ್‌ ಮಾರುಕಟ್ಟೆಯಲ್ಲಿ ತನ್ನ ಹೊಸ ನೋಕಿಯಾ ಜಿ11 ಪ್ಲಸ್ (Nokia G 11 Plus)‌ ಸ್ಮಾರ್ಟ್​​ಫೋನನ್ನು ಲಾಂಚ್‌ ಮಾಡಿದೆ. ಇದೊಂದು ಬಜೆಟ್ ಬೆಲೆಗೆ ಲಭ್ಯವಿರುವ ಆಕರ್ಷಕ ಮೊಬೈಲ್ ಆಗಿದೆ.

Nokia G11 Plus: ಬಜೆಟ್ ಬೆಲೆಗೆ ಬಂಪರ್ ಫೋನ್: ನೋಕಿಯಾದಿಂದ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ
Nokia G11 Plus
TV9kannada Web Team

| Edited By: Vinay Bhat

Jun 30, 2022 | 3:43 PM

ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ಈಗೀಗ ಆಕರ್ಷಕ ಫೀಚರ್​​ಗಳುಳ್ಳ ಫೋನಗಳನ್ನು ಬಿಡುಗಡೆ ಮಾಡುತ್ತಿರುವ ನೋಕಿಯಾ (Nokia) ಕಂಪೆನಿ ಸದ್ಯ ಟೆಕ್ಮಾರುಕಟ್ಟೆಯಲ್ಲಿ ತನ್ನ ಹೊಸ ನೋಕಿಯಾ ಜಿ11 ಪ್ಲಸ್ (Nokia G 11 Plus)ಸ್ಮಾರ್ಟ್​​ಫೋನನ್ನು ಲಾಂಚ್ಮಾಡಿದೆ. ಇದೊಂದು ಬಜೆಟ್ ಬೆಲೆಗೆ ಲಭ್ಯವಿರುವ ಆಕರ್ಷಕ ಮೊಬೈಲ್ ಆಗಿದೆ. ಕಂಪನಿ ಫೋನನ್ನು ಅನಾವರಣ ಮಾಡಿದೆಯಾದರೂ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಿಲ್ಲ. ಇದು ವರ್ಷದ ಆರಂಭದಲ್ಲಿ ಬಿಡುಗಡೆಯಾದ ನೋಕಿಯಾ G11ನ ಅಪ್​ಗ್ರೇಡ್ ವರ್ಷನ್ ಆಗಿದೆ ಎನ್ನಲಾಗಿದೆ. ಹಾಗಾದ್ರೆ ಸಿಕ್ಕಿರುವ ಮಾಹಿತಿ ಪ್ರಕಾರ ಫೋನಿನ ಫೀಚರ್ಸ್ಏನು ಬೆಲೆ ಎಷ್ಟಿರಬಹುದು ಎಂಬುದನ್ನು ನೋಡೋಣ.

ಇದನ್ನೂ ಓದಿ

  1. ನೋಕಿಯಾ G11 ಪ್ಲಸ್ಸ್ಮಾರ್ಟ್ಫೋನ್‌ 6.5 ಇಂಚಿನ ಹೆಚ್ಡಿ ಪ್ಲಸ್ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ 90Hz ರಿಫ್ರೆಶ್ರೇಟ್ಅನ್ನು ಒಳಗೊಂಡಿದೆ. ಡಿಸ್ಪ್ಲೇ ಮೃದುವಾದ ಸ್ಮಾರ್ಟ್ಫೋನ್ ಅನುಭವವನ್ನು ನೀಡಲಿದೆ.
  2. ನೋಕಿಯಾ ಬ್ರ್ಯಾಂಡ್ ಪರವಾನಗಿ ಹೊಂದಿರುವ HMD ಗ್ಲೋಬಲ್ ನೋಕಿಯಾ G11 ಪ್ಲಸ್ಸ್ಮಾರ್ಟ್ಫೋನ್ಯಾವ ಪ್ರೊಸೆಸರ್ಹೊಂದಿದೆ ಅನ್ನೊದನ್ನ ಇನ್ನು ಬಹಿರಂಗಪಡಿಸಿಲ್ಲ. ಆದರೆ ಸ್ಮಾರ್ಟ್ಫೋನ್‌ 4GB RAM ಮತ್ತು 64GB ಇಂಟರ್ಸ್ಟೊರೇಜ್ಹೊಂದಿದೆ.
  3. ಸ್ಮಾರ್ಟ್ಫೋನ್ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ಅನ್ನು ಹೊಂದಿದೆ.
  4. ಇನ್ನು ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಸೆಲ್ಫಿ ಮತ್ತು ವೀಡಿಯೊ ಚಾಟ್ಗಳಿಗಾಗಿ, 8 ಮೆಗಾಪಿಕ್ಸೆಲ್ ಸೆನ್ಸಾರ್ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
  5. ನೋಕಿಯಾ G11 ಪ್ಲಸ್ಸ್ಮಾರ್ಟ್ಫೋನ್ಬ್ಯಾಟರಿ ಪ್ಯಾಕಪ್ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಸ್ಮಾರ್ಟ್ಫೋನ್ಸಿಂಗಲ್ಚಾರ್ಜ್ನಲ್ಲಿ ಮೂರು ದಿನಗಳ ಬ್ಯಾಟರಿ ಅವಧಿ ನೀಡಲಿದೆ ಎಂದು ಹೇಳಲಾಗಿದೆ.
  6. ಸ್ಮಾರ್ಟ್ಫೋನ್ಬೆಲೆಯ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ಸ್ಮಾರ್ಟ್ಫೋನ್ನೋಕಿಯಾ ವೆಬ್ಸೈಟ್ನಲ್ಲಿ ಅನಾವರಣಗೊಂಡಿರುವುದರಿಂದ ಶೀಘ್ರದಲ್ಲೇ ಬೆಲೆಯ ವಿವರಗಳು ಬಹಿರಂಗವಾಗಲಿದೆ. ಮೂಲಗಳ ಪ್ರಕಾರ ಇದರ ಬೆಲೆ 15,000 ರೂ. ಒಳಗಡೆ ಇರಬಹುದು ಎನ್ನಲಾಗಿದೆ.

Tech Tips: ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಪವರ್ ಇನ್ನಷ್ಟು ಸ್ಟ್ರಾಂಗ್ ಆಗಬೇಕೇ?: ಇಲ್ಲಿದೆ ಟಿಪ್ಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada