ಸ್ಯಾಮ್ಸಂಗ್ನ ಬೆಸ್ಟ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ A53 ಬೆಲೆಯಲ್ಲಿ ಭರ್ಜರಿ ಇಳಿಕೆ
ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎ53 5ಜಿ2 (Samsung Galaxy A53 5G) ಸ್ಮಾರ್ಟ್‌ಫೋನ್ (Smartphone) ಬೆಲೆಯಲ್ಲಿ ಭರ್ಜರಿ ಖಡಿತ ಮಾಡಿದೆ. ಆಕರ್ಷಕ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ, ಒಳ್ಳೆಯ ಪ್ರೊಸೆಸರ್ ಹೊಂದಿರುವ ಈ ಫೋನ್ ಮೇಲೆ 3,000 ರೂ. ಗಳ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ.
ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುವ ಸ್ಮಾರ್ಟ್ಫೋನ್ಗಳ ಪೈಕಿ ಸ್ಯಾಮ್‌ಸಂಗ್ (Samsung) ದ್ವಿತೀಯ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡುತ್ತಿರುವುದು. ಮುಖ್ಯವಾಗಿ ಗ್ಯಾಲಕ್ಸಿ ಹೊಸ ಆವೃತ್ತಿಯ ಫೋನ್ ಬಿಡುಗಡೆ ಆಯಿತು ಎಂದಾದರೆ ಅಲ್ಲಿ ಹಿಂದಿನ ಆವೃತ್ತಿಯ ಫೋನಿನ ಬೆಲೆ ಕೊಂಚ ಕಡಿಮೆ ಮಾಡಿ ಮಾರಾಟ ಮಾಡುತ್ತದೆ. ಆದರೆ, ಇದೀಗ ಅಚ್ಚರಿ ಎಂಬಂತೆ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎ53 5ಜಿ (Samsung Galaxy A53 5G) ಸ್ಮಾರ್ಟ್‌ಫೋನ್ (Smartphone) ಬೆಲೆಯಲ್ಲಿ ಭರ್ಜರಿ ಖಡಿತ ಮಾಡಿದೆ. ಆಕರ್ಷಕ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ, ಒಳ್ಳೆಯ ಪ್ರೊಸೆಸರ್ ಹೊಂದಿರುವ ಈ ಫೋನ್ ಮೇಲೆ 3,000 ರೂ. ಗಳ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಫೀಚರ್ಸ್ ಏನು ಎಂಬುದನ್ನು ನೋಡೋಣ.
- ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G ಫೋನ್ 3,000ರೂ. ಗಳ ಬೆಲೆ ಇಳಿಕೆ ಆಗಿದೆ. ಬೆಲೆ ಕಡಿತದ ಬಳಿಕ 6GB + 128GB ವೇರಿಯಂಟ್ ಫೋನ್ 31,499ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಅದೇ ರೀತಿ 8GB + 128GB ಸ್ಟೋರೇಜ್ ವೇರಿಯಂಟ್ 32,999ರೂ. ಗಳ ದರದಲ್ಲಿ ದೊರೆಯಲಿದೆ.
- ಗ್ಯಾಲಕ್ಸಿ M32 ಸ್ಮಾರ್ಟ್‌ಫೋನ್ 6.4 ಇಂಚಿನ ಎಸ್-ಅಮೋಲೆಡ್ (sAMOLED) ಎಫ್‌ಹೆಚ್‌ಡಿ ಪ್ಯಾನೆಲ್ ಸ್ಕ್ರೀನ್ ಇದ್ದು, 90Hz ರೀಫ್ರೆಶ್ ರೇಟ್ ಇದೆ.
- ಮೀಡಿಯಾಟೆಕ್ ಹೀಲಿಯೋ ಜಿ80 ಪ್ರೊಸೆಸರ್ ಜೊತೆಗೂಡಿರುವುದರಿಂದ ಕಾರ್ಯಾಚರಣೆಯು ಸುಲಲಿತವಾಗಿದೆ. ಆಂಡ್ರಾಯ್ಡ್ 11 ಆಧಾರಿತ ಒನ್‌ಯುಐ 3.1 ನೊಂದಿಗೆ ಬರುತ್ತದೆ.
- ಈ ಫೋನ್‌ನ ಪ್ರಧಾನ ಕ್ಯಾಮೆರಾದಲ್ಲಿ 64 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಸೆನ್ಸರ್ ಇದ್ದು, 8MP ವೈಡ್ ಆ್ಯಂಗಲ್ ಲೆನ್ಸ್ ಹಾಗೂ ತಲಾ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಲೆನ್ಸ್‌ಗಳಿವೆ.
- ಸೆಲ್ಫೀಗಾಗಿ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಂಭಾಗದ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರಧಾನ ಕ್ಯಾಮೆರಾವು ಹೊರಾಂಗಣದಲ್ಲಿ ಅದ್ಭುತವಾಗಿ ಬಣ್ಣಗಳ ಮಿಳಿತದೊಂದಿಗೆ ಚಿತ್ರಗಳನ್ನು ಸೆರೆಹಿಡಿಯುತ್ತದೆ.
- ಸಮೀಪದ ವಸ್ತುಗಳು ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳಿಂದಾಗಿ ಅತ್ಯುತ್ತಮವಾಗಿ ಸೆರೆಯಾಗುತ್ತವೆ. 20MP ಸಾಮರ್ಥ್ಯದ ಲೆನ್ಸ್ ಮೂಲಕ ಸೆಲ್ಫೀ, ಈಗಿನ ಅಗತ್ಯಕ್ಕೆ ತಕ್ಕಂತೆ ಚಿತ್ರಗಳಿಗೆ ಹೆಚ್ಚು ಸೌಂದರ್ಯ ಒದಗಿಸುತ್ತದೆ.
- ಗ್ಯಾಲಕ್ಸಿ M32 5G ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
- ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ, ವೈ-ಫೈ, ಬ್ಲೂಟೂತ್, ಮತ್ತು ಜಿಪಿಎಸ್ ಸೇರಿದಂತೆ ಪ್ರಮುಖ ನೂತನ ಫೀಚರ್ಗಳಿಂದ ಕೂಡಿದೆ.
ಇದನ್ನೂ ಓದಿ
iQOO Neo 6: ಒನ್ಪ್ಲಸ್ ಬಿಡುಗಡೆ ಮಾಡಿದ ಫೋನ್ಗೆ ಬೆಚ್ಚಿಬಿದ್ದ ಐಕ್ಯೂ: ಈ ಫೋನ್ ಬೆಲೆ ದಿಢೀರ್ ಇಳಿಕೆ
Published On - 6:46 am, Sun, 3 July 22