iQOO Neo 6: ಒನ್ಪ್ಲಸ್ ಬಿಡುಗಡೆ ಮಾಡಿದ ಫೋನ್ಗೆ ಬೆಚ್ಚಿಬಿದ್ದ ಐಕ್ಯೂ: ಈ ಫೋನ್ ಬೆಲೆ ದಿಢೀರ್ ಇಳಿಕೆ
OnePlus Nord 2T 5G: ಒನ್ಪ್ಲಸ್ ನಾರ್ಡ್ 2ಟಿ 5ಜಿ ಸ್ಮಾರ್ಟ್ಫೋನ್ಗೆ ಅನೇಕ ಇತರೆ ಮೊಬೈಲ್ ಫೋನ್ಗಳು ಬೆಚ್ಚಿಬೆದ್ದಿದೆ. ಇದೀಗ ಒನ್ಪ್ಲಸ್ ಹೊಡೆತಕ್ಕೆ ಸಿಲುಕಿರುವ ಐಕ್ಯೂ ಕಂಪನಿ ಕೂಡ ಇದೇ ಬೆಲೆಯ ಆಸುಪಾಸಿನಲ್ಲಿ ಬಿಡುಗಡೆ ಮಾಡಿದ್ದ ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ.
ಒನ್ಪ್ಲಸ್ ಕಂಪನಿ ಜುಲೈ 1 ರಂದು ಭಾರತದಲ್ಲಿ ಬಿಡುಗಡೆ ಮಾಡಿದ ಒನ್ಪ್ಲಸ್ ನಾರ್ಡ್ 2ಟಿ 5ಜಿ (OnePlus Nord 2T 5G) ಸ್ಮಾರ್ಟ್ಫೋನ್ಗೆ ಅನೇಕ ಇತರೆ ಮೊಬೈಲ್ ಫೋನ್ಗಳು ಬೆಚ್ಚಿಬೆದ್ದಿದೆ. 28,999 ರೂ. ಹೊಂದಿರುವ ಈ ಫೋನ್ ಮಧ್ಯಮ ಬೆಲೆಗೆ ಲಭ್ಯವಿದ್ದು ಆಕರ್ಷಕ ಫೀಚರ್ಗಳಿಂದ ಕೂಡಿದೆ. ಇದೀಗ ಒನ್ಪ್ಲಸ್ ಹೊಡೆತಕ್ಕೆ ಸಿಲುಕಿರುವ ಐಕ್ಯೂ ಕಂಪನಿ ಕೂಡ ಇದೇ ಬೆಲೆಯ ಆಸುಪಾಸಿನಲ್ಲಿ ಬಿಡುಗಡೆ ಮಾಡಿದ್ದ ಐಕ್ಯೂ ನಿಯೋ 6 (iQOO Neo 6) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ (Amazon) ಈ ಫೋನ್ ಮೇಲೆ ಬರೋಬ್ಬರಿ 3,000 ರೂ. ಗಳ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಹಾಗಾದ್ರೆ ಐಕ್ಯೂ ನಿಯೋ 6 ಸ್ಮಾರ್ಟ್ಫೋನ್ನ ಮೂಲಬೆಲೆ ಎಷ್ಟು?, ಈಗ ಎಷ್ಟಕ್ಕೆ ಲಭ್ಯವಾಗುತ್ತಿದೆ?, ವಿಶೇಷತೆ ಏನೇನು? ಎಂಬುದನ್ನು ನೋಡೋಣ.
- ಐಕ್ಯೂ ನಿಯೋ 6 ಫೋನ್ 8 RAM + 128 GB ಸ್ಟೋರೇಜ್‌ನ ಬೇಸ್ ವೇರಿಯಂಟ್ ಆರಂಭಿಕ ಬೆಲೆಯು 29,999 ರೂ. ಆಗಿದೆ. ಇದು ಬೆಲೆ ಖಡಿತಗೊಂದು 26,999 ರೂ. ಗಳಿಗೆ ದೊರೆಯಲಿದೆ. ಅಂತೆಯೆ 12GB + 256GB ರೂಪಾಂತರದ ಬೆಲೆ 33,999 ರೂ.ಆಗಿದೆ.
- ನೀವು ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸದರೆ ಮಾತ್ರ 3,000 ರೂ. ಗಳ ಭರ್ಜರಿ ರಿಯಾಯಿತಿ ದೊರೆಯುತ್ತದೆ. ಹಾಗೆಯೇ ಅಮೆಜಾನ್ 12,150 ರೂ. ಗಳ ವರೆಗೂ ವಿನಿಮಯ ರಿಯಾಯಿತಿ ಸಹ ನೀಡುತ್ತದೆ. ಜುಲೈ 4ರ ವರೆಗೆ ಮಾತ್ರ ಈ ಆಫರ್ ಇರಲಿದೆ.
- ಈ ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.62 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.
- ಬಲಿಷ್ಠವಾದ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ OriginOS ಓಷನ್ ಕಸ್ಟಮ್ ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.
- ಐಕ್ಯೂ ನಿಯೋ 6 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL ಪ್ಲಸ್ GW1P ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ.
- ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
- ದೀರ್ಘ ಸಮಯ ಬಾಳಿಕೆ ಬರುವ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
- ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಅಳವಡಿಸಲಾಗಿದೆ.
ಇದನ್ನೂ ಓದಿ
Oppo Reno 8: ಭಾರತಕ್ಕೆ ಕಾಲಿಡುತ್ತಿದೆ ಕ್ಯಾಮೆರಾದಿಂದಲೇ ವಿದೇಶದಲ್ಲಿ ಧೂಳೆಬ್ಬಿಸಿದ ಒಪ್ಪೋ ರೆನೋ 8
Published On - 3:06 pm, Sat, 2 July 22