Nothing Phone 1: ಆಕರ್ಷಕ ವಿನ್ಯಾಸ, ಅದ್ಭುತ ಫೀಚರ್ಸ್​: ಕಡಿಮೆ ಬೆಲೆಯ ನಥಿಂಗ್ ಫೋನ್ 1 ಬಿಡುಗಡೆ

Nothing Phone 1 Specifications: ವಿಶೇಷ ಎಂದರೆ ಈ ಹಿಂದೆ ಒನ್​ ಪ್ಲಸ್ ಮೊಬೈಲ್ ಕಂಪೆನಿಯ ಸಹ ಮಾಲೀಕರಾಗಿದ್ದ ಕಾರ್ಲ್ ಪೀ ಇದೀಗ ತಮ್ಮದೇ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ್ದಾರೆ. ಹಾಗಿದ್ರೆ ನೂತನ ಮೊಬೈಲ್​ನ ವಿಶೇಷತೆಗಳೇನು ನೋಡೋಣ..

| Updated By: ಝಾಹಿರ್ ಯೂಸುಫ್

Updated on:Jul 13, 2022 | 2:30 PM

 ಟೆಕ್ ಕ್ಷೇತ್ರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಹೊಸ ಸ್ಮಾರ್ಟ್​ಫೋನ್​ ನಥಿಂಗ್ ಫೋನ್ 1 ಭಾರತದಲ್ಲಿ ಬಿಡುಗಡೆಯಾಗಿದೆ. ಈ ಹಿಂದೆಯೇ ಕಂಪೆನಿ ಹೆಸರಿನ ಮೂಲಕ ಗಮನ ಸೆಳೆದಿದ್ದ ನಥಿಂಗ್ ಇದೇ ಮೊದಲ ಬಾರಿಗೆ ಫೋನ್ ಒಂದನ್ನು ಪರಿಚಯಿಸುತ್ತಿದೆ. ವಿಶೇಷ ಎಂದರೆ ಈ ಹಿಂದೆ ಒನ್​ ಪ್ಲಸ್ ಮೊಬೈಲ್ ಕಂಪೆನಿಯ ಸಹ ಮಾಲೀಕರಾಗಿದ್ದ ಕಾರ್ಲ್ ಪೀ ಇದೀಗ ತಮ್ಮದೇ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ್ದಾರೆ. ಹಾಗಿದ್ರೆ ನೂತನ ಮೊಬೈಲ್​ನ ವಿಶೇಷತೆಗಳೇನು ನೋಡೋಣ..

1 / 8
ಡಿಸ್​ಪ್ಲೇ: ಈ ಸ್ಮಾರ್ಟ್​ಫೋನ್​ನಲ್ಲಿ 6.55 ಇಂಚಿನ  ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) OLED ಡಿಸ್​ಪ್ಲೇ ನೀಡಲಾಗಿದೆ. ಇದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಬರುತ್ತದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸಹ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲೂ ಲಭ್ಯವಿದೆ.

2 / 8
ಪ್ರೊಸೆಸರ್: ನಥಿಂಗ್​ ಫೋನ್ 1 ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 778G+ ಚಿಪ್ ಜೊತೆಗೆ 8GB ಹಾಗೂ 12GB ವರೆಗೆ LPDDR5 RAM ನೊಂದಿಗೆ ಬಿಡುಗಡೆಯಾಗಿದೆ.

3 / 8
ಕ್ಯಾಮೆರಾ: ಈ ಫೋನ್​ನಲ್ಲಿ ಒಟ್ಟು ಮೂರು ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್​ನ ಕ್ಯಾಮೆರಾ ಇದ್ದು, ಹಿಂಭಾಗದಲ್ಲಿ 50 ಮೆಗಾ ಪಿಕ್ಸೆಲ್ + 16 ಮೆಗಾ ಪಿಕ್ಸೆಲ್​ನ ಎರಡು ಕ್ಯಾಮೆರಾ ನೀಡಲಾಗಿದೆ.

4 / 8
 ಸ್ಟೊರೇಜ್: ಈ ಸ್ಮಾರ್ಟ್​ಫೋನ್ ಮೂರು ಆಯ್ಕೆಯಲ್ಲಿ ಲಭ್ಯವಿದೆ. 8GB RAM + 128GB, 8GB RAM + 256GB  ಹಾಗೂ 12GB RAM + 256GB ಸ್ಟೊರೇಜ್ ಆಯ್ಕೆಯಲ್ಲಿ ಈ ಸ್ಮಾರ್ಟ್​ಫೋನ್​ ಅನ್ನು ಖರೀದಿಸಬಹುದು.

5 / 8
ಬ್ಯಾಟರಿ: ನಂಥಿಂಗ್ ಫೋನ್​ 1 ನಲ್ಲಿ 4500mAh ಸಾಮರ್ಥ್ಯದ ದೀರ್ಘ ಬಾಳಿಕೆ ಬ್ಯಾಟರಿ ನೀಡಲಾಗಿದೆ.  ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

6 / 8
ಇತರೆ ವಿಶೇಷತೆಗಳು: ಈ ಸ್ಮಾರ್ಟ್‌ಫೋನ್‌ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ V5.2, NFC, GPS, GLONASS, ಗೆಲಿಲಿಯೋ ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಇದಲ್ಲದೆ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP53 ರೇಟಿಂಗ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಮೂರು ಮೈಕ್ರೊಫೋನ್‌ಗಳನ್ನು ಸಹ ಫೋನ್‌ನಲ್ಲಿ ನೀಡಲಾಗಿದೆ.

7 / 8
ಬೆಲೆ:  8GB RAM + 128GB ಬೆಲೆ: ರೂ 32,999,  8GB RAM + 256GB ಬೆಲೆ: ರೂ 35,999, 12GB RAM + 256GB ಬೆಲೆ: ರೂ 38,999

8 / 8

Published On - 12:48 pm, Wed, 13 July 22

Follow us