125W ಫಾಸ್ಟ್ ಚಾರ್ಜರ್​, 200MP ಕ್ಯಾಮೆರಾದ ಮೋಟೋ ಎಡ್ಜ್ 30 ಅಲ್ಟ್ರಾ ಫೋನಿನ ಬೆಲೆ ಸೋರಿಕೆ

Motorola Edge 30 Ultra Price: ಮೋಟೋರೊಲಾ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್‌ ಇದೇ ಜುಲೈ ತಿಂಗಳ ಅಂತ್ಯದಲ್ಲಿ ಲಾಂಚ್‌ ಆಗುವ ಸಾಧ್ಯತೆ ಇದೆ. ಹೀಗಿರುವಾಗ ಈ ಫೋನಿನ ಬೆಲೆ ಬಹಿರಂಗಗೊಂಡಿದೆ.

125W ಫಾಸ್ಟ್ ಚಾರ್ಜರ್​, 200MP ಕ್ಯಾಮೆರಾದ ಮೋಟೋ ಎಡ್ಜ್ 30 ಅಲ್ಟ್ರಾ ಫೋನಿನ ಬೆಲೆ ಸೋರಿಕೆ
Motorola Edge 30 Ultra
Follow us
| Updated By: Vinay Bhat

Updated on: Jul 13, 2022 | 6:04 AM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಶವೋಮಿ (Xiaomi), ಸ್ಯಾಮ್​ಸಂಗ್ (Samsung), ರಿಯಲ್ ಮಿ (Realme) ನಡುವೆ ತನ್ನದೇ ಆದ ವಿಶೇಷ ಸ್ಥಾನ ಸ್ಥಾಪಿಸಿರುವ ಮೋಟೋರೊಲಾ (Motorola) ಕಂಪನಿ ಇದೀಗ ತನ್ನ ಹೊಸ ಮೋಟೋರೊಲಾ ಎಡ್ಜ್ 30 ಅಲ್ಟ್ರಾ (Motorola Edge 30 Ultra) ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ. ಇದು ಜಾಗತಿಕ ರೂಪಾಂತರಕ್ಕಾಗಿ ಎಡ್ಜ್ 30 ಅಲ್ಟ್ರಾ ಮಾನಿಕರ್ ಅನ್ನು ಬಳಸಲಾಗುವುದು ಎಂದು ಹೇಳಲಾಗುತ್ತಿದೆ. ಈ ವರ್ಷದ ಆರಂಭದಿಂದಲೂ ಭರ್ಜರಿ ಸುದ್ದಿಯಲ್ಲಿರುವ ಈ ಫೋನ್ ಇದೇ ತಿಂಗಳ ಅಂತ್ಯದಲ್ಲಿ ಅನಾವರಣಗೊಳ್ಳಲಿದೆ ಎನ್ನಲಾಗಿದೆ. ಹೀಗಿರುವಾಗ ಇದರ ವಿಶೇಷತೆ ಒಂದೊಂದೇ ಸೋರಿಕೆಯಾಗುತ್ತಿದೆ. ಇದೀಗ ಈ ಫೋನಿನ ಬೆಲೆ ಎಷ್ಟು ಎಂಬುದು ಬಹಿರಂಗಗೊಂಡಿದೆ.

ಹೌದು, ಮೋಟೋ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್​ಫೊನಿನ ಬೆಲೆ, ಕ್ಯಾಮೆರಾ, ಪ್ರೊಸೆಸರ್ ಸೇರಿದಂತೆ ಹೆಚ್ಚಿನ ಮಾಹಿತಿಗಳು ರಿಲೀಸ್​ಗೂ ಮುನ್ನವೇ ಲೀಕ್ ಆಗುತ್ತಿದೆ. ಸದ್ಯ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಎಡ್ಜ್‌ 30 ಅಲ್ಟ್ರಾ ಸ್ಮಾರ್ಟ್‌ಫೋನಿನ ಬೆಲೆ ಯುರೋಪ್​ನಲ್ಲಿ EUR 899, ಅಂದರೆ ಭಾರತದಲ್ಲಿ ಇದರ ಬೆಲೆ 71,500 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಈ ಫೋನ್ ಬರೋಬ್ಬರಿ 125W ಫಾಸ್ಟ್​ ಚಾರ್ಜರ್​​ನೊಂದಿಗೆ ಬರಲಿದೆಯಂತೆ. ಅಲ್ಲದೆ 200 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್​​ಫೋನ್ ಆಗಿರಲಿದೆ.

ಉಳಿದಂತೆ 6.6-ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ ಪಂಚ್‌ ಹೋಲ್‌ ಡಿಸ್‌ಪ್ಲೇ ನಾಚ್‌ ವಿನ್ಯಾಸದಿಂದ ಕೂಡಿರಲಿದೆ ಎನ್ನಲಾಗಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 898 ಪ್ರೊಸೆಸರ್‌ ಬಲವನ್ನು ಪಡದಿರುವ ಸಾಧ್ಯತೆ ಇದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೆಜ್‌ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಮೆಮೊರಿ ಕಾರ್ಡ್‌ ಬೆಂಬಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ
Image
Nokia C21 Plus: ಕೇವಲ 10,299 ರೂ.: ನೋಕಿಯಾದಿಂದ ಅತಿ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್​​ಫೋನ್ ಬಿಡುಗಡೆ
Image
Oppo A97 5G: ಒಪ್ಪೋದಿಂದ ಬಜೆಟ್ ಬೆಲೆಗೆ ಆಕರ್ಷಕ ಕ್ಯಾಮೆರಾ, ಬ್ಯಾಟರಿಯ ಹೊಸ ಫೋನ್ ಬಿಡುಗಡೆ
Image
WhatsApp: ವಾಟ್ಸ್​ಆ್ಯಪ್ ಮೆಸೇಜ್ ರಿಯಾಕ್ಷನ್​ನಲ್ಲಿ ​​ನೂತನ ಆಯ್ಕೆ: ದಂಗಾದ ಟೆಲಿಗ್ರಾಂ ಆ್ಯಪ್
Image
Nothing phone (1): ಇಂದು ವಿಶ್ವವೇ ಕಾಯುತ್ತಿರುವ ನಥಿಂಗ್ ಫೋನ್ 1 ಬಿಡುಗಡೆ: ಬೆಲೆ ಎಷ್ಟು? ಫೀಚರ್ಸ್​ ಏನು?

ವಿಶೇಷವಾಗಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸಾರ್‌ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಬೃಹತ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮರಾ OIS ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ. ಅದರೊಂದಿಗೆ, ಸೆಲ್ಫಿ ಕ್ಯಾಮೆರಾ 4K ವಿಡಿಯೋ ರೆಕಾರ್ಡಿಂಗ್‌ಗೆ ಅವಕಾಶ ನೀಡಲಿದೆ ಎಂದು ಅಂದಾಜಿಸಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ ಬಲಿಷ್ಠ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 125W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲಿಸುವ ಸಾದ್ಯತೆ ಇದೆ. ಈ ಮೂಲಕ ಕೆಲವೇ ನಿಮಿಷಗಳಲ್ಲಿ ಫುಲ್‌ ಚಾರ್ಜ್‌ ಮಾಡಲು ಸಾಧ್ಯವಾಗಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಮೋಟೋ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್‌ ಜಾಗತಿಕವಾಗಿ ಇದೇ ಜುಲೈ ತಿಂಗಳ ಅಂತ್ಯದಲ್ಲಿ ಲಾಂಚ್‌ ಆಗುವ ಸಾಧ್ಯತೆ ಇದೆ.