ಮೋಟೋ ಎಡ್ಜ್ 30 ಆಲ್ಟ್ರಾ ಫೋನಿನ ಮಾಹಿತಿ ಸೋರಿಕೆ: ಫೀಚರ್ಸ್ ಕಂಡು ದಂಗಾದ ಟೆಕ್ ಪ್ರಿಯರು
Motorola Edge 30 Ultra: ಮೋಟೋರೊಲಾ (Motorola) ಕಂಪನಿ ಇದೀಗ ತನ್ನ ಹೊಸ ಮೋಟೋರೊಲಾ ಎಡ್ಜ್ 30 ಅಲ್ಟ್ರಾ (Motorola Edge 30 Ultra) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ. ಈ ವರ್ಷದ ಆರಂಭದಿಂದಲೂ ಭರ್ಜರಿ ಸುದ್ದಿಯಲ್ಲಿರುವ ಈ ಫೋನಿನ ವಿಶೇಷತೆ ಒಂದೊಂದೇ ಸೋರಿಕೆಯಾಗುತ್ತಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಶವೋಮಿ (Xiaomi), ಸ್ಯಾಮ್ಸಂಗ್ (Samsung), ರಿಯಲ್ ಮಿ (Realme) ನಡುವೆ ತನ್ನದೇ ಆದ ವಿಶೇಷ ಸ್ಥಾನ ಸ್ಥಾಪಿಸಿರುವ ಮೋಟೋರೊಲಾ (Motorola) ಕಂಪನಿ ಇದೀಗ ತನ್ನ ಹೊಸ ಮೋಟೋರೊಲಾ ಎಡ್ಜ್ 30 ಅಲ್ಟ್ರಾ (Motorola Edge 30 Ultra) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ. ಇದು ಜಾಗತಿಕ ರೂಪಾಂತರಕ್ಕಾಗಿ ಎಡ್ಜ್ 30 ಅಲ್ಟ್ರಾ ಮಾನಿಕರ್ ಅನ್ನು ಬಳಸಲಾಗುವುದು ಎಂದು ಹೇಳಲಾಗುತ್ತಿದೆ. ಈ ವರ್ಷದ ಆರಂಭದಿಂದಲೂ ಭರ್ಜರಿ ಸುದ್ದಿಯಲ್ಲಿರುವ ಈ ಫೋನಿನ ವಿಶೇಷತೆ ಒಂದೊಂದೇ ಸೋರಿಕೆಯಾಗುತ್ತಿದೆ. ಇದೀಗ ಲೀಕ್ ಆಗಿರುವ ಮಾಹಿತಿ ಟೆಕ್ ಪ್ರಿಯರ ಹುಬ್ಬೇರುದಂತೆ ಮಾಡಿದೆ.
ಹೌದು, ಮೋಟೋ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್ಫೊನಿನ ಬೆಲೆ, ಕ್ಯಾಮೆರಾ, ಪ್ರೊಸೆಸರ್ ಸೇರಿದಂತೆ ಹೆಚ್ಚಿನ ಮಾಹಿತಿಗಳು ರಿಲೀಸ್ಗೂ ಮುನ್ನವೇ ಲೀಕ್ ಆಗುತ್ತಿದೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ ಬರೋಬ್ಬರಿ 125W ಫಾಸ್ಟ್ ಚಾರ್ಜರ್ನೊಂದಿಗೆ ಬರಲಿದೆಯಂತೆ. ಜೊತೆಗೆ 200 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿರಲಿದೆಯಂತೆ. 6.6-ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ ಪಂಚ್ ಹೋಲ್ ಡಿಸ್‌ಪ್ಲೇ ನಾಚ್ ವಿನ್ಯಾಸದಿಂದ ಕೂಡಿರಲಿದೆ ಎನ್ನಲಾಗಿದೆ.
Realme C30: ಆಫರ್ಗಳ ಸುರಿಮಳೆ: ಮೊದಲ ಸೇಲ್ ಕಾಣುತ್ತಿರುವ ರಿಯಲ್ ಮಿ C30 ಬಂಪರ್ ಡಿಸ್ಕೌಂಟ್ನಲ್ಲಿ ಲಭ್ಯ
ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 898 ಪ್ರೊಸೆಸರ್ ಬಲವನ್ನು ಪಡದಿರುವ ಸಾಧ್ಯತೆ ಇದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಮೆಮೊರಿ ಕಾರ್ಡ್ ಬೆಂಬಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಿಶೇಷವಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 50MP ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12MP ಡೆಪ್ತ್ ಸೆನ್ಸಾರ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಬೃಹತ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮರಾ OIS ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ. ಅದರೊಂದಿಗೆ, ಸೆಲ್ಫಿ ಕ್ಯಾಮೆರಾ 4K ವಿಡಿಯೋ ರೆಕಾರ್ಡಿಂಗ್‌ಗೆ ಅವಕಾಶ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಬಲಿಷ್ಠ ಸಾಮರ್ಥ್ಯದ 5000mAh ಬ್ಯಾಟರಿಯನ್ನು ಹೊಂದಿರಲಿದೆ. ಇದು 125W ಚಾರ್ಜಿಂಗ್‌ಗೆ ಬೆಂಬಲಿಸುವ ಸಾದ್ಯತೆ ಇದೆ. ಇದರಲ್ಲಿ ಕೆಲವೇ ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಲು ಸಾಧ್ಯವಾಗಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಮೋಟೋ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಜುಲೈ 2022 ರಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಇದರ ಬೆಲೆ ಭಾರತದಲ್ಲಿ ಎಷ್ಟಿರಬಹುದೆಂದು ಇನ್ನೂ ಬಹಿರಂಗವಾಗಿಲ್ಲ.
Best Smartphone: 12,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್ ಬೇಕಿದ್ದರೆ ಇಲ್ಲಿದೆ ನೋಡಿ
Published On - 2:46 pm, Mon, 27 June 22