AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Realme C30: ಆಫರ್​ಗಳ ಸುರಿಮಳೆ: ಮೊದಲ ಸೇಲ್ ಕಾಣುತ್ತಿರುವ ರಿಯಲ್‌ ಮಿ C30 ಬಂಪರ್ ಡಿಸ್ಕೌಂಟ್​​​ನಲ್ಲಿ ಲಭ್ಯ

ಭಾರತದಲ್ಲಿ ರಿಯಲ್ ಮಿ C30 ಸ್ಮಾರ್ಟ್​​ಫೋನ್ ಸ್ಮಾರ್ಟ್​​ಫೋನ್ ಒಟ್ಟು ಎರಡು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 2GB RAM ಮತ್ತು 32GB ಸ್ಟೋರೇಜ್ ಆಯ್ಕೆಗೆ ಕೇವಲ 7,499 ರೂ. ನಿಗದಿ ಮಾಡಲಾಗಿದೆ.

Realme C30: ಆಫರ್​ಗಳ ಸುರಿಮಳೆ: ಮೊದಲ ಸೇಲ್ ಕಾಣುತ್ತಿರುವ ರಿಯಲ್‌ ಮಿ C30 ಬಂಪರ್ ಡಿಸ್ಕೌಂಟ್​​​ನಲ್ಲಿ ಲಭ್ಯ
Realme C30
TV9 Web
| Edited By: |

Updated on:Jun 27, 2022 | 2:00 PM

Share

ಟೆಕ್‌ ಮಾರುಕಟ್ಟೆಯಲ್ಲಿ ಪ್ರಸಿದ್ಧ ರಿಯಲ್‌ ಮಿ (Realme) ಕಂಪನಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ವೈವಿಧ್ಯಮಯ ಫೀಚರ್​ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳನ್ನು (Smartphone) ಪರಿಚಯಿಸಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಕಳೆದ ವಾರವಷ್ಟೆ ರಿಯಲ್‌ ಮಿ ಕಂಪನಿ ಭಾರತದಲ್ಲಿ ರಿಯಲ್ ಮಿ ಸಿ 30 (Realme C30) ಫೋನನ್ನು ಲಾಂಚ್ ಮಾಡಿತ್ತು. ಇದೀಗ ಈ ಫೋನ್ ತನ್ನ ಮೊದಲ ಸೇಲ್‌ ಅನ್ನು ಆರಂಭಿಸಲಿದೆ. ಫ್ಲಿಪ್‌ಕಾರ್ಟ್‌ ಮತ್ತು ಅಧಿಕೃತ ವೆಬ್‌ಸೈಟ್‌ ರಿಯಲ್‌ ಮಿ.ಕಾಮ್‌ ಮೂಲಕ ಮಾರಾಟ ಕಾಣುತ್ತಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದು, 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ನೀಡಲಾಗಿದೆ. ಹಾಗಿದ್ರೆ ಇದರ ಬೆಲೆ ಎಷ್ಟು?, ಮೊದಲ ಸೇಲ್​​ನಲ್ಲಿ ಏನು ಆಫರ್ ನೀಡಲಾಗಿದೆ ಎಂಬುದನ್ನು ನೋಡೋಣ.

  1. ಭಾರತದಲ್ಲಿ ರಿಯಲ್ ಮಿ C30 ಸ್ಮಾರ್ಟ್​​ಫೋನ್ ಸ್ಮಾರ್ಟ್​​ಫೋನ್ ಒಟ್ಟು ಎರಡು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 2GB RAM ಮತ್ತು 32GB ಸ್ಟೋರೇಜ್ ಆಯ್ಕೆಗೆ ಕೇವಲ 7,499 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 3GB RAM ಮತ್ತು 32GB ರೂಪಾಂತರದ ಬೆಲೆ 8,299 ರೂ. ಆಗಿದೆ.
  2. ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಸ ಖರೀದಿಸಿದರೆ ಗ್ರಾಹಕರು 5% ಕ್ಯಾಶ್‌ಬ್ಯಾಕ್‌ ಪಡೆಯಲಿದ್ದಾರೆ. ಅಂತೆಯೆ ICICI ನೆಟ್ ಬ್ಯಾಂಕಿಂಗ್ ಮೂಲಕ ಖರೀದಿಸಿದರೆ 5% ತ್ವರಿತ ರಿಯಾಯಿತಿ, ಜೊತೆಗೆ 4,999 ರೂಗಳಲ್ಲಿ ಗೂಗಲ್‌ ನೆಕ್ಸ್ಟ್‌ ಹಬ್‌ ಅನ್ನು ನೀವು ಖರೀದಿಸಬಹುದಾಗಿದೆ.
  3. ರಿಯಲ್ ಮಿ C30 ಸ್ಮಾರ್ಟ್​​ಫೋನ್ 900×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಒಳಗೊಂಡಿದೆ.
  4. ಆಕ್ಟಾ-ಕೋರ್ ಯೂನಿಸೋಕ್‌ T612 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಪ್ರೊಸೆಸರ್‌ ಲೊ-ಲೇವೆಲ್‌ ಆಗಿದೆ, ಅಂದರೆ ಹಗುರವಾದ ಕಾರ್ಯಗಳಿಗೆ ಸೂಕ್ತವಾಗಿದೆ.
  5. ಇದನ್ನೂ ಓದಿ
    Image
    iPhone 13 Mini: ಐಫೋನ್ ಖರೀದಿಗೆ ಇದೇ ಬೆಸ್ಟ್​ ಟೈಮ್:​ 13 ಮಿನಿ, 12 ಮಿನಿ ಮೇಲೆ ಬಂಪರ್ ಡಿಸ್ಕೌಂಟ್
    Image
    Smartphone Tips: ಸ್ಮಾರ್ಟ್​ಫೋನ್ ಸೇಲ್ ಮಾಡುವ ಪ್ಲಾನ್​ ಇದೆಯೇ?: ಹಾಗಿದ್ರೆ ಇಲ್ಲಿ ಗಮನಿಸಿ
    Image
    USB Charger: ಮುಂದಿನ ದಿನಗಳಲ್ಲಿ ಕೇಬಲ್, ಚಾರ್ಜರ್​ಗಾಗಿ ಪರದಾಡಬೇಕಿಲ್ಲ: ನಡೆಯುತ್ತಿದೆ ಹೊಸ ಆವಿಷ್ಕಾರ
    Image
    Jio vs Airtel: 666 ರೂ. ಪ್ಲಾನ್: ಜಿಯೋ ಏರ್ಟೆಲ್​ನಲ್ಲಿ ಒಂದೇ ಬೆಲೆಯ ಯೋಜನೆ: ಯಾವುದು ಬೆಸ್ಟ್?
  6. ಇನ್ನು ಈ ಸ್ಮಾರ್ಟ್‌ಫೋನ್‌ ಸಿಂಗಲ್ ರಿಯರ್‌ ಕ್ಯಾಮೆರಾ ಹೊಂದಿದೆ. ಇದು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯ ಹೊಂದಿದೆ. ಇದಲ್ಲದೆ ವಾಟರ್‌ಡ್ರಾಪ್ ಶೈಲಿಯ ನಾಚ್‌ನೊಳಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ.
  7. 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದು ಒಂದು ದಿನ ಸುಲಭವಾಗಿ ಬಾಳಿಕೆ ಬರುತ್ತದೆ. ಈ ಬ್ಯಾಟರಿ 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಕನಿಷ್ಠ ಎರಡು ಗಂಟೆಗಳ ಕಾಲ ಬೇಕಾಗುತ್ತದೆ.

Best Smartphone: 12,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್​​ಫೋನ್ ಬೇಕಿದ್ದರೆ ಇಲ್ಲಿದೆ ನೋಡಿ

Published On - 1:59 pm, Mon, 27 June 22

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ