USB Charger: ಮುಂದಿನ ದಿನಗಳಲ್ಲಿ ಕೇಬಲ್, ಚಾರ್ಜರ್​ಗಾಗಿ ಪರದಾಡಬೇಕಿಲ್ಲ: ನಡೆಯುತ್ತಿದೆ ಹೊಸ ಆವಿಷ್ಕಾರ

USB Type-C: ಯುರೋಪಿಯನ್​ ಕಮಿಷನ್​ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಮೊಬೈಲ್​ ಫೋನ್​, ಐಪ್ಯಾಡ್ ಹಾಗೂ ಇಯರ್​ ಫೋನ್​​ಗಳಿಗೆ ಒಂದೇ ವಿಧದ ಚಾರ್ಜರ್​ ಪೋರ್ಟ್​​ ಇರಬೇಕೆಂದು ಆದೇಶ ಹೊರಡಿಸಿದೆ.

USB Charger: ಮುಂದಿನ ದಿನಗಳಲ್ಲಿ ಕೇಬಲ್, ಚಾರ್ಜರ್​ಗಾಗಿ ಪರದಾಡಬೇಕಿಲ್ಲ: ನಡೆಯುತ್ತಿದೆ ಹೊಸ ಆವಿಷ್ಕಾರ
Ajay V Bhatt
Follow us
TV9 Web
| Updated By: Vinay Bhat

Updated on: Jun 26, 2022 | 3:18 PM

ಟೆಕ್ ಮಾರುಕಟ್ಟೆಯಲ್ಲಿ ಈಗ ನಾನಾರೀತಿಯ ಚಾರ್ಜರ್​ಗಳಿವೆ. ಐಫೋನ್​ಗಳಿಗೆ ಒಂದು ವಿಧದ ಚಾರ್ಜರ್ ಆದರೆ ಆಂಡ್ರಾಯ್ಡ್​ನ ಒಂದೊಂದು ಕಂಪನಿಯ ಸ್ಮಾರ್ಟ್​​ಫೋನ್​ಗಳಿಗೆ ಅದರದ್ದೇ ಆದ ಪೋರ್ಟ್​​ಗಳಿಗೆ ಬೇರೆ ಬೇರೆ ಚಾರ್ಜರ್ ಇರುತ್ತದೆ. ಐಪಾಡ್​ ಮತ್ತು ಇಯರ್​ ಫೋನ್​ಗಳಿಗೂ ಪ್ರತ್ಯೇಕ ಚಾರ್ಜರ್​ಗಳಿವೆ. ಹೆಚ್ಚಾಗಿ ಆ್ಯಂಡ್ರಾಯ್ಡ್​ (Android) ಬಳಕೆದಾರರು ಟೈಪ್​- ಸಿ ಚಾರ್ಜರ್​, ಮೈಕ್ರೊ ಯುಎಸ್​ಬಿ (Micro USB) ಬಳಸುತ್ತಿದ್ದಾರೆ. ಹೀಗೆ ಅನೇಕ ಮಾದರಿಯ ಚಾರ್ಜರ್​​ಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದನ್ನು ಅರಿತಿರುವ ಯುರೋಪಿಯನ್​ ಕಮಿಷನ್​ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಮೊಬೈಲ್​ ಫೋನ್​, ಐಪ್ಯಾಡ್ ಹಾಗೂ ಇಯರ್​ ಫೋನ್​​ಗಳಿಗೆ ಒಂದೇ ವಿಧದ ಚಾರ್ಜರ್ (Charger)​ ಪೋರ್ಟ್​​ ಇರಬೇಕೆಂದು ಆದೇಶ ಹೊರಡಿಸಿದೆ.

ಈ ಬಗ್ಗೆ ಮಾತನಾಡಿರುವ ಯುಎಸ್​​ಬಿ ಅನ್ನು ಮೊದಲ ಬಾರಿಗೆ 1995 ರಲ್ಲಿ ಕಂಡು ಹಿಡಿದ ಭಾರತ ಮೂಲದ ಇಂಜಿನಿಯರ್ ಅಜಯ್ ವಿ ಭಟ್, “ಮುಂದಿನ ದಿನಗಳಲ್ಲಿ ಬಳಕೆದಾರರು ಯುಎಸ್​ಬಿ ಕೇವಲ ಅಥವಾ ಚಾರ್ಜರ್​ಗಾಗಿ ಅಲೆದಾಡುವ ಪ್ರಮೆಯವೇ ಬರುವುದಿಲ್ಲ ಎಂದು ಹೇಳಿದ್ದಾರೆ. ಯುಎಸ್​ಬಿ ಟೈ-ಸಿ ಚಾರ್ಜರ್ ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರವಹಿಸಲಿದೆ. ಇದರಿಂದ ಅತ್ಯಂತ ವೇಗವಾಗಿ ಚಾರ್ಜಿಂಗ್ ಆಗಲಿದೆ. ಇಷ್ಟು ಮಾತ್ರವಲ್ಲದೆ ನಿಮಗೆ ಫೈಲ್ ವರ್ಗಾವಣೆ ಕೂಡ ವೇಗವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.

Jio vs Airtel: 666 ರೂ. ಪ್ಲಾನ್: ಜಿಯೋ ಏರ್ಟೆಲ್​ನಲ್ಲಿ ಒಂದೇ ಬೆಲೆಯ ಯೋಜನೆ: ಯಾವುದು ಬೆಸ್ಟ್?

ಇದನ್ನೂ ಓದಿ
Image
Flipkart Electronics Sale: ಒಂದೇ ದಿನ ಬಾಕಿ: ಎಲೆಕ್ಟ್ರಾನಿಕ್ ಸೇಲ್​ನ ಈ ಆಫರ್ ಮಿಸ್ ಮಾಡ್ಬೇಡಿ
Image
Realme Narzo 50i Prime: ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜೆಟ್ ಬೆಲೆಯ ರಿಯಲ್‌ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್​​ಫೋನ್
Image
Reliance JIO: 56 GB ಡೇಟಾ, ಅನ್ಲಿಮಿಟೆಡ್ ಕಾಲ್: ಇದು ಜಿಯೋ ಕಂಪನಿಯ ಬಂಪರ್ ಆಫರ್
Image
WhatsApp: ನೀವು ವಾಟ್ಸ್​ಆ್ಯಪ್ ಕಂಪ್ಯೂಟರ್​ನಲ್ಲಿ ಉಪಯೋಗಿಸ್ತೀರ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

ಯುಎಸ್​ಬಿ ಟೈಪ್-ಸಿಯು ತನ್ನ ಮುಂದಿನ ಅಪ್ಡೇಟ್​ನಲ್ಲಿ 240W ವೇಗದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಸಾಕಷ್ಟು ಶಕ್ತಿಯುತವಾಗಿರುತ್ತದೆ. ದಿನಕಳೆದಂತೆ ಟೈಪ್-ಸಿ ಚಾರ್ಜರ್​ನ ಅಗತ್ಯ ಹೆಚ್ಚಾಗಲಿದ್ದು ಎಲ್ಲ ಸಾಧನಕ್ಕೂ ಇದನ್ನೆ ಅಳವಡಿಸಬೇಕಾಗಿ ಬರುತ್ತದೆ. ಪ್ರಪಂಚದಾದ್ಯಂತ ಅಂದಾಜು 6 ಶತಕೋಟಿ ಯುಎಸ್​ಬಿ ಕನೆಕ್ಟರ್‌ಗಳು ಬಳಕೆಯಲ್ಲಿವೆ ಎಂಬುದು ಅವರ ಮಾತು.

ಇನ್ನು ಯುರೋಪಿಯನ್​ ಕಮಿಷನ್​ ಹೇಳಿರುವಂತೆ ಮೊಬೈಲ್​ ಫೋನ್​, ಟ್ಯಾಬ್ಲೆಟ್​ ಮತ್ತು ಹೆಡ್​ಫೋನ್​ ಸಾಮಾನ್ಯ ಜಾರ್ಜಿಂಗ್​ ಪೋರ್ಟ್​​ ಇರಬೇಕೆಂದು ಸೂಚಿಸಿದೆ. ಅಂತೆಯೇ ಯುಎಸ್​ಬಿ-ಸಿ ಕನೆಕ್ಟರ್​ ಎಲ್ಲಾ ಸ್ಮಾರ್ಟ್​ಫೋನ್​ಗಳು, ಟ್ಯಾಬ್ಲೆಟ್​ಗಳು, ಹೆಡ್​ಫೋನ್​ಗಳು, ಫೋರ್ಟಬಲ್​ ಸ್ಪೀಕರ್​ಗಳು ಮತ್ತು ಹ್ಯಾಂಡ್​​ಹೆಲ್ಡ್​ ವಿಡಿಯೋಗೇಮ್​ ಕನ್ಸೋಲ್​ಗಳಿಗೆ  ಪ್ರಮಾಣಿತ ಪೋರ್ಡ್​ ನೀಡಬೇಕು ಎಂದಿದೆ. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗುತ್ತಿದೆ.

ಈ ವಿಚಾರ ತಿಳಿದು ಆ್ಯಪ್​ ಸಂಸ್ಥೆಯೊಂದು ಯುರೋಪಿಯನ್​ ಕಮಿಷನ್ ಹೊರಡಿಸಿರುವ ಆದೇಶವನ್ನು ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಿಕ್​ ಸಾಧನಗಳ ನಾವೀನ್ಯತೆಯನ್ನು ಮೊಟಕುಗೊಳಿಸುತ್ತದೆ. ಮತ್ತು ಗ್ರಾಹಕರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂದಿದೆ. ಚೀನಾ, ಜಪಾನ್, ಅಮೆರಿಕ ಸೇರಿದಂತೆ ಹಲವು ದೇಶಗಳು ವಿಭಿನ್ನವಾದ ಆ್ಯಂಡ್ರಾಯ್ಡ್​ ಮತ್ತು ಐಫೊನ್​ ಅನ್ನಯ ಉತ್ಪಾದಿಸುತ್ತಾ ಬಂದಿದೆ. ಇವೆಲ್ಲವು ಒಂದಕ್ಕಿಂತ ಒಂದು ರೀತಿಯ ಚಾರ್ಜರ್​ ಪೋರ್ಟ್​ ಹೊಂದಿದೆ. ಅದರಲ್ಲೂ ಅದೇ ಕಂಪನಿಗಳು ತಯಾರಿಸುವ ಇಯರ್​ಫೋನ್​ ಮತ್ತು ಚಾರ್ಜರ್​ ಫೋರ್ಟ್​ಗಳು ಬೇರ ಬೇರೆ ಆಗಿದೆ.

POCO F4 5G: ರಿಲೀಸ್ ಆದ ಎರಡೇ ದಿನಕ್ಕೆ ಪೋಕೋ F4 5G ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಡಿಸ್ಕೌಂಟ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ