Realme C30: ಕೇವಲ 7,499 ರೂ. ಗೆ ಹೊಸ ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ: ಏನೆಲ್ಲ ಫೀಚರ್ಸ್ ಇದೆ?
ಆಕರ್ಷಕ ಸ್ಮಾರ್ಟ್‌ಫೋನ್ ರಿಯಲ್ ಮಿ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಅದುವೇ ರಿಯಲ್ ಮಿ ಸಿ 30 (Realme C30). ಇದು ರಿಯಲ್ ಮಿ C ಸರಣಿಯಲ್ಲಿ ಬಂದಿರುವ ಮತ್ತೊಂದು ಹೊಸ ಫೋನ್ ಆಗಿದೆ.
ಟೆಕ್ ಮಾರುಕಟ್ಟೆಯಲ್ಲಿ ಪ್ರಸಿದ್ಧ ರಿಯಲ್ ಮಿ (Realme) ಕಂಪನಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ವೈವಿಧ್ಯಮಯ ಫೀಚರ್ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳನ್ನು (Smartphone) ಪರಿಚಯಿಸಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಮತ್ತೊಂದು ಆಕರ್ಷಕ ಸ್ಮಾರ್ಟ್‌ಫೋನ್ ರಿಯಲ್ ಮಿ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಅದುವೇ ರಿಯಲ್ ಮಿ ಸಿ 30 (Realme C30). ಇದು ರಿಯಲ್ ಮಿ C ಸರಣಿಯಲ್ಲಿ ಬಂದಿರುವ ಮತ್ತೊಂದು ಹೊಸ ಫೋನ್ ಆಗಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದು, ಡೀಸೆಂಟ್ ಕ್ಯಾಮೆರಾ ಜೊತೆಗೆ 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ನೀಡಲಾಗಿದೆ. ಹಾಗಿದ್ರೆ ಇದರ ಬೆಲೆ ಎಷ್ಟು ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.
- ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಒಟ್ಟು ಎರಡು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 2GB RAM ಮತ್ತು 32GB ಸ್ಟೋರೇಜ್ ಆಯ್ಕೆಗೆ ಕೇವಲ 7,499 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 3GB RAM ಮತ್ತು 32GB ರೂಪಾಂತರದ ಬೆಲೆ 8,299 ರೂ. ಆಗಿದೆ.ಈ ಫೋನ್ ಜೂನ್ 27 ರಿಂದ ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿ.ಕಾಮ್ ಮೂಲಕ ಖರೀದಿಗೆ ಸಿಗಲಿದೆ.
- ರಿಯಲ್ ಮಿ C30 ಸ್ಮಾರ್ಟ್‌ಫೋನ್ 900×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಒಳಗೊಂಡಿದೆ. ಆಕ್ಟಾ-ಕೋರ್ ಯೂನಿಸೋಕ್ T612 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಈ ಪ್ರೊಸೆಸರ್ ಲೊ-ಲೇವೆಲ್ ಆಗಿದೆ, ಅಂದರೆ ಹಗುರವಾದ ಕಾರ್ಯಗಳಿಗೆ ಸೂಕ್ತವಾಗಿದೆ.
- ಇನ್ನು ಈ ಸ್ಮಾರ್ಟ್‌ಫೋನ್ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಇದಲ್ಲದೆ ವಾಟರ್‌ಡ್ರಾಪ್ ಶೈಲಿಯ ನಾಚ್‌ನೊಳಗೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ.
- 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದು ಒಂದು ದಿನ ಸುಲಭವಾಗಿ ಬಾಳಿಕೆ ಬರುತ್ತದೆ. ಈ ಬ್ಯಾಟರಿ 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಕನಿಷ್ಠ ಎರಡು ಗಂಟೆಗಳ ಕಾಲ ಬೇಕಾಗುತ್ತದೆ.
ಇದನ್ನೂ ಓದಿ
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Mon, 20 June 22