Realme Q5x: ಮಾರುಕಟ್ಟೆಗೆ ಬಂದ ರಿಯಲ್ ಮಿ Q5x: ರಿಯಲ್ ಮಿಯಿಂದ ಬಜೆಟ್ ಬೆಲೆಗೆ ಬಂಪರ್ ಫೋನ್
ರಿಯಲ್ ಮಿ ಕಂಪನಿ ಒಂದೇ ದಿನ ಎರಡು ಫೋನ್ಗಳನ್ನು ಮಾರುಕಟ್ಟೆಯಲ್ಲಿ ರಿಲೀಸ್ ಮಾಡಿದೆ. ರಿಯಲ್ ಮಿ ಸಿ30 ಮತ್ತು ರಿಯಲ್‌ಮಿ ಕ್ಯೂ5ಎಕ್ಸ್ (Realme Q5x) ಎಂಬ ಎರಡು ಹೊಸ ಫೋನ್ ಲಾಂಚ್ ಮಾಡಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈರೇಂಜ್ ವರೆಗೆ ಫೋನ್ಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಪ್ರಸಿದ್ಧ ರಿಯಲ್ ಮಿ (Realme) ಕಂಪನಿ 2022 ರಲ್ಲಂತು ಅತ್ಯುತ್ತಮ ಮೊಬೈಲ್ಗಳನ್ನು ಪರಿಚಯಿಸಿದೆ. ಇನ್ನುಕೂಡ ಅನೇಕ ಫೋನ್ಗಳು ಬಿಡುಗಡೆ ತಯಾರಾಗುತ್ತಿದೆ. ಹೀಗಿರುವಾಗ ಕಂಪನಿ ಒಂದೇ ದಿನ ಎರಡು ಫೋನ್ಗಳನ್ನು ಮಾರುಕಟ್ಟೆಯಲ್ಲಿ ರಿಲೀಸ್ ಮಾಡಿದೆ. ರಿಯಲ್ ಮಿ ಸಿ30 ಮತ್ತು ರಿಯಲ್‌ಮಿ ಕ್ಯೂ5ಎಕ್ಸ್ (Realme Q5x) ಎಂಬ ಎರಡು ಹೊಸ ಫೋನ್ ಲಾಂಚ್ ಮಾಡಿದೆ. ಇದರಲ್ಲಿ C30 ಭಾರತದಲ್ಲಿ ಕೇವಲ 7,499 ರೂ. ಗೆ ಬಿಡುಗಡೆಯಾದರೆ ರಿಯಲ್ ಮಿ Q ಸರಣಿಯಲ್ಲಿ ಬಂದಿರುವ ರಿಯಲ್ ಮಿ Q5x ಸ್ಮಾರ್ಟ್‌ಫೋನ್ ವಿದೇಶದಲ್ಲಿ ಅನಾವರಣಗೊಂಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನಿನ ಫೀಚರ್ಸ್ ಏನೇನು?, ಬೆಲೆ ಎಷ್ಟು ಎಂಬುದನ್ನು ನೋಡೋಣ.
- ಸದ್ಯಕ್ಕೆ ರಿಯಲ್ ಮಿ Q5x ಸ್ಮಾರ್ಟ್‌ಫೋನ್ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಕೆಲವೇ ತಿಂಗಳಲ್ಲಿ ಭಾರತಕ್ಕೂ ಕಾಲಿಡಲಿದೆ. 4GB RAM + 64GB ಸ್ಟೋರೇಜ್ ಒಂದು ಮಾದರಿಯಲ್ಲಷ್ಟೆ ರಿಲೀಸ್ ಆಗಿರುವ ಈ ಸ್ಮಾರ್ಟ್‌ಫೋನ್ ಬೆಲೆ CNY 999. ಭಾರತದಲ್ಲಿ ಇದರ ಬೆಲೆ ಅಂದಾಜಿ 11,700 ರೂ. ಎನ್ನಬಹುದು.
- ಈ ಫೋನ್ ಇಂಕ್ ಕ್ಲೌಡ್ ಬ್ಲ್ಯಾಕ್ ಮತ್ತು ಸ್ಟಾರ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಚೀನಾದಲ್ಲಿ ಈ ಸ್ಮಾರ್ಟ್‌ಫೋನ್ ಪ್ರಿ-ಬುಕಿಂಗ್‌ಗೆ ಲಭ್ಯವಿದೆ, ಇದು ಜೂನ್ 23 ರಿಂದ ತನ್ನ ಮೊದಲ ಸೇಲ್ ಪ್ರಾರಂಭಿಸಿಲಿದೆ.
- ರಿಯಲ್ ಮಿ Q5x ಸ್ಮಾರ್ಟ್‌ಫೋನ್ 6.5 ಇಂಚಿನ HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 720×1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. 88.7% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡಲಾಗಿದೆ.
- ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.
- ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಕ್ಯಾಮೆರಾ ಸೆಟಪ್ ಅನ್ನು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
- ರಿಯಲ್ ಮಿ Q5x ಸ್ಮಾರ್ಟ್‌ಫೋನ್ 10W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್ ಕಾರ್ಡ್ ಬೆಂಬಲ, ವೈ-ಫೈ, ಬ್ಲೂಟೂತ್ 5.0, ಟೈಪ್-ಸಿ ಪೋರ್ಟ್ ಅಳವಡಿಸಲಾಗಿದೆ.
ಇದನ್ನೂ ಓದಿ
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ