ಭರ್ಜರಿ ಕ್ಯಾಮೆರಾ, ಬೊಂಬಾಟ್ ಬ್ಯಾಟರಿ: 30,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು ಇದುವೇ ನೋಡಿ
Smartphone under RS. 40000: ಇತ್ತೀಚೆಗಷ್ಟೆ 40,000 ರೂ. ಒಳಗೆ ಬಿಡುಗಡೆ ಆಗಿ ಸದ್ಯ ಭರ್ಜರಿ ಸೇಲ್ ಕಾಣುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನ ಈ ಲೇಖನದಲ್ಲಿ ನೋಡೋಣ.
ಮೊಬೈಲ್ (Mobile) ವ್ಯಾಪಾರದಲ್ಲಿ ದೊಡ್ಡ ಮಾರುಕಟ್ಟೆಯನ್ನೇ ಹೊಂದಿರುವ ಭಾರತ ಅನೇಕ ಸ್ಮಾರ್ಟ್ ಫೋನ್ (Smartphone) ಬ್ರ್ಯಾಂಡ್ಗಳ ನೆಚ್ಚಿನ ತಾಣವಾಗಿದೆ. ವಿವಿಧ ಬೆಲೆಗಳ ಆಯ್ಕೆಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳು ಇಲ್ಲಿ ಲಭ್ಯವಿದೆ. ಬಜೆಟ್ ಬೆಲೆಯ ಜೊತೆಗೆ ಮಧ್ಯಮ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಕೂಡ ಖರೀದಿಸಬಹುದಾಗಿದೆ. ಭಾರತದಲ್ಲಿ ಕಡಿಮೆ ಎಂದರೂ ವಾರಕ್ಕೆ ಮೂರರಿಂದ ನಾಲ್ಕು ಹೊಸ ಫೋನ್ಗಳು ಲಗ್ಗೆಯಿಡುತ್ತವೆ. ಇದರಲ್ಲಿ ಹೆಚ್ಚಿನ ಜನರು ಮಧ್ಯ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದಕ್ಕೆ ಮುಂದಾಗುತ್ತಾರೆ. ಇವುಗಳಲ್ಲಿ 40,000 ರೂ. ಒಳಗಿನ ಸ್ಮಾರ್ಟ್‌ಫೋನ್‌ಗಳು (Smartphone Under RS. 30,000) ಸಾಕಷ್ಟು ಸಂಚಲನ ಸೃಷ್ಟಿಸಿವೆ. ಹಾಗಾದ್ರೆ ಇತ್ತೀಚೆಗಷ್ಟೆ 40,000 ರೂ. ಒಳಗೆ ಬಿಡುಗಡೆ ಆಗಿ ಸದ್ಯ ಭರ್ಜರಿ ಸೇಲ್ ಕಾಣುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನ ಈ ಲೇಖನದಲ್ಲಿ ನೋಡೋಣ.
ಐಕ್ಯೂ 9 SE ಸ್ಮಾರ್ಟ್‌ಫೋನ್ 30,000 ರೂ. ಒಳಗೆ ಮಾರಾಟ ಆಗುತ್ತಿರುವ ಅತ್ಯುತ್ತಮ ಫೋನ್ ಆಗಿದೆ. ಇದರ ಆರಂಭಿಕ ಬೆಲೆ 33,990 ರೂ. ಈ ಫೋನ್ 6.62 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಜೊತೆಗೆ ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX598 ಸೆನ್ಸಾರ್ ಅನ್ನು ಹೊಂದಿದೆ. 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 66W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 37,999 ರೂ. ಆಗಿದೆ. ಇದು 6.55-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಒಳಗೊಂಡಿದೆ. ಇದು ಸ್ನಾಪ್‌ಡ್ರಾಗನ್ 888 ಪ್ರೊಸೆಸರ್ ಸಾಮರ್ಥ್ಯದ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48MP ಸೆನ್ಸಾರ್, 16MP ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
Best Smartphone: 30,000 ರೂ. ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿದೆ ನೋಡಿ
ಶವೋಮಿ 11X ಪ್ರೊ ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದ್ದು, ಕೇವಲ 29,999 ರೂ. ಗಳಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಮ್ ಸ್ನಾಪ್ಡ್ರಾಗನ್ 888 SoC ಪ್ರೊಸೆಸರ್ ನೀಡಲಾಗಿದ್ದು ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಒಳಗೊಂಡಿದೆ. ಇದಲ್ಲದೆ ಈ ಫೋನ್ 20 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 4,520mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 33W ವೇಗದ ಚಾರ್ಜಿಂಗ್ ಮತ್ತು 2.5W ನಲ್ಲಿ ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ರಿಯಲ್‌ಮಿ GT 2 ಫೋನ್ 6.62 ಇಂಚಿನ ಫುಲ್ ಹೆಚ್‌ಡಿ ಪ್ಲಸ್ E4 AMOLED ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX682 ಸೆನ್ಸಾರ್ ಹೊಂದಿದೆ. ಜೊತೆಗೆ 5000 mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದ್ದು, 65W ಸೂಪರ್ ಡಾರ್ಟ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಬೆಲೆ 34,990 ರೂ. ಆಗಿದೆ.
ಶವೋಮಿ 11T ಪ್ರೊ 5G ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 39,999 ರೂ. ಇದೆ. ಇದು 6.67 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ಹೈಪರ್‌ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Mon, 20 June 22