Kannada News Photo gallery Poco F4 5G Xiaomi sub brand Poco Set to relese new smartphone 64MP primary lens with a blur reduction feature
Poco F4 5G: ಪೋಕೋ ರಿಲೀಸ್ ಮಾಡುತ್ತಿದೆ ಹೊಸ ಸ್ಮಾರ್ಟ್ಫೋನ್: ಇದರ ಕ್ಯಾಮೆರಾಕ್ಕೆ ಫಿದಾ ಆಗ್ತೀರ
ನಂಬರ್ ಒನ್ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಶವೋಮಿಯ ಪ್ರಮುಖ ಸಬ್ ಬ್ರ್ಯಾಂಡ್ Poco ಭಾರತೀಯ ಮಾರುಕಟ್ಟೆಯಲ್ಲಿ ಹೊಸ 5G ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಅದುವೇ Poco F4 5G. ಈ ಫೋನ್ ಇದೇ ಜೂನ್ 23 ರಂದು ದೇಶೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ.
ಇದು 256GB ಸಂಗ್ರಹಣೆ ಮತ್ತು 12GB RAM ನೊಂದಿಗೆ ಬರುವ ಸಾಧ್ಯತೆ ಇದೆ. ಭಾರತದಲ್ಲಿ ಇದರ ಬೆಲೆ 30,000 ರೂ. ಗಿಂತ ಕಡಿಮೆ ಬೆಲೆಗೆ ಮಾರಾಟ ಆಗಲಿದೆ.
1 / 5
Qualcomm Snapdragon 870 SOC ಚಿಪ್ಸೆಟ್ ನಿಂದ ನಡೆಸಲ್ಪಡುವ ಸ್ಮಾರ್ಟ್ ಫೋನ್ ಲಿಕ್ವಿಡ್ ಕೂಲ್ ಸಿಸ್ಟಮ್ 2.0 ನಂತಹ ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಲಗ್ಗೆಯಿಡಲಿದೆ. ಇದರ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 35,000 ರೂ. ಇರಬಹುದು ಎನ್ನಲಾಗಿದೆ.
2 / 5
ನಂಬರ್ ಒನ್ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಶವೋಮಿಯ ಪ್ರಮುಖ ಸಬ್ ಬ್ರ್ಯಾಂಡ್ Poco ಜಾಗತೀಕ ಮಾರುಕಟ್ಟೆಯಲ್ಲಿ ಹೊಸ 5G ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಅದುವೇ Poco F4 5G. ಈ ಫೋನ್ ಇಂದು ಸಂಜೆ 5:30ಕ್ಕೆ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ.
3 / 5
ಈ ಫೋನ್ ನ ವಿಶೇಷತೆಗೆ ಸಂಬಂಧಿಸಿದಂತೆ, ಇದು 6.67 ಇಂಚಿನ ಪೂರ್ಣ HD + AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 67 ವ್ಯಾಟ್ ವೇಗದ ಬೆಂಬಲದೊಂದಿಗೆ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
4 / 5
ಈ ಸ್ಮಾರ್ಟ್ ಫೋನ್ ನಲ್ಲಿ ಕ್ಯಾಮೆರಾಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶೇಷವಾಗಿರುವ 64 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾದೊಂದಿಗೆ ಬರುತ್ತದೆ. ಜೊತೆಗೆ 48 ಮೆಗಾಪಿಕ್ಸೆಲ್ + 8 ಮೆಗಾಪಿಕ್ಸೆಲ್ + 2 ಮೆಗಾಪಿಕ್ಸೆಲ್ ಕೂಡ ಇರಲಿದೆಯಂತೆ. ಮುಂಬಾಗ ಸೆಲ್ಫಿಗಾಗಿ 20 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.