Tecno Spark 9: 11GB RAM ಇರುವ ಹೊಸ ಟೆಕ್ನೋ ಸ್ಪಾರ್ಕ್ 9 ಫೋನ್​ ಕೇವಲ 9,499 ರೂ. ಮಾರಾಟ

Amazon Prime Day sale: ಟೆಕ್ನೋ ಸ್ಪಾರ್ಕ್ 9 (Tecno Spark 9). ಈ ಫೋನ್ ಇದೀಗ ಅಮೆಜಾನ್​ನಲ್ಲಿ ಖರೀದಿಗೆ ಸಿಗುತ್ತಿದೆ. ವಿಶೇಷವಾಗಿ 11GB RAM ಹೊಂದಿರುವ ಟೆಕ್ನೋ ಸ್ಪಾರ್ಕ್ 9 ಪ್ರೈಮ್ ಡೇ ಸೇಲ್ ಪ್ರಮುಕ್ತ ಮಾರಾಟ ಕಾಣುತ್ತಿದೆ.

Tecno Spark 9: 11GB RAM ಇರುವ ಹೊಸ ಟೆಕ್ನೋ ಸ್ಪಾರ್ಕ್ 9 ಫೋನ್​ ಕೇವಲ 9,499 ರೂ. ಮಾರಾಟ
Tecno Spark 9
Follow us
TV9 Web
| Updated By: Vinay Bhat

Updated on: Jul 24, 2022 | 6:45 AM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್​ಗಳನ್ನು ಅನಾವರಣ ಮಾಡಿ ಯಶಸ್ಸು ಕಂಡಿರುವ ಟೆಕ್ನೋ (Tecno) ಕಂಪನಿ ಕಳೆದ ವಾರವಷ್ಟೆ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ನೂತನ ಸ್ಮಾರ್ಟ್‌ಫೋನ್ ಒಂದನ್ನು ಅನಾವರಣ ಮಾಡಿತ್ತು. ಅದುವೇ ಟೆಕ್ನೋ ಸ್ಪಾರ್ಕ್ 9 (Tecno Spark 9). ಈ ಫೋನ್ ಇದೀಗ ಅಮೆಜಾನ್​ನಲ್ಲಿ ಖರೀದಿಗೆ ಸಿಗುತ್ತಿದೆ. ವಿಶೇಷವಾಗಿ 11GB RAM ಹೊಂದಿರುವ ಟೆಕ್ನೋ ಸ್ಪಾರ್ಕ್ 9 ಪ್ರೈಮ್ ಡೇ ಸೇಲ್ ಪ್ರಮುಕ್ತ ಮಾರಾಟ ಕಾಣುತ್ತಿದೆ. ಡ್ಯುಯೆಲ್ ರಿಯರ್ ಕ್ಯಾಮೆರಾ ಹೊಂದಿರುವ ಈ ಫೋನಿನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಆಂಡ್ರಾಯ್ಡ್ 12 ಮೂಲಕ ಕಾರ್ಯನಿರ್ವಹಿಸುತ್ತದೆ.

  1. ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಒಂದು ಆಯ್ಕೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಇದರ 11GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ಕೇವಲ 9,499 ರೂ. ಆಗಿದೆ.
  2. ಈ ಫೋನ್‌ ಇನ್ಫಿನಿಟಿ ಬ್ಲ್ಯಾಕ್ ಮತ್ತು ಸ್ಕೈ ಮಿರರ್ ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಅಮೆಜಾನ್​ನಲ್ಲಿ ನಡೆಯಲಿರುವ ಪ್ರೈಮ್ ಡೇ ಸೇಲ್​ನಲ್ಲಿ ಖರೀದಿಸಬಹುದು.
  3. ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಡಾಟ್ ನಾಚ್ ಡಿಸ್‌ಪ್ಲೇ ಆಗಿದೆ. 90Hz ರಿಫ್ರೆಶ್ ರೇಟ್​ನಿಂದ ಕೂಡಿದೆ.
  4. ಮೀಡಿಯಾ ಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 ನಲ್ಲಿ ಕಾರ್ಯನಿರ್ವಹಿಸುತ್ತದೆ.
  5. ಇದನ್ನೂ ಓದಿ
    Image
    Galaxy M13: 6000mAh ಬ್ಯಾಟರಿ, 50MP ಕ್ಯಾಮೆರಾ: ಪ್ರೈಮ್ ಡೇ ಸೇಲ್​ನಲ್ಲಿ ಗ್ಯಾಲಕ್ಸಿ M13 ಭರ್ಜರಿ ಮಾರಾಟ
    Image
    Flipkart: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್: 108MP ಕ್ಯಾಮೆರಾದ ಈ ಫೋನ್​ಗೆ ಬಂಪರ್ ಡಿಸ್ಕೌಂಟ್
    Image
    Amazon Prime Day Sale: ಇಂದಿನಿಂದ ಅಮೆಜಾನ್ ಪ್ರೈಮ್ ಡೇ ಸೇಲ್: 30,000 ಕ್ಕೂ ಅಧಿಕ ಉತ್ಪನ್ನಗಳ ಮೇಲೆ ಡಿಸ್ಕೌಂಟ್
    Image
    ಫೋನ್ ಕಳೆದುಕೊಂಡರೆ ಅದರಲ್ಲಿದ್ದ ಫೋನ್ ಪೇ, ಗೂಗಲ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?
  6. ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಡ್ಯುಯೆಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ.
  7. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದು 30 ದಿನಗಳ ವರೆಗೆ ಸ್ಟಾಂಡ್ ಬೈ ಟೈಮ್ ನೀಡುತ್ತದೆ ಎಂದು ಕಂಪನಿ ಹೇಳಿದೆ.