AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Prime Day Sale: ಇಂದಿನಿಂದ ಅಮೆಜಾನ್ ಪ್ರೈಮ್ ಡೇ ಸೇಲ್: 30,000 ಕ್ಕೂ ಅಧಿಕ ಉತ್ಪನ್ನಗಳ ಮೇಲೆ ಡಿಸ್ಕೌಂಟ್

Prime Day: ಅಮೆಜಾನ್​ನಲ್ಲಿ ಜುಲೈ 23 ಹಾಗೂ ಜುಲೈ 24 ಎರಡು ದಿನಗಳ ಕಾಲ ಅಮೆಜಾನ್ ಪ್ರೈಮ್ ಡೇ ಸೇಲ್ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಈ ಸೇಲ್​ನಲ್ಲಿ ಬಹಳಷ್ಟು ವಿಶೇಷವಾದ ಕೊಡುಗೆಗಳು ಒಳಗೊಂಡಿದೆ.

Amazon Prime Day Sale: ಇಂದಿನಿಂದ ಅಮೆಜಾನ್ ಪ್ರೈಮ್ ಡೇ ಸೇಲ್: 30,000 ಕ್ಕೂ ಅಧಿಕ ಉತ್ಪನ್ನಗಳ ಮೇಲೆ ಡಿಸ್ಕೌಂಟ್
Amazon Prime Day 2022
TV9 Web
| Updated By: Vinay Bhat|

Updated on:Jul 23, 2022 | 12:36 PM

Share

ಅಮೆಜಾನ್ ಇಂಡಿಯಾದಲ್ಲಿ ಬಹುನಿರೀಕ್ಷಿತ ಅಮೆಜಾನ್‌ ಪ್ರೈಮ್‌ ಡೇ 2022 ಸೇಲ್ (Amazon Prime Day Sale) ಶುರುವಾಗಿದೆ. ಜುಲೈ 23 ಹಾಗೂ ಜುಲೈ 24 ಎರಡು ದಿನಗಳ ಕಾಲ ಈ ಮೇಳ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಈ ಸೇಲ್​ನಲ್ಲಿ ಬಹಳಷ್ಟು ವಿಶೇಷವಾದ ಕೊಡುಗೆಗಳು ಒಳಗೊಂಡಿದೆ. ಮುಖ್ಯವಾಗಿ ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ಗ್ರಾಹಕರು ಸ್ಮಾರ್ಟ್‌ಫೋನ್‌ಗಳು (Smartphone), ಧರಿಸಬಹುದಾದ ಸಾಧನಗಳು, ಲ್ಯಾಪ್‌ಟಾಪ್‌ಗಳು (Laptops), ಸ್ಮಾರ್ಟ್ ಟಿವಿಗಳು ಮತ್ತು ಇತರ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ವಸ್ತುಗಳು ಮುಂತಾದ ವಿಭಾಗಗಳಲ್ಲಿ ಆಕರ್ಷಕ ರಿಯಾಯಿತಿ ಪಡೆಯಬಹುದು. ಅಚ್ಚರಿ ಎಂಬಂತೆ ಬರೋಬ್ಬರಿ 30,000 ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಬಿಡುಗಡೆಯಾಗುತ್ತಿದೆ.

ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಿಗೆ, ಆಯ್ದ ಇಯರ್‌ಬಡ್ಸ್‌ಗಳಿಗೆ, ಜನಪ್ರಿಯ ಸಂಸ್ಥೆಗಳ ಲ್ಯಾಪ್‌ಟಾಪ್‌ಗಳಿಗೆ, ಪವರ್‌ ಬ್ಯಾಂಕ್‌ ಸೇರಿದಂತೆ ಇತರೆ ಕೆಲವು ಅಗತ್ಯ ಉತ್ಪನ್ನಗಳು ಆಕರ್ಷಕ ಡಿಸ್ಕೌಂಟ್‌ ನಲ್ಲಿ ಲಭ್ಯ ಆಗುತ್ತಿವೆ. ಈ ಬಾರಿ ಕಾಂಬೊ ಆಫರ್ ಕೂಡ ನೀಡಲಾಗಿದ್ದು ಎಕೋ ಡಾಟ್ ಮತ್ತು ಸ್ಮಾರ್ಟ್​ ಬಲ್ಬ್ ಜೊತೆಯಾಗಿ ಕೇವಲ 4199 ರೂ. ಗೆ ನಿಮ್ಮದಾಗಿಸಬಹುದು. ಫೈಯರ್ ಟಿವಿ ಸ್ಟಿಕ್ ಕೇವಲ 2,199 ರೂ. ಗೆ ಮಾರಾಟ ಆಗುತ್ತಿದೆ.

ಎಂಐ ನೋಟ್​ಬುಕ್ ಆಲ್ಟ್ರಾ ಲ್ಯಾಪ್​ಟಾಪ್ ಆಕರ್ಷಕ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಕೇವಲ 57,700 ರೂ. ಗೆ ಖರೀದಿಸಬಹುದು. ಜೊತೆಗೆ Dell Inspiron 3515 ಬೆಲೆ 37990 ರೂ. ಆಗಿದೆ. ಸ್ಯಾಮ್‌ಸಂಗ್‌ ಸಂಸ್ಥೆಯ ಪ್ರೀಮಿಯಂ TWS ಇಯರ್‌ಬಡ್‌ ಗ್ಯಾಲಕ್ಸಿ ಬಡ್ಸ್‌ ಪ್ರೊ ಅಮೆಜಾನ್ ಅರ್ಲಿ ಪ್ರೈಮ್ ಡೇ ಡೀಲ್‌ಗಳ ಭಾಗವಾಗಿ ಫ್ಲಾಟ್ 62% ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ. ಇದರ ಬೆಲೆಯು 11,200 ರೂ ಇದ್ದು, ರಿಯಾಯಿತಿಯ ನಂತರ 6,790 ರೂ ನಲ್ಲಿ ಲಭ್ಯವಿದೆ.

ಇದನ್ನೂ ಓದಿ
Image
ಫೋನ್ ಕಳೆದುಕೊಂಡರೆ ಅದರಲ್ಲಿದ್ದ ಫೋನ್ ಪೇ, ಗೂಗಲ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?
Image
Redmi k50i 5G: ಭಾರತದಲ್ಲಿ ಇಂದಿನಿಂದ ರೆಡ್ಮಿ K50i ಮಾರಾಟ ಆರಂಭ: ಈ ಫೋನನ್ನು ಖರೀದಿಸಬಹುದೇ?
Image
WhatsApp: ವಾಟ್ಸ್​ಆ್ಯಪ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿಯಿರಿ: ಹೇಗೆ ಗೊತ್ತೇ?
Image
Google: ಪ್ಲೇ ಸ್ಟೋರ್​ನಲ್ಲಿ ಅಪ್ಲಿಕೇಶನ್ ಅನುಮತಿ ಲಿಸ್ಟ್​ ಮರುಸ್ಥಾಪಿಸಲು ಮುಂದಾದ ಗೂಗಲ್

ರೆಡ್ಮಿ ಸ್ಮಾರ್ಟ್​ LED TV X50 ಕೇವಲ 28,999 ರೂ. ಗೆ ಸೇಲ್ ಕಾಣುತ್ತಿದೆ. ಶವೋಮಿ ಹೋಮ್ ಸೆಕ್ಯುರಿಟಿ ಕ್ಯಾಮೆರಾ 1,650 ರೂ. ರಿಯಾಯಿತಿಯ ನಂತರ 2,799 ರೂ ನಲ್ಲಿ ಲಭ್ಯವಿದೆ. ಇದು 2i FHD ರೆಸಲ್ಯೂಶನ್ ಜೊತೆಗೆ AI-ಚಾಲಿತ ಮೋಷನ್ ಡಿಟೆಕ್ಷನ್, IR-ಆಧಾರಿತ ರಾತ್ರಿ ದೃಷ್ಟಿ ಮತ್ತು 360-ಡಿಗ್ರಿ ವೀಕ್ಷಣೆಯ ಆಯ್ಕೆ ಪಡೆದಿದೆ. ಅಂತೆಯೆ ಶವೋಮಿಯ 10000mAh ಪವರ್ ಬ್ಯಾಂಕ್ ಪ್ರೈಮ್ ಅರ್ಲಿ ಡೇ ಡೀಲ್‌ಗಳ ಭಾಗವಾಗಿ 23% ರಷ್ಟು ರಿಯಾಯಿತಿಯನ್ನು ಪಡೆದುಕೊಂಡಿದೆ. ಇದು 300 ರೂ. ರಿಯಾಯಿತಿ ನಂತರ 999 ರೂ. ನಲ್ಲಿ ಲಭ್ಯವಿದೆ.

ಇನ್ನು ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ ಬಡ್ಸ್ ಡಿವೈಸ್‌ 2,000 ರೂ. ರಿಯಾಯಿತಿಯ ನಂತರ 2,999 ರೂ ನಲ್ಲಿ ಲಭ್ಯವಿದೆ. ಇದು ಏರ್ 2 ANC ಬೆಂಬಲದೊಂದಿಗೆ ಬರುತ್ತದೆ. ಇದು ಚಾರ್ಜಿಂಗ್ ಕೇಸ್ ಸೇರಿದಂತೆ 25 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಮೊಗ್ಗುಗಳು 10 ಎಂಎಂ ಡ್ರೈವರ್‌ಗಳೊಂದಿಗೆ ಬರುತ್ತವೆ.

ಗ್ರಾಹಕರು ICICI ಬ್ಯಾಂಕ್ ಮತ್ತು SBI ಕಾರ್ಡ್‌ಗಳು ಹಾಗೂ EMI ವಹಿವಾಟುಗಳ ಮೂಲಕ ವಿವಿಧ ಉತ್ಪನ್ನಗಳ ಮೇಲೆ 10% ಡಿಸ್ಕೌಂಟ್‌ ಪಡೆಯಲಿದ್ದಾರೆ. ಅಲ್ಲದೆ ಅಮೆಜಾನ್ ತನ್ನ ಎಕೋ, ಫೈರ್ ಟಿವಿ ಮತ್ತು ಕಿಂಡಲ್ ಡಿವೈಸ್‌ಗಳ ಮೇಲೆ 55% ರಿಯಾಯಿತಿಯನ್ನು ನೀಡಲಿದೆ. ಐಫೋನ್ 13, ಇನ್​ಪ್ಲಸ್ 9 ಸರಣಿ, ರೆಡ್ಮಿ ನೋಟ್ 10 ಸರಣಿ, ಗ್ಯಾಲಕ್ಸಿS21FE, ಐಕ್ಯೂ ನಿಯೋ 6 ಸೇರಿದಂತೆ ಅನೇಕ ಫೋನ್​ಗಳ ಮೇಲೆ ದೊಡ್ಡ ಮಟ್ಟದ ಡಿಸ್ಕೌಂಟ್​ನಲ್ಲಿ ಮಾರಾಟ ಆಗುತ್ತಿದೆ.

Published On - 12:36 pm, Sat, 23 July 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ