Amazon: ಜುಲೈ 23ಕ್ಕೆ ಅಮೆಜಾನ್ ಪ್ರೈಮ್ ಡೇ ಸೇಲ್: ಟಾಪ್ ಡೀಲ್ಸ್ ಕುರಿತ ಮುಖ್ಯ ಮಾಹಿತಿ ಇಲ್ಲಿದೆ
Amazon Prime Day Sale 2022: ಅಮೆಜಾನ್ ಇಂಡಿಯಾದಲ್ಲಿ ಅಮೆಜಾನ್ ಪ್ರೈಮ್ ಡೇ 2022 ಸೇಲ್ಗೆ (Amazon Prime Day Sale) ದಿನಗಣನೆ ಶುರುವಾಗಿದೆ. ಇದೇ ಜುಲೈ 23 ರಿಂದ ಪ್ರಾರಂಭವಾಗಲಿದೆ.
ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಲು ಇ-ಕಾಮರ್ಸ್‌ಗಳತ್ತ (e-commerce) ಹೆಚ್ಚು ವಾಲುತ್ತಿದ್ದಾರೆ. ನಿವೇನಾದರು ಆನ್‌ಲೈನ್ ಮೂಲಕ ಸ್ಮಾರ್ಟ್‌ಫೋನ್ (Smartphone) ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಆಸಕ್ತಿ ಹೊಂದಿದ್ದರೆ ಭರ್ಜರಿ ಮೇಳ ಶುರುವಾಗುವುದರಲ್ಲಿದೆ. ಅಮೆಜಾನ್ ಇಂಡಿಯಾದಲ್ಲಿ ಅಮೆಜಾನ್ ಪ್ರೈಮ್ ಡೇ 2022 ಸೇಲ್ಗೆ (Amazon Prime Day Sale) ದಿನಗಣನೆ ಶುರುವಾಗಿದೆ. ಇದೇ ಜುಲೈ 23 ರಿಂದ ಪ್ರಾರಂಭವಾಗಲಿದೆ. ಇದು ಒಂದು ದಿನದ ನಂತರ ಜುಲೈ 24 ರಂದು ಕೊನೆಗೊಳ್ಳಲಿದೆ. ಅಮೆಜಾನ್ ಸಂಸ್ಥೆ ಪ್ರತಿ ವರ್ಷ ಪ್ರೈಮ್ ಡೇ ಸೇಲ್ ಹಮ್ಮಿಕೊಳ್ಳುತ್ತದೆ. ಈ ಬಾರಿ ಕೂಡ ಎರಡು ದಿನ ನಡೆಯಲಿರುವ ಈ ಸೇಲ್‌ನಲ್ಲಿ ಬಹಳಷ್ಟು ವಿಶೇಷವಾದ ಕೊಡುಗೆಗಳು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮುಖ್ಯವಾಗಿ ಈ ಬಾರಿ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಗ್ರಾಹಕರು ಸ್ಮಾರ್ಟ್‌ಫೋನ್‌ಗಳು, ಧರಿಸಬಹುದಾದ ಸಾಧನಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ವಸ್ತುಗಳು ಮುಂತಾದ ವಿಭಾಗಗಳಲ್ಲಿ ರಿಯಾಯಿತಿಯನ್ನು ನಿರೀಕ್ಷಿಸಬಹುದು. 48 ಗಂಟೆಗಳ ಕಾಲ ನಡೆಯುವ ಈ ಸೇಲ್‌ನಲ್ಲಿ ಈ ಬಾರಿ ಅಚ್ಚರಿ ಎಂಬಂತೆ ಬರೋಬ್ಬರಿ 30,000 ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಬಿಡುಗಡೆಯಾಗಲಿವೆ ಎಂದು ಅಮೆಜಾನ್ ಹೇಳಿದೆ.
ಪ್ರಮುಖವಾಗಿ ಸ್ಮಾರ್ಟ್‌ಫೋನ್ ಕೋಂಬೊ ಆಫರ್ ನಿರೀಕ್ಷಿಸಲಾಗಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಆ್ಯಪಲ್, ಸ್ಯಾಮ್‌ಸಂಗ್, ಐಕ್ಯೂ, ರೆಡ್ಮಿ ಮತ್ತು ಅಮೆಜಾನ್‌ನ ಸ್ವಂತ ಎಕೋ ಡಿವೈಸ್‌ಗಳಾದ ಫೈರ್ ಟಿವಿ ಮತ್ತು ಕಿಂಡಲ್‌ನಿಂದ ಡಿವೈಸ್‌ಗಳಲ್ಲಿ ವಿಶೇಷ ರಿಯಾಯಿತಿಯನ್ನು ಪಡೆಯಬಹುದು. ಸ್ಯಾಮ್‌ಸಂಗ್, ಶವೋಮಿ, ಮತ್ತು ಇಂಟೆಲ್ ಕಂಪೆನಿ ಪ್ರಾಡಕ್ಟ್‌ಗಳು ಬಿಡುಗಡೆಯಾಗಲಿವೆ. ಇದಲ್ಲದೆ XECH, Cos-IQ, Himalayan Origins, SpaceinCart, Mirakii, Karagiri, Nirvi ಯಂತಹ 120 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್‌ಗಳಿಂದ ಕೂಡ 2,000ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಬಿಡುಗಡೆಗಯಾಗಲಿವೆ.
ಇನ್ನು ಈ ಬಾರಿಯ ಸೇಲ್‌ನಲ್ಲಿ ಅಮೆಜಾನ್ ಬೇಸಿಕ್ಸ್ ಫೈರ್ ಟಿವಿ ಆವೃತ್ತಿ ಟಿವಿಗಳ ಮೇಲೆ ಬಿಗ್ ಡಿಲ್ಸ್‌ಗಳನ್ನು ನೀಡಲಿದೆ. ಅಲ್ಲದೆ ಪ್ರೈಮ್ ಡೇ ಸೇಲ್ ಅಲೆಕ್ಸಾ ಇಂಟರ್‌ಬಿಲ್ಟ್ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಸ್ಪೀಕರ್‌ಗಳು, ಟಿವಿಗಳ ಮೇಲೂ ಕೂಡ ಡಿಸ್ಕೌಂಟ್ ಘೋಷಣೆ ಮಾಡಿದೆ. ರಿಯಾಯಿತಿಗಳ ಜೊತೆಗೆ 2,500 ರೂ.ವರೆಗಿನ ರಿವಾರ್ಡ್‌ಗಳನ್ನು ಕೂಡ ನೀಡಲಾಗುತ್ತದೆ. ಇದು ತಮ್ಮ ಬಿಲ್‌ಗಳು ಮತ್ತು ರೀಚಾರ್ಜ್‌ಗಳಿಗೆ ಪಾವತಿಸುವ ಮತ್ತು ಅಮೆಜಾನ್ ಪೇ ಬಳಸಿಕೊಂಡು ಹಣವನ್ನು ಕಳುಹಿಸುವ ಗ್ರಾಹಕರಿಗೆ ಲಭ್ಯವಾಗಲಿದೆ.
ಗ್ರಾಹಕರು ICICI ಬ್ಯಾಂಕ್ ಮತ್ತು SBI ಕಾರ್ಡ್‌ಗಳು ಹಾಗೂ EMI ವಹಿವಾಟುಗಳ ಮೂಲಕ ವಿವಿಧ ಉತ್ಪನ್ನಗಳ ಮೇಲೆ 10% ಡಿಸ್ಕೌಂಟ್ ಪಡೆಯಲಿದ್ದಾರೆ. ಅಲ್ಲದೆ ಅಮೆಜಾನ್ ತನ್ನ ಎಕೋ, ಫೈರ್ ಟಿವಿ ಮತ್ತು ಕಿಂಡಲ್ ಡಿವೈಸ್‌ಗಳ ಮೇಲೆ 55% ರಿಯಾಯಿತಿಯನ್ನು ನೀಡಲಿದೆ. ಐಫೋನ್ 13, ಇನ್ಪ್ಲಸ್ 9 ಸರಣಿ, ರೆಡ್ಮಿ ನೋಟ್ 10 ಸರಣಿ, ಗ್ಯಾಲಕ್ಸಿS21FE, ಐಕ್ಯೂ ನಿಯೋ 6 ಸೇರಿದಂತೆ ಅನೇಕ ಫೋನ್ಗಳ ಮೇಲೆ ದೊಡ್ಡ ಮಟ್ಟದ ಡಿಸ್ಕೌಂಟ್ ಇರಲಿದೆಯಂತೆ.
Published On - 1:59 pm, Sat, 16 July 22