Amazon Prime Day Sale 2022: ಅಮೆಜಾನ್​ನಿಂದ ಬಹುನಿರೀಕ್ಷಿತ ಪ್ರೈಮ್ ಡೇ ಸೇಲ್ ಘೋಷಣೆ: ಯಾವಾಗ?, ಏನು ಆಫರ್?

ಅಮೆಜಾನ್ ಇಂಡಿಯಾದಲ್ಲಿ ಅಮೆಜಾನ್‌ ಪ್ರೈಮ್‌ ಡೇ 2022 ಸೇಲ್​ಗೆ (Amazon Prime Day Sale) ದಿನಾಂಕ ನಿಗದಿಯಾಗಿದೆ. ಇದೇ ಜುಲೈ 23 ರಿಂದ ಪ್ರಾರಂಭವಾಗಲಿದೆ.

Amazon Prime Day Sale 2022: ಅಮೆಜಾನ್​ನಿಂದ ಬಹುನಿರೀಕ್ಷಿತ ಪ್ರೈಮ್ ಡೇ ಸೇಲ್ ಘೋಷಣೆ: ಯಾವಾಗ?, ಏನು ಆಫರ್?
Amazon Prime Day Sale 2022
Follow us
TV9 Web
| Updated By: Vinay Bhat

Updated on:Jul 08, 2022 | 1:55 PM

ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಲು ಇ-ಕಾಮರ್ಸ್‌ಗಳತ್ತ (e-commerce) ಹೆಚ್ಚು ವಾಲುತ್ತಿದ್ದಾರೆ. ನಿವೇನಾದರು ಆನ್‌ಲೈನ್‌ ಮೂಲಕ ಸ್ಮಾರ್ಟ್‌ಫೋನ್‌ (Smartphone) ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಆಸಕ್ತಿ ಹೊಂದಿದ್ದರೆ ಭರ್ಜರಿ ಮೇಳ ಶುರುವಾಗುವುದರಲ್ಲಿದೆ. ಅಮೆಜಾನ್ ಇಂಡಿಯಾದಲ್ಲಿ ಅಮೆಜಾನ್‌ ಪ್ರೈಮ್‌ ಡೇ 2022 ಸೇಲ್​ಗೆ (Amazon Prime Day Sale) ದಿನಾಂಕ ನಿಗದಿಯಾಗಿದೆ. ಇದೇ ಜುಲೈ 23 ರಿಂದ ಪ್ರಾರಂಭವಾಗಲಿದೆ. ಇದು ಒಂದು ದಿನದ ನಂತರ ಜುಲೈ 24 ರಂದು ಕೊನೆಗೊಳ್ಳಲಿದೆ. ಅಮೆಜಾನ್ ಸಂಸ್ಥೆ ಪ್ರತಿ ವರ್ಷ ಪ್ರೈಮ್ ಡೇ ಸೇಲ್ ಹಮ್ಮಿಕೊಳ್ಳುತ್ತದೆ. ಪ್ರತಿವರ್ಷದಂತೆಯೇ, ಈ ಬಾರಿ ಕೂಡ ಅಮೆಜಾನ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಬಹಳಷ್ಟು ವಿಶೇಷ ವ್ಯವಹಾರಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ವರ್ಷದ ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ಗ್ರಾಹಕರು ಸ್ಮಾರ್ಟ್‌ಫೋನ್‌ಗಳು, ಧರಿಸಬಹುದಾದ ಸಾಧನಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ವಸ್ತುಗಳು ಮುಂತಾದ ವಿಭಾಗಗಳಲ್ಲಿ ರಿಯಾಯಿತಿಯನ್ನು ನಿರೀಕ್ಷಿಸಬಹುದು. 48 ಗಂಟೆಗಳ ಕಾಲ ನಡೆಯುವ ಈ ಸೇಲ್‌ನಲ್ಲಿ ಈ ಬಾರಿ ಅಚ್ಚರಿ ಎಂಬಂತೆ ಬರೋಬ್ಬರಿ 30,000 ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಬಿಡುಗಡೆಯಾಗಲಿವೆ ಎಂದು ಅಮೆಜಾನ್‌ ಹೇಳಿದೆ.

Infinix Note 12 5G: ಭಾರತದಲ್ಲಿ ಇನ್ಫಿನಿಕ್ಸ್​ನಿಂದ ನೋಟ್‌ 12 ಸರಣಿಯ 5G ಆವೃತ್ತಿ ಇಂದು ಬಿಡುಗಡೆ

ಇದನ್ನೂ ಓದಿ
Image
Cyberdog: ಭಾರತಕ್ಕೆ ಬಂತು ಶವೋಮಿಯ ಸೈಬರ್ ಡಾಗ್ ರೋಬೋಟ್: ಬೆಲೆ ಎಷ್ಟು..?
Image
Asus ROG Phone 6: ನಂಬರ್ ಒನ್ ಪ್ರೊಸೆಸರ್, 6000mAh ಬ್ಯಾಟರಿ, 50MP ಕ್ಯಾಮೆರಾ: ಏಸಸ್ ರಾಗ್ ಫೋನ್ 6 ಸರಣಿ ಬಿಡುಗಡೆ
Image
Best Laptops: ಭಾರತದಲ್ಲಿ 40,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ
Image
Instagram, Facebook messenger down: ಸ್ಥಗಿತಗೊಂಡ ಇನ್​ಸ್ಟಾಗ್ರಾಮ್-ಫೇಸ್​ಬುಕ್ ಮೆಸೇಜಿಂಗ್​ ಆ್ಯಪ್

ಪ್ರಮುಖವಾಗಿ ಸ್ಮಾರ್ಟ್​ಫೋನ್ ಕೋಂಬೊ ಆಫರ್ ನಿರೀಕ್ಷಿಸಲಾಗಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಆ್ಯಪಲ್, ಸ್ಯಾಮ್‌ಸಂಗ್, ಐಕ್ಯೂ, ರೆಡ್ಮಿ ಮತ್ತು ಅಮೆಜಾನ್‌ನ ಸ್ವಂತ ಎಕೋ ಡಿವೈಸ್‌ಗಳಾದ ಫೈರ್ ಟಿವಿ ಮತ್ತು ಕಿಂಡಲ್‌ನಿಂದ ಡಿವೈಸ್‌ಗಳಲ್ಲಿ ವಿಶೇಷ ರಿಯಾಯಿತಿಯನ್ನು ಪಡೆಯಬಹುದು. ಸ್ಯಾಮ್‌ಸಂಗ್‌, ಶವೋಮಿ, ಮತ್ತು ಇಂಟೆಲ್‌ ಕಂಪೆನಿ ಪ್ರಾಡಕ್ಟ್‌ಗಳು ಬಿಡುಗಡೆಯಾಗಲಿವೆ. ಇದಲ್ಲದೆ XECH, Cos-IQ, Himalayan Origins, SpaceinCart, Mirakii, Karagiri, Nirvi ಯಂತಹ 120 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್‌ಗಳಿಂದ ಕೂಡ 2,000ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಬಿಡುಗಡೆಗಯಾಗಲಿವೆ.

ಇನ್ನು ಈ ಬಾರಿಯ ಸೇಲ್‌ನಲ್ಲಿ ಅಮೆಜಾನ್ ಬೇಸಿಕ್ಸ್ ಫೈರ್ ಟಿವಿ ಆವೃತ್ತಿ ಟಿವಿಗಳ ಮೇಲೆ ಬಿಗ್‌ ಡಿಲ್ಸ್‌ಗಳನ್ನು ನೀಡಲಿದೆ. ಅಲ್ಲದೆ ಪ್ರೈಮ್ ಡೇ ಸೇಲ್‌ ಅಲೆಕ್ಸಾ ಇಂಟರ್‌ಬಿಲ್ಟ್‌ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಸ್ಪೀಕರ್‌ಗಳು, ಟಿವಿಗಳ ಮೇಲೂ ಕೂಡ ಡಿಸ್ಕೌಂಟ್‌ ಘೋಷಣೆ ಮಾಡಿದೆ. ರಿಯಾಯಿತಿಗಳ ಜೊತೆಗೆ 2,500 ರೂ.ವರೆಗಿನ ರಿವಾರ್ಡ್‌ಗಳನ್ನು ಕೂಡ ನೀಡಲಾಗುತ್ತದೆ. ಇದು ತಮ್ಮ ಬಿಲ್‌ಗಳು ಮತ್ತು ರೀಚಾರ್ಜ್‌ಗಳಿಗೆ ಪಾವತಿಸುವ ಮತ್ತು ಅಮೆಜಾನ್‌ ಪೇ ಬಳಸಿಕೊಂಡು ಹಣವನ್ನು ಕಳುಹಿಸುವ ಗ್ರಾಹಕರಿಗೆ ಲಭ್ಯವಾಗಲಿದೆ.

ಈವೆಂಟ್‌ನಲ್ಲಿ ಹೆಚ್ಚುವರಿಯಾಗಿ ಎರಡು ಇಂಡಿಯನ್ ಅಮೆಜಾನ್ ಒರಿಜಿನಲ್ ಸಿರೀಸ್‌ ಕೂಡ ಲಾಂಚ್ ಆಗಲಿದೆ. ಅದರಂತೆ ಜುಲೈ 7 ರಂದು ತೆಲುಗಿನಲ್ಲಿ ಮಾಡರ್ನ್ ಲವ್ ಹೈದರಾಬಾದ್ ಮತ್ತು ಜುಲೈ 14 ರಂದು ಹಿಂದಿಯಲ್ಲಿ ಕಾಮಿಕ್‌ಸ್ಟಾನ್ ಸೀಸನ್ 3 ಬಿಡುಗಡೆ ಆಗಲಿವೆ. ಗ್ರಾಹಕರು ICICI ಬ್ಯಾಂಕ್ ಮತ್ತು SBI ಕಾರ್ಡ್‌ಗಳು ಹಾಗೂ EMI ವಹಿವಾಟುಗಳ ಮೂಲಕ ವಿವಿಧ ಉತ್ಪನ್ನಗಳ ಮೇಲೆ 10% ಡಿಸ್ಕೌಂಟ್‌ ಪಡೆಯಲಿದ್ದಾರೆ. ಅಲ್ಲದೆ ಅಮೆಜಾನ್ ತನ್ನ ಎಕೋ, ಫೈರ್ ಟಿವಿ ಮತ್ತು ಕಿಂಡಲ್ ಡಿವೈಸ್‌ಗಳ ಮೇಲೆ 55% ರಿಯಾಯಿತಿಯನ್ನು ನೀಡಲಿದೆ.

OnePlus TV 50 Y1S Pro: ಹೊಸ ಟಿವಿ ಬೇಕಿದ್ದರೆ ಇಂದೇ ನೋಡಿ: ಮೊದಲ ಸೇಲ್​ನಲ್ಲಿ ಒನ್‌ ಪ್ಲಸ್​ನ ಈ ಟಿವಿಗೆ ಭರ್ಜರಿ ರೆಸ್ಪಾನ್ಸ್

Published On - 1:55 pm, Fri, 8 July 22

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ