Asus ROG Phone 6: ನಂಬರ್ ಒನ್ ಪ್ರೊಸೆಸರ್, 6000mAh ಬ್ಯಾಟರಿ, 50MP ಕ್ಯಾಮೆರಾ: ಏಸಸ್ ರಾಗ್ ಫೋನ್ 6 ಸರಣಿ ಬಿಡುಗಡೆ

Asus ROG Phone 6 Pro: ಏಸಸ್ ಇದೀಗ ಹೊಸದಾಗಿ ರಾಗ್ ಫೋನ್ 6 ಸರಣಿಯನ್ನು ಭಾರತದಲ್ಲಿ ಅನಾವರಣ ಮಾಡಿದೆ. ಇದರಲ್ಲಿ ಒಟ್ಟು ಎರಡು ಫೋನ್​ಗಳಿದ್ದು ಏಸಸ್ ರಾಗ್ ಫೋನ್ 6 ಮತ್ತು ರಾಗ್ ಫೋನ್ 6 ಪ್ರೊ ಅನ್ನು ದೇಶದಲ್ಲಿ ದೇಶದಲ್ಲಿ ಬಿಡುಗಡೆ ಮಾಡಿದೆ.

Asus ROG Phone 6: ನಂಬರ್ ಒನ್ ಪ್ರೊಸೆಸರ್, 6000mAh ಬ್ಯಾಟರಿ, 50MP ಕ್ಯಾಮೆರಾ: ಏಸಸ್ ರಾಗ್ ಫೋನ್ 6 ಸರಣಿ ಬಿಡುಗಡೆ
Asus ROG Phone 6 Series
Follow us
TV9 Web
| Updated By: Vinay Bhat

Updated on: Jul 07, 2022 | 12:24 PM

ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಏಸಸ್ (Asus) ಸದ್ಯ ಹೊಸ ಮೊಬೈಲ್​ನೊಂದಿಗೆ ಮತ್ತೆ ಬಂದಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇದೀಗ ಹೊಸದಾಗಿ ರಾಗ್ ಫೋನ್ 6 ಸರಣಿಯನ್ನು ಭಾರತದಲ್ಲಿ ಅನಾವರಣ ಮಾಡಿದೆ. ಇದರಲ್ಲಿ ಒಟ್ಟು ಎರಡು ಫೋನ್​ಗಳಿದ್ದು ಏಸಸ್ ರಾಗ್ ಫೋನ್ 6 ಮತ್ತು ರಾಗ್ ಫೋನ್ 6 ಪ್ರೊ (Asus ROG Phone 6 and ROG Phone 6 Pro) ಅನ್ನು ದೇಶದಲ್ಲಿ ದೇಶದಲ್ಲಿ ಬಿಡುಗಡೆ ಮಾಡಿದೆ. ಈ ಎರಡೂ ಸ್ಮಾರ್ಟ್​ಫೋನ್​ಗಳು (Smartphone) 5G ಬೆಂಬಲ ಪಡೆದುಕೊಂಡಿದ್ದು ಏಸಸ್ ರಾಗ್ ಫೋನ್ 5 ಸರಣಿಯ ಮುಂದಿನ ಆವೃತ್ತಿಯಾಗಿದೆ. ಅಚ್ಚರಿಗೊಳ್ಳುವಂತಹ ಫೀಚರ್​ಗಳು ಈ ಹೊಸ ಫೋನ್​​ನಲ್ಲಿದ್ದು, ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿದೆ. ಈ ಫೋನ್ ಬಗೆಗಿನ ಎಲ್ಲ ಮಾಹಿತಿ ಇಲ್ಲಿದೆ ನೋಡಿ.

ಏಸಸ್ ರಾಗ್ ಫೋನ್ 6:

ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್‌ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಫೋನ್‌ಗಳಲ್ಲಿನ ಡಿಸ್‌ಪ್ಲೇ ರಿಫ್ರೆಶ್ ರೇಟ್‌ ಅನ್ನು 60Hz, 90Hz, 120Hz, 144Hz ಮತ್ತು 165Hz ನಡುವೆ ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ. ಇದು ವಿಶ್ವದ ನಂಬರ್ ಒನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಹೊಂದಿದೆ. ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

ಇದನ್ನೂ ಓದಿ
Image
Best 5G Smartphone: ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್ 5G ಸ್ಮಾರ್ಟ್​​ಫೋನ್​ಗಳು ಇಲ್ಲಿದೆ ನೋಡಿ
Image
Reliance Jio: ರಿಲಯನ್ಸ್ ಜಿಯೋದಿಂದ ಉಚಿತ ನೆಟ್​ಫ್ಲಿಕ್ಸ್​ ಚಂದಾದಾರಿಕೆ: ಈ ಆಫರ್ ಮಿಸ್ ಮಾಡ್ಬೇಡಿ
Image
Xiaomi 12S series: ಒಂದಲ್ಲ ಎರಡಲ್ಲ ಬರೋಬ್ಬರಿ 4 ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿದ ಶವೋಮಿ: ಯಾವುವು?, ಬೆಲೆ ಎಷ್ಟು?
Image
Infinix Note 12 5G: ಬಜೆಟ್ ಬೆಲೆಯ ಸ್ಮಾರ್ಟ್​​ಫೋನ್ ಕಿಂಗ್ ಇನ್ಫಿನಿಕ್ಸ್​ನಿಂದ ನೋಟ್‌ 12 5G ಬಿಡುಗಡೆಗೆ ಸಿದ್ಧತೆ

Best Laptops: ಭಾರತದಲ್ಲಿ 40,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ

ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 6,000mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 12GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 71,999 ರೂ. ಬೆಲೆಯನ್ನು ನಿಗದಿ ಮಾಡಲಾಗಿದೆ.

ಏಸಸ್ ರಾಗ್ ಫೋನ್ 6 ಪ್ರೊ:

ಈ ಸ್ಮಾರ್ಟ್‌ಫೋನ್‌ ಕೂಡ 6.78 ಇಂಚಿನ ಅಮೋಲೆಡ್‌ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಗೆ ಕಾರ್ನಿಂಗ್‌ ಗ್ಲಾಸ್‌ ವಿಕ್ಷಸ್‌ ಪ್ರೊಟೆಕ್ಷನ್‌ ನೀಡಲಾಗಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ವಿಶೇಷವಾಗಿ ರೈಟ್‌ ಸ್ಪೈನ್‌ ಮೇಲೆ ಏರ್‌ಟ್ರಿಗ್ಗರ್ ಅಲ್ಟ್ರಾಸಾನಿಕ್ ಬಟನ್‌ಗಳನ್ನು ನೀಡಿದೆ. ಇದು ಗೇಮ್‌ಳಿಂದ ವಿಭಿನ್ನ ಕಂಟ್ರೋಲ್‌ಗಳನ್ನು ಮ್ಯಾಪ್ ಮಾಡಲು ನಿಮಗೆ ಅನುಮತಿಸುತ್ತದೆ.

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 6,000mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು (3,000 + 3,000mAh) ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್‌ 18GB RAM + 512GB ಸ್ಟೋರೇಜ್ ರೂಪಾಂತರದ ಆಯ್ಕೆಯ ಬೆಲೆ 89,999 ರೂ. ಆಗಿದೆ. ಈ ಫೋನ್ ಯಾವಾಗ ಸೇಲ್ ಆಗಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ದಿನಾಂಕ ಪ್ರಕಟಿಸಿಲ್ಲ.

Instagram, Facebook messenger down: ಸ್ಥಗಿತಗೊಂಡ ಇನ್​ಸ್ಟಾಗ್ರಾಮ್-ಫೇಸ್​ಬುಕ್ ಮೆಸೇಜಿಂಗ್​ ಆ್ಯಪ್

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ