Instagram, Facebook messenger down: ಸ್ಥಗಿತಗೊಂಡ ಇನ್‌ಸ್ಟಾಗ್ರಾಮ್-ಫೇಸ್ಬುಕ್ ಮೆಸೇಜಿಂಗ್ ಆ್ಯಪ್
Instagram, Facebook messenger down: ಈ ಹಿಂದೆ ಕೂಡ ಫೇಸ್‌ಬುಕ್‌ನಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಆದರೆ ಕಂಪನಿಯು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳ ಹಿಂದಿನ ಕಾರಣಗಳನ್ನು ರಹಸ್ಯವಾಗಿಡಲಾಗುತ್ತದೆ.
Instagram, Facebook messenger down: ವಿಶ್ವದ ಜನಪ್ರಿಯ ಸೋಷಿಯಲ್ ಮೀಡಿಯಾದ ಅಪ್ಲಿಕೇಶನ್ಗಳಾದ ಇನ್‌ಸ್ಟಾಗ್ರಾಮ್ (Instagram) ಮತ್ತು ಫೇಸ್ಬುಕ್ ಮೆಸೆಂಜರ್ (Facebook Messenger) ಸ್ಥಗಿತಗೊಂಡಿದೆ. ಮೇಟಾ-ಮಾಲೀಕತ್ವದ ಈ ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ವೀಸ್ ಸ್ಟೇಟಸ್ ಟ್ರ್ಯಾಕರ್ ವೆಬ್‌ಸೈಟ್ ಡೌನ್‌ಡೆಕ್ಟರ್ ಪ್ರಕಾರ, Instagram ಜುಲೈ 5 ರಂದು ಸುಮಾರು 8 ಗಂಟೆಯಿಂದ ಬುಧವಾರ ಬೆಳಗಿನವರೆಗೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿನ ತಮ್ಮ ಸಂಪರ್ಕಗಳಿಗೆ DM ಗಳನ್ನು (ನೇರ ಸಂದೇಶಗಳು) ಕಳುಹಿಸಲು ತೊಂದರೆಯಾಗುತ್ತಿದೆ ಎಂದು ಹಲವಾರು ಬಳಕೆದಾರರು Twitter ಮೂಲಕ ತಿಳಿಸಿದ್ದಾರೆ. ಆದಾಗ್ಯೂ, ಸ್ಥಗಿತದ ಬಗ್ಗೆ ಮೆಟಾದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಜುಲೈ 5 ರ ರಾತ್ರಿ 11:17 ಗಂಟೆಗೆ ಸುಮಾರು 1,280 ಕ್ಕೂ ಹೆಚ್ಚು ಬಳಕೆದಾರರು ಫೋಟೋ ಮತ್ತು ವೀಡಿಯೊ ಹಂಚಿಕೆ ಸೇವೆಯೊಂದಿಗೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇನ್ನು ಜುಲೈ 6 ರಂದು ಬೆಳಿಗ್ಗೆ 10:18 ಕ್ಕೆ ಮತ್ತದೇ ಸಮಸ್ಯೆ ಕಂಡುಬಂದಿದೆ. ಈ ಸಮಸ್ಯೆಯ ಕುರಿತು ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಬಳಕೆದಾರರು ಟ್ವಿಟರ್ನಲ್ಲಿ ಮೆಟಾದ ಗಮನ ಸೆಳೆದಿದ್ದಾರೆ. ಇದಾಗ್ಯೂ ಈ ಸಮಸ್ಯೆಗೆ ಕಾರಣವೇನು ಎಂಬುದನ್ನು ಇನ್ನೂ ಕೂಡ ಮೇಟಾ ಕಂಪೆನಿ ತಿಳಿಸಿಲ್ಲ.
ಈ ಹಿಂದೆ ಕೂಡ ಫೇಸ್‌ಬುಕ್‌ನಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಆದರೆ ಕಂಪನಿಯು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳ ಹಿಂದಿನ ಕಾರಣಗಳನ್ನು ರಹಸ್ಯವಾಗಿಡುತ್ತದೆ. ಅಲ್ಲಿ ಸಮಸ್ಯೆಯನ್ನು ಸರಿಪಡಿಸಿದ ನಂತರವೂ ವಿವರಿಸಲು ಒಲವು ತೋರುವುದಿಲ್ಲ. ಆದರೆ ವರದಿ ಪ್ರಕಾರ, ಡಿಎನ್ ಸಮಸ್ಯೆಯಿಂದಾಗಿ ಮೇಟಾ ಒಡೆತನದ ಇನ್‌ಸ್ಟಾಗ್ರಾಮ್, ಫೇಸ್ಬುಕ್ ಜಾಗತಿಕ ಬಳಕೆದಾರರಿಗೆ ತಾತ್ಕಲಿಕ ಸಮಸ್ಯೆಯನ್ನುಂಟು ಮಾಡಿದೆ.
ಈ ಸಮಸ್ಯೆಯ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಾನಾ ಮೀಮ್ಸ್ಗಳು ಹರಿದಾಡುತ್ತಿದೆ. ಅವುಗಳ ಒಂದು ಝಲಕ್ ಇಲ್ಲಿದೆ.
Me to Instagram after refreshing my phone 3 times and reinstalling Instagram 2 times.#instadown #instagramdown pic.twitter.com/SIiZ2EsgBB
— Sarah (@sarahzafarrr) July 5, 2022
Me waiting for the instagram dm’s to work again to see the 0 dms I have #instagramdown pic.twitter.com/ug9k1FroWJ
— Alex (@alexculee) July 5, 2022
#Instagramdown People coming to twitter in order to see what happen to Instagram pic.twitter.com/whRGiSSkEm
— Hemanta Bhandari (@hemantasha) July 5, 2022
Me apologizing to my internet after blaming it for insta being down:#instagramdown pic.twitter.com/B9zOYmlox9
— Manish Parab (@maniparab_07) July 5, 2022
Me pretending im shocked that instagram went down again for the 20th time this year #Instagramdown pic.twitter.com/t2Ih1DJzYJ
— ??????? (@PapaKoalaYT) July 5, 2022
me waking up every 5 mins to see if Instagram is working… #instagramdown pic.twitter.com/HpLzf79PX7
— Jess (@J24masx) July 5, 2022
ವಿಶ್ವದ ಅನೇಕ ಬಳಕೆದಾರರಿಗೆ ಈ ಸಮಸ್ಯೆ ಎದುರಾಗಿದ್ದು, ಕೆಲ ಬಳಕೆದಾರರು ಮಂಗಳವಾರದಿಂದ ಯಾವುದೇ ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಇನ್ನು ಕೆಲ ಇನ್‌ಸ್ಟಾಗ್ರಾಮ್ ಬಳಕೆದಾರರು ಆಗಾಗ್ಗೆ ಸಮಸ್ಯೆ ಎದುರಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 2:37 pm, Wed, 6 July 22