AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ

T20 Blast Cricket: ಬೃಹತ್ ಮೊತ್ತವನ್ನು ಬೆನ್ನತ್ತಿದ ಗ್ಲಾಮೊರ್ಗಾನ್ ತಂಡದ ಪರ ನಾಯಕ ಸ್ಯಾಮ್ ನಾರ್ಥ್​ಈಸ್ಟ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 56 ಎಸೆತಗಳಲ್ಲಿ 10 ಬೌಂಡರಿ 4 ಸಿಕ್ಸ್​ನೊಂದಿಗೆ ಅಜೇಯ 97 ರನ್​ ಬಾರಿಸಿ ಅಬ್ಬರಿಸಿದ್ದರು.

6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Essex vs Glamorgan
TV9 Web
| Edited By: |

Updated on: Jul 03, 2022 | 11:53 AM

Share

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟೆಸ್ಟ್​​ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ 35 ರನ್​ ಕಲೆಹಾಕುವ ಮೂಲಕ ಜಸ್​ಪ್ರೀತ್​ ಬುಮ್ರಾ (Jasprit Bumrah) ಹೊಸ ದಾಖಲೆ ಬರೆದರೆ, ಮತ್ತೊಂದೆಡೆ ನಡೆದ ಟಿ20 ಕ್ರಿಕೆಟ್​ನ ಒಂದೇ ಓವರ್​ನಲ್ಲಿ 5 ಸಿಕ್ಸ್ ಚಚ್ಚಿಸಿಕೊಂಡು ಭಾರತೀಯ ಮೂಲದ ಪ್ರೇಮ್ ಸಿಸೋಡಿಯಾ ಕೆಟ್ಟ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್​ ನಡೆಯುತ್ತಿರುವ ಟಿ20 ಬ್ಲಾಸ್ಟ್​ನ ಸೌತ್ ಗ್ರೂಪ್​ ಪಂದ್ಯದಲ್ಲಿ ಎಸೆಕ್ಸ್ ಹಾಗೂ ಗ್ಲಾಮೊರ್ಗಾನ್ (Essex vs Glamorgan) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗ್ಲಾಮೊರ್ಗಾನ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕನ ನಿರ್ಧಾರ ತಪ್ಪು ಎಂಬಂತೆ ಎಸೆಕ್ಸ್ ತಂಡಕ್ಕೆ ರೋಸಿಂಗ್ಟನ್ (45) ಹಾಗೂ ರಾಬಿನ್ ದಾಸ್ (23) ಸ್ಪೋಟಕ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಡ್ಯಾನ್ ಲಾರೆನ್ಸ್ ಮತ್ತು ಪಾಲ್ ವಾಲ್ಟರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.

ಅದರಲ್ಲೂ 16ನೇ ಓವರ್​ ಎಸೆಯಲು ಬಂದ 23 ವರ್ಷದ ಎಡಗೈ ಸ್ಪಿನ್ನರ್ ಪ್ರೇಮ್ ಸಿಸೋಡಿಯಾ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸುವ ಮೂಲಕ ಪಾಲ್ ವಾಲ್ಟರ್ ಅಬ್ಬರಿಸಿದರು. ಮೊದಲ 4 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿದ ವಾಲ್ಟರ್ 5ನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಕೇವಲ 1 ರನ್​ ಮಾತ್ರ ಲಭಿಸಿತು. ಇತ್ತ ಕೊನೆಯ ಎಸೆತದಲ್ಲಿ ಡ್ಯಾನ್ ಲಾರೆನ್ಸ್ ಸಿಕ್ಸರ್ ಬಾರಿಸಿದರು. ಈ ಮೂಲಕ ಪ್ರೇಮ್ ಸಿಸೋಡಿಯ ಅವರ ಒಂದೇ ಓವರ್‌ನಲ್ಲಿ ಒಟ್ಟು 31 ರನ್‌ಗಳನ್ನು ಕಲೆಹಾಕಿದರು. ಇದರೊಂದಿಗೆ ಟಿ20 ಬ್ಲಾಸ್ಟ್​ನಲ್ಲಿ ಅತ್ಯಧಿಕ ರನ್​ ನೀಡಿದ ಕೆಟ್ಟ ದಾಖಲೆಯೊಂದು ಪ್ರೇಮ್ ಸಿಸೋಡಿಯಾ ಪಾಲಾಯಿತು.

ಇನ್ನು ಎಸೆಕ್ಸ್ ಪರ ಲಾರೆನ್ಸ್ 37 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸ್​ನೊಂದಿಗೆ 71 ರನ್ ಬಾರಿಸಿದರೆ, ಪಾಲ್ ವಾಲ್ಟರ್ 23 ಎಸೆತಗಳಲ್ಲಿ 58 ರನ್ ಚಚ್ಚಿದರು. ಈ ವೇಳೆ 2 ಬೌಂಡರಿ ಮತ್ತು 6 ಸಿಕ್ಸ್​ಗಳು ಮೂಡಿಬಂದಿತ್ತು. ಮತ್ತೊಂದೆಡೆ ಪ್ರೇಮ್ ಸಿಸೋಡಿಯಾ 4 ಓವರ್​ಗಳಲ್ಲಿ ನೀಡಿದ್ದು ಬರೋಬ್ಬರಿ 57 ರನ್. ಪರಿಣಾಮ ಎಸೆಕ್ಸ್​ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್​ ಕಲೆಹಾಕಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗ್ಲಾಮೊರ್ಗಾನ್ ತಂಡದ ಪರ ನಾಯಕ ಸ್ಯಾಮ್ ನಾರ್ಥ್​ಈಸ್ಟ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 56 ಎಸೆತಗಳಲ್ಲಿ 10 ಬೌಂಡರಿ 4 ಸಿಕ್ಸ್​ನೊಂದಿಗೆ ಅಜೇಯ 97 ರನ್​ ಬಾರಿಸಿ ಅಬ್ಬರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ ಗ್ಲಾಮೊರ್ಗಾನ್ ತಂಡವು 7 ವಿಕೆಟ್​ ನಷ್ಟಕ್ಕೆ 185 ರನ್​ ಕಲೆಹಾಕುವ ಮೂಲಕ 69 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ