Jasprit Bumrah: ಹೆಸರಿಗಷ್ಟೇ ಬುಮ್ರಾ ಕ್ಯಾಪ್ಟನ್: ಮೈದಾನದಲ್ಲಿ ಕಿಂಗ್ ಕೊಹ್ಲಿಯದ್ದೇ ನಿರ್ಧಾರ

Virat Kohli, IND vs ENG: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆರಂಭವಾದಾಗಿನಿಂದ ಜಸ್​ಪ್ರೀತ್ ಬುಮ್ರಾ ಹೆಸರಿಗಷ್ಟೇ ನಾಯಕ, ಎಲ್ಲ ನಿರ್ಧಾರ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರದ್ದೇ ಎಂದು ಭಾರತದ ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

Jasprit Bumrah: ಹೆಸರಿಗಷ್ಟೇ ಬುಮ್ರಾ ಕ್ಯಾಪ್ಟನ್: ಮೈದಾನದಲ್ಲಿ ಕಿಂಗ್ ಕೊಹ್ಲಿಯದ್ದೇ ನಿರ್ಧಾರ
Virat Kohli and Jasprit Bumrah
Follow us
TV9 Web
| Updated By: Vinay Bhat

Updated on:Jul 03, 2022 | 10:27 AM

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಅಂತಿಮ ಐದನೇ ಟೆಸ್ಟ್ ಪಂದ್ಯ ಕುತೂಹಲದತ್ತ ಸಾಗುತ್ತಿದೆ. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಅಮೋಘ ಶತಕದ ಫಲದಿಂದ ಭಾರತ 416 ರನ್ ಕಲೆಹಾಕಿದ್ದು, ಬೌಲಿಂಗ್​ನಲ್ಲೂ ಪರಾಕ್ರಮ ಮೆರೆಯುತ್ತಿದೆ. ಟೀಮ್ ಇಂಡಿಯಾ ನಾಯಕ ಜಸ್​ಪ್ರೀತ್ ಬುಮ್ರಾ (Jasprit Bumrah) 3 ವಿಕೆಟ್ ಕಿತ್ತು ಆಂಗ್ಲರಿಗೆ ಕಂಟಕವಾಗಿ ಪರಿಣಮಿಸಿದ್ದಾರೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ. ಈ ಟೆಸ್ಟ್ ಆರಂಭಕ್ಕೂ ಮುನ್ನ ಭಾರತದ ಖಾಯಂ ನಾಯಕ ರೋಹಿತ್ ಶರ್ಮಾ ಅವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಬುಮ್ರಾರನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಆದರೆ, ಟೆಸ್ಟ್ ಆರಂಭವಾದಾಗಿನಿಂದ ಬುಮ್ರಾ ಹೆಸರಿಗಷ್ಟೇ ನಾಯಕ, ಎಲ್ಲ ನಿರ್ಧಾರ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರದ್ದೇ ಎಂದು ಭಾರತದ ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು, ಪಂದ್ಯ ಆರಂಭಕ್ಕೆ ಒಂದು ದಿನದ ಮುನ್ನ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗದ ನಾಯಕ ರೋಹಿತ್ ಶರ್ಮಾ ಈ ಟೆಸ್ಟ್​​ನಿಂದ ಹೊರಬಿದ್ದರು. ಹೀಗಾಗಿ ಜಸ್​ಪ್ರೀತ್ ಬುಮ್ರಾ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲಾಯಿತು. ಈ ಮೂಲಕ ಭಾರತ ಟೆಸ್‌ ಕ್ರಿಕೆಟ್‌ ತಂಡಕ್ಕೆ 36ನೇ ನಾಯಕನಾಗಿ ಜಸ್‌ಪ್ರೀತ್‌ ಬುಮ್ರಾ ಅಧಿಕೃತವಾಗಿ ನೇಮಕಗೊಂಡರು. ಅಲ್ಲದೆ ಬರೋಬ್ಬರಿ 35 ವರ್ಷಗಳ ನಂತರ ಒಬ್ಬ ವೇಗದ ಬೌಲರ್ ಭಾರತವನ್ನು ಟೆಸ್ಟ್‌ನಲ್ಲಿ ಮುನ್ನಡೆಸಿದ ಸಾಧನೆ ಮಾಡಿದರು. ಆದರೆ, ಮೈದಾನಕ್ಕೆ ಇಳಿದ ನಂತರ ಬೌಲಿಂಗ್, ಫೀಲ್ಡಿಂಗ್ ಆಯ್ಕೆ ಮಾಡುವುದು ಕಂಡುಬಂದಿದ್ದು ನಾಯಕನಿಂದಲ್ಲ. ಬದಲಾಗಿ ಮಾಜಿ ನಾಯಕನಿಂದ.

ಇದನ್ನೂ ಓದಿ
Image
IND vs ENG: 6 ಎಸೆತಗಳಲ್ಲಿ ವಿಶ್ವದಾಖಲೆ ಬರೆದ ಬಮ್ರಾ; ಕೊಹ್ಲಿ- ದ್ರಾವಿಡ್ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ?
Image
IND vs ENG: ಸ್ಟುವರ್ಟ್ ಬ್ರಾಡ್ ಎಸೆದ ಒಂದೇ ಓವರ್​ನಲ್ಲಿ 46 ವರ್ಷಗಳ ಹಿಂದಿನ ದಾಖಲೆ ಮುರಿದ ಬುಮ್ರಾ..!
Image
Virat Kohli: ಶತಕವಿಲ್ಲ, ಇತ್ತ ರನ್​ಗಳು ಬರುತಿಲ್ಲ; ಮುಗಿಯಿತಾ ಕೊಹ್ಲಿ ಕೆರಿಯರ್? 3 ವರ್ಷದ ಲೆಕ್ಕಾಚಾರ ಹೀಗಿದೆ
Image
IND vs ENG: ಆಂಗ್ಲರ ವಿರುದ್ಧ ಅಬ್ಬರದ ಶತಕ ಸಿಡಿಸಿದ ಪಂತ್​ಗೆ ಕ್ರಿಕೆಟ್​ ದಂತೆಕಥೆಗಳ ಶಹಬ್ಬಾಸ್​ಗಿರಿ..!

Ravindra Jadeja: ಜಡೇಜಾ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ

ಇದಕ್ಕೆ ಉದಾಹರಣೆ ಎಂಬಂತೆ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಎರಡನೇ ಇನ್ನಿಂಗ್ಸ್​ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಎಲ್ಲ ಆಟಗಾರರು ಒಟ್ಟುಗೂಡಿ ಗೇಮ್ ಪ್ಲಾನ್ ರೂಪಿಸಿದರು. ಇದರಲ್ಲಿ ಕೊಹ್ಲಿ ಎಲ್ಲ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿರುವುದು ಕಂಡು ಬಂದಿದೆ.

ಬರ್ಮಿಂಗ್‌ಹ್ಯಾಮ್​ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿ ಮೊದಲ ಇನಿಂಗ್ಸ್‌ನಲ್ಲಿ 416 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿದ ಟೀಮ್ ಇಂಡಿಯಾ, ಬೌಲಿಂಗ್‌ನಲ್ಲೂ ಅಂಥದ್ದೇ ದಾಳಿ ಸಂಘಟಿಸುವ ಮೂಲಕ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ನ 5 ವಿಕೆಟ್‌ಗಳನ್ನು ಬಾಚಿಕೊಂಡು ಸಂಪೂರ್ಣ ಹಿಡಿತ ಸಾಧಿಸಿದೆ. ಇಂಗ್ಲೆಂಡ್‌ ತಂಡದ ಬುಡವನ್ನು ಜಸ್‌ಪ್ರೀತ್‌ ಬುಮ್ರಾ ಅಲ್ಲಾಡಿಸಿಬಿಟ್ಟರು. ಹೊಸ ಚೆಂಡಿನಲ್ಲಿ 7 ಓವರ್‌ಗಳ ಸ್ಪೆಲ್‌ ತಂಡ ಬುಮ್ರಾ, ಆತಿಥೇಯರ ಆರಂಭಿಕ ಮೂರು ವಿಕೆಟ್‌ಗಳನ್ನು ಉರುಳಿಸಿ ಭಾರತಕ್ಕೆ ಮೇಲುಗೈ ತಂದರು. ದಿನದಂತ್ಯಕ್ಕೆ ಇಂಗ್ಲೆಂಡ್ 27 ಓವರ್‌ಗಳಲ್ಲಿ 84/5 ರನ್‌ ಗಳಿಸಿದೆ. ಇಂಗ್ಲೆಂಡ್‌ ಪರ ಜಾನಿ ಬೈರ್‌ಸ್ಟೋವ್‌ (12*) ಮತ್ತು ಬೆನ್‌ ಸ್ಟೋಕ್ಸ್‌ (0*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

IND vs ENG: ಭಾರತದ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್: ಇಲ್ಲಿದೆ 2ನೇ ದಿನದ ಹೈಲೇಟ್ಸ್

Published On - 10:27 am, Sun, 3 July 22