Ravindra Jadeja: ಜಡೇಜಾ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ
IND vs ENG: 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದ ರವೀಂದ್ರ ಜಡೇಜಾ ಶತಕ ಸಿಡಿಸುತ್ತಿದ್ದಂತೆ ಟೀಮ್ ಇಂಡಿಯಾ ಪಾಳಯದಲ್ಲಿ ಸಂತಸ ಮನೆ ಮಾಡಿತು. ಅದರಲ್ಲೂ ಮಾಜಿ ನಾಯಕ ವಿರಾಟ್ ಕೊಹ್ಲಿ ಎದ್ದು ನಿಂತು ತನ್ನ ಶತಕದಂತೆ ಸಂಭ್ರಮಿಸಿದರು.
ಇಂಗ್ಲೆಂಡ್ ಹಾಗೂ ಭಾರತ (England vs India) ನಡುವೆ ಬಾಕಿ ಉಳಿದಿರುವ ಐದನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿದ್ದು ಭಾರೀ ಕುತೂಹಲ ಕೆರಳಿಸಿದೆ. ಆರಂಭದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಟೀಮ್ ಇಂಡಿಯಾ ನಂತರ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ (Ravindra Jadeja) ಅವರ ಭರ್ಜರಿ ಶತಕದ ನೆರವಿನಿಂದ 416 ರನ್ ಕಲೆಹಾಕಿದೆ. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ್ದು 100 ರನ್ಗೂ ಮೊದಲೇ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಪಂದ್ಯ ಆರಂಭವಾದಾಗ ಆರಂಭಿಕ ಆಘಾತ ಅನುಭವಿಸಿದ್ದ ಟೀಮ್ ಇಂಡಿಯಾ 98 ರನ್‌ಗಳಿಗೆ ತನ್ನ ಮೊದಲ 5 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಂತರ ಜಡೇಜಾ ಮತ್ತು ರಿಷಭ್ ಪಂತ್ (Rishabh Pant) ಆರನೇ ವಿಕೆಟ್‌ಗೆ ಜತೆಯಾಗಿ 222 ರನ್‌ಗಳ ಬೃಹತ್ ಜತೆಯಾಟವನ್ನಾಡಿ ತಂಡಕ್ಕೆ ಆಸರೆಯಾದರು. ಮೊದಲ ದಿನ ಪಂತ್ ಆರ್ಭಟಿಸಿದರೆ ಎರಡನೇ ದಿನ ಜಡೇಜಾ ಭರ್ಜರಿ ಆಟ ಆಡಿದರು.
7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದ ಜಡೇಜಾ, ವಿಕೆಟ್ ಕೀಪರ್ ಕಮ್ ಬ್ಯಾಟರ್ ಪಂತ್ ಜೊತೆ ಉತ್ತಮ ಜೊತೆಯಾಟ ನೀಡುವ ಮೂಲಕ ಪಂದ್ಯದ ಎರಡನೇ ದಿನ ಸೆಂಚುರಿ ಬಾರಿಸಿದರು. ತಾವು ಎದುರಿಸಿದ 194 ಎಸೆತಗಳಲ್ಲಿ 13 ಬೌಂಡರಿ ಸಮೇತವಾಗಿ 104ರನ್ಗಳಿಸಿದ ಜಡೇಜಾ, ತಂಡದ ರನ್ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಜಡೇಜಾ ಶತಕ ಸಿಡಿಸುತ್ತಿದ್ದಂತೆ ಟೀಮ್ ಇಂಡಿಯಾ ಪಾಳಯದಲ್ಲಿ ಸಂತಸ ಮನೆ ಮಾಡಿತು. ಅದರಲ್ಲೂ ಮಾಜಿ ನಾಯಕ ವಿರಾಟ್ ಕೊಹ್ಲಿ ಎದ್ದು ನಿಂತು ತನ್ನ ಶತಕದಂತೆ ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
IND vs ENG: ಭಾರತದ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್: ಇಲ್ಲಿದೆ 2ನೇ ದಿನದ ಹೈಲೇಟ್ಸ್
That moment and the sword celebration ?❤️ #Jadeja #ENGvINDpic.twitter.com/RjRN6FSOm0
— HemaPriya07 (@attitudegirl___) July 2, 2022
ಇದರ ಜೊತೆಗೆ ಜಡೇಜಾ ಅವರು ಒಂದೇ ವರ್ಷದಲ್ಲಿ ಎರಡು ಶತಕ ಬಾರಿಸಿದ ದಾಖಲೆ ಬರೆದರು. 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮೈದಾನಕ್ಕಿಳಿದು ಈ ಸಾಧನೆ ಮಾಡಿರುವ ಸಾಲಿನಲ್ಲಿ ಈಗಾಗಲೇ ಕಪಿಲ್ ದೇವ್, ಧೋನಿ, ಹರ್ಭಜನ್ ಸಿಂಗ್ ಇದ್ದು, ಇದೀಗ ರವೀಂದ್ರ ಜಡೇಜಾ ಸಹ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಇದರ ಜೊತೆಗೆ ವಿದೇಶಿ ಅಂಗಳದಲ್ಲಿ ಇದೇ ಮೊದಲ ಸಲ ಟೆಸ್ಟ್ ಶತಕ ಸಿಡಿಸಿರುವ ಸಾಧನೆ ಮಾಡಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಮೂರನೇ ಶತಕ ಸಿಡಿಸಿದ್ದಾರೆ. ಈ ಹಿಂದೆ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರಾಜ್ಕೋಟ್ನಲ್ಲಿ ಹಾಗೂ ಕಳೆದ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ಶತಕ ಬಾರಿಸಿದ್ದರು.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿ ಮೊದಲ ಇನಿಂಗ್ಸ್‌ನಲ್ಲಿ 416 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿದ ಟೀಮ್ ಇಂಡಿಯಾ, ಬೌಲಿಂಗ್‌ನಲ್ಲೂ ಅಂಥದ್ದೇ ದಾಳಿ ಸಂಘಟಿಸುವ ಮೂಲಕ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ನ 5 ವಿಕೆಟ್‌ಗಳನ್ನು ಬಾಚಿಕೊಂಡು ಸಂಪೂರ್ಣ ಹಿಡಿತ ಸಾಧಿಸಿದೆ. ಇಂಗ್ಲೆಂಡ್ ತಂಡದ ಬುಡವನ್ನು ಜಸ್‌ಪ್ರೀತ್ ಬುಮ್ರಾ ಅಲ್ಲಾಡಿಸಿಬಿಟ್ಟರು. ಹೊಸ ಚೆಂಡಿನಲ್ಲಿ 7 ಓವರ್‌ಗಳ ಸ್ಪೆಲ್ ತಂಡ ಬುಮ್ರಾ, ಆತಿಥೇಯರ ಆರಂಭಿಕ ಮೂರು ವಿಕೆಟ್‌ಗಳನ್ನು ಉರುಳಿಸಿ ಭಾರತಕ್ಕೆ ಮೇಲುಗೈ ತಂದರು. ದಿನದಂತ್ಯಕ್ಕೆ ಇಂಗ್ಲೆಂಡ್ 27 ಓವರ್‌ಗಳಲ್ಲಿ 84/5 ರನ್ ಗಳಿಸಿದೆ. ಇಂಗ್ಲೆಂಡ್ ಪರ ಜಾನಿ ಬೈರ್‌ಸ್ಟೋವ್ (12*) ಮತ್ತು ಬೆನ್ ಸ್ಟೋಕ್ಸ್ (0*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IND vs ENG: 6 ಎಸೆತಗಳಲ್ಲಿ ವಿಶ್ವದಾಖಲೆ ಬರೆದ ಬಮ್ರಾ; ಕೊಹ್ಲಿ- ದ್ರಾವಿಡ್ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ?
Published On - 9:02 am, Sun, 3 July 22