AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Umran Malik: ಉಮ್ರಾನ್ ಮಲಿಕ್ ಮಿಂಚಿನ ವೇಗಕ್ಕೆ ಮಿಡಲ್ ವಿಕೆಟ್ ಎಲ್ಲಿ ಹೋಗಿ ಬಿತ್ತು ನೋಡಿ: ವಿಡಿಯೋ

IND vs ENG: ಇಂಡಿಯನ್ಸ್ ತಂಡ ಡರ್ಬಿಶೈರ್ (Derbyshire vs Indians) ವಿರುದ್ಧ ಟಿ20 ಅಭ್ಯಾಸ ಪಂದ್ಯವನ್ನು ಆಡಿದೆ. ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಬೌಲರ್ ಉಮ್ರಾನ್ ಮಲಿಕ್ ತಮ್ಮ ಮಿಂಚಿನ ವೇಗದ ಮೂಲಕ ಎದುರಾಳಿ ಬ್ಯಾಟರ್ ಅನ್ನು ಕ್ಲೀನ್ ಬೌಲ್ಡ್ ಮಾಡಿದರು.

Umran Malik: ಉಮ್ರಾನ್ ಮಲಿಕ್ ಮಿಂಚಿನ ವೇಗಕ್ಕೆ ಮಿಡಲ್ ವಿಕೆಟ್ ಎಲ್ಲಿ ಹೋಗಿ ಬಿತ್ತು ನೋಡಿ: ವಿಡಿಯೋ
Umran Malik
TV9 Web
| Edited By: |

Updated on:Jul 03, 2022 | 11:20 AM

Share

ಭಾರತ ಕ್ರಿಕೆಟ್ ತಂಡ ಸದ್ಯ ಇಂಗ್ಲೆಂಡ್ (India vs England) ವಿರುದ್ಧ ಬಾಕಿ ಉಳಿದಿರುವ ಅಂತಿಮ ಐದನೇ ಟೆಸ್ಟ್​ ಪಂದ್ಯವನ್ನು ಆಡುತ್ತಿದೆ. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಆಕರ್ಷಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್​​ನಲ್ಲಿ 448 ರನ್ ರನ್ ಕಲೆಹಾಕಿದೆ. ಈ ಟೆಸ್ಟ್​ ಪಂದ್ಯ ಅಂತ್ಯವಾದ ಬಳಿಕ ಟೀಮ್ ಇಂಡಿಯಾ ಆಂಗ್ಲರ ವಿರುದ್ಧ ಸೀಮಿತ ಓವರ್​​ಗಳ ಸರಣಿ ಆಡಲಿದೆ. ಈ ಪೈಕಿ ಜುಲೈ 7 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಇದಕ್ಕೂ ಮುನ್ನ ಇಂಡಿಯನ್ಸ್ ತಂಡ ಡರ್ಬಿಶೈರ್ (Derbyshire vs Indians) ವಿರುದ್ಧ ಟಿ20 ಅಭ್ಯಾಸ ಪಂದ್ಯವನ್ನು ಆಡಿದೆ. ಇದರಲ್ಲಿ ದಿನೇಶ್ ಕಾರ್ತಿಕ್ (Dinesh Karthik) ನಾಯಕತ್ವದ ಇಂಡಿಯನ್ಸ್ ತಂಡ ಭರ್ಜರಿ ಆಟವಾಡಿ 7 ವಿಕೆಟ್​ಗಳ ಅಮೋಘ ಗೆಲುವು ಕಂಡಿತು.

ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಬೌಲರ್ ಉಮ್ರಾನ್ ಮಲಿಕ್ ತಮ್ಮ ಮಿಂಚಿನ ವೇಗದ ಮೂಲಕ ಎದುರಾಳಿ ಬ್ಯಾಟರ್ ಅನ್ನು ಕ್ಲೀನ್ ಬೌಲ್ಡ್ ಮಾಡಿದರು. ಡರ್ಬಿಶೈರ್ ತಂಡದ ಬ್ಯಾಟರ್ ಬ್ರೂಕ್ ಗೆಸ್ಟ್ ಅವರು ಮಲಿಕ್ ಬೌಲಿಂಗ್ ಸ್ಪೀಡ್ ಅರಿಯದೆ ಔಟಾದರು. ಮಿಡಲ್ ವಿಕೆಟ್​ಗೆ ಚೆಂಡು ಬಡಿದ ರಭಸಕ್ಕೆ ವಿಕೆಟ್ ಕೊಂಚ ದೂರ ಹೋಗಿ ಬಿದ್ದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
IND vs ENG: ಭಾರತದ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್: ಇಲ್ಲಿದೆ 2ನೇ ದಿನದ ಹೈಲೇಟ್ಸ್
Image
IND vs ENG: 6 ಎಸೆತಗಳಲ್ಲಿ ವಿಶ್ವದಾಖಲೆ ಬರೆದ ಬಮ್ರಾ; ಕೊಹ್ಲಿ- ದ್ರಾವಿಡ್ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ?
Image
IND vs ENG: ಸ್ಟುವರ್ಟ್ ಬ್ರಾಡ್ ಎಸೆದ ಒಂದೇ ಓವರ್​ನಲ್ಲಿ 46 ವರ್ಷಗಳ ಹಿಂದಿನ ದಾಖಲೆ ಮುರಿದ ಬುಮ್ರಾ..!
Image
Virat Kohli: ಶತಕವಿಲ್ಲ, ಇತ್ತ ರನ್​ಗಳು ಬರುತಿಲ್ಲ; ಮುಗಿಯಿತಾ ಕೊಹ್ಲಿ ಕೆರಿಯರ್? 3 ವರ್ಷದ ಲೆಕ್ಕಾಚಾರ ಹೀಗಿದೆ

Jasprit Bumrah: ಹೆಸರಿಗಷ್ಟೇ ಬುಮ್ರಾ ಕ್ಯಾಪ್ಟನ್: ಮೈದಾನದಲ್ಲಿ ಕಿಂಗ್ ಕೊಹ್ಲಿಯದ್ದೇ ನಿರ್ಧಾರ

ಡರ್ಬಿಯ ಕೌಂಟಿ ಗ್ರೌಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ಗೆ ಇಳಿದ ಡರ್ಬಿಶೈರ್ ಉಮ್ರಾನ್ ಮಲಿಕ್ ಮತ್ತು ಅರ್ಶ್​​ದೀಪ್ ಸಿಂಗ್ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡ ಡರ್ಬಿಶೈರ್​ಗೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಆಸರೆಯಾದರು. ಮಡ್ಸೇನ್ 23 ಎಸೆತಗಳಲ್ಲಿ 28 ರನ್ ಗಳಿಸಿದರೆ, ಕಾರ್ಟ್​​​ವ್ರೈಟ್ 27, ಬ್ರೂಕ್ ಗೆಸ್ಟ್ 23 ಹಾಗೂ ಅಲೆಕ್ಸ್ ಹಗ್ಸ್ 24 ರನ್ ಗಳಿಸಿದರು. ಪರಿಣಾಮ ಡರ್ಬಿಶೈರ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿತು. ಇಂಡಿಯನ್ಸ್ ತಂಡದ ಪರ ಅರ್ಶ್​​ದೀಪ್ ಹಾಗೂ ಮಲಿಕ್ ತಲಾ 2 ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್ ಹಾಗೂ ವೆಂಕಟೇಶ್ ತಲಾ 1 ವಿಕೆಟ್ ಪಡೆದರು.

ಸವಾಲಿನ ಗುರಿ ಬೆನ್ನಟ್ಟಿದ ಇಂಡಿಯನ್ಸ್ ಕೂಡ ಮೊದಲ ಓವರ್​ನಲ್ಲೇ ರುತುರಾಜ್ ಗಾಯಕ್ವಾಡ್ (3) ವಿಕೆಟ್ ಕಳೆದುಕೊಂಡಿತು. ಈ ಮೂಲಕ ಗಾಯಕ್ವಾಡ್ ಕಳಪೆ ಫಾರ್ಮ್ ಇಲ್ಲೂ ಮುಂದುವರೆದಿದೆ. ಆದರೆ, ಎರಡನೇ ವಿಕೆಟ್​ಗೆ ಸಂಜು ಸ್ಯಾಮ್ಸನ್ ಹಾಗೂ ದೀಪಕ್ ಹೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮತ್ತೊಮ್ಮೆ ಅಬ್ಬರಿಸಿದ ಈ ಜೋಡಿ 55 ರನ್​ಗಳ ಕಾಣಿಕೆ ನೀಡಿದರು. ಸಂಜು 30 ಎಸೆತಗಳಲ್ಲಿ 38 ರನ್ ಸಿಡಿಸಿ ಔಟಾದರು.

ನಂತರ ಹೂಡ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಡರ್ಬಿಶೈರ್ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ಹೂಡ ಮತ್ತೊಮ್ಮೆ ಆಕರ್ಷಕ ಅರ್ಧಶತಕ ಸಿಡಿಸಿದರು. ಕೇವಲ 37 ಎಸೆತಗಳಲ್ಲಿ 5 ಫೋರ್, 2 ಸಿಕ್ಸರ್ ನೆರವಿನಿಂದ 59 ರನ್ ಚಚ್ಚಿದರು. ಸೂರ್ಯ 22 ಎಸೆತಗಳಲ್ಲ 36 ರನ್ ಗಳಿಸಿ ಔಟಾಗದೆ ಉಳಿದರೆ ನಾಯಕ ದಿನೇಶ್ ಕಾರ್ತಿಕ್ ಅಜೇಯ 7 ರನ್ ಗಳಿಸಿದರು. ಪರಿಣಾಮ ಭಾರತ 16.4 ಓವರ್​ನಲ್ಲೇ 3 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿ ಭರ್ಜರಿ ಗೆಲುವು ಕಂಡಿತು. ಇಂಡಿಯನ್ಸ್ ತಂಡ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಜುಲೈ 3ರಂದು ನಾರ್ಥಾಂಪ್ಟನ್‌ಶೈರ್ ವಿರುದ್ಧ ಆಡಲಿದೆ.

Ravindra Jadeja: ಜಡೇಜಾ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ

Published On - 11:20 am, Sun, 3 July 22

ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​