DERBY vs INDS: T20 ಅಭ್ಯಾಸ ಪಂದ್ಯದಲ್ಲೂ ಹೂಡ ಸ್ಫೋಟಕ ಆಟ: ಕಾರ್ತಿಕ್ ಪಡೆಗೆ 7 ವಿಕೆಟ್​ಗಳ ಜಯ

ಇಂಡಿಯನ್ಸ್ ತಂಡ ಡರ್ಬಿಶೈರ್ (Derbyshire vs Indians) ವಿರುದ್ಧ ಟಿ20 ಅಭ್ಯಾಸ ಪಂದ್ಯವನ್ನು ಆಡಿದೆ. ಶುಕ್ರವಾರ ಜರುಗಿದ ಮೊದಲ ಅಭ್ಯಾಸ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದ ಇಂಡಿಯನ್ಸ್ ತಂಡ ಭರ್ಜರಿ ಆಟವಾಡಿ 7 ವಿಕೆಟ್​ಗಳ ಅಮೋಘ ಗೆಲುವು ಕಂಡಿದೆ.

DERBY vs INDS: T20 ಅಭ್ಯಾಸ ಪಂದ್ಯದಲ್ಲೂ ಹೂಡ ಸ್ಫೋಟಕ ಆಟ: ಕಾರ್ತಿಕ್ ಪಡೆಗೆ 7 ವಿಕೆಟ್​ಗಳ ಜಯ
Dinesh Karthik and Deepak Hooda
TV9kannada Web Team

| Edited By: Vinay Bhat

Jul 02, 2022 | 9:37 AM

ಭಾರತ ಕ್ರಿಕೆಟ್ ತಂಡ ಸದ್ಯ ಇಂಗ್ಲೆಂಡ್ (India vs England) ವಿರುದ್ಧ ಬಾಕಿ ಉಳಿದಿರುವ ಅಂತಿಮ ಐದನೇ ಟೆಸ್ಟ್​ ಪಂದ್ಯವನ್ನು ಆಡುತ್ತಿದೆ. ರಿಷಭ್ ಪಂತ್ ಅವರ ಆಕರ್ಷಕ ಶತಕ ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 73 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 338 ರನ್ ಕಲೆಹಾಕಿದೆ. ಈ ಟೆಸ್ಟ್​ ಪಂದ್ಯ ಅಂತ್ಯವಾದ ಬಳಿಕ ಟೀಮ್ ಇಂಡಿಯಾ ಆಂಗ್ಲರ ವಿರುದ್ಧ ಸೀಮಿತ ಓವರ್​​ಗಳ ಸರಣಿ ಆಡಲಿದೆ. ಈ ಪೈಕಿ ಜುಲೈ 7 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಇದಕ್ಕೂ ಮುನ್ನ ಇಂಡಿಯನ್ಸ್ ತಂಡ ಡರ್ಬಿಶೈರ್ (Derbyshire vs Indians) ವಿರುದ್ಧ ಟಿ20 ಅಭ್ಯಾಸ ಪಂದ್ಯವನ್ನು ಆಡಿದೆ. ಶುಕ್ರವಾರ ಜರುಗಿದ ಮೊದಲ ಅಭ್ಯಾಸ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ (Dinesh Karthik) ನಾಯಕತ್ವದ ಇಂಡಿಯನ್ಸ್ ತಂಡ ಭರ್ಜರಿ ಆಟವಾಡಿ 7 ವಿಕೆಟ್​ಗಳ ಅಮೋಘ ಗೆಲುವು ಕಂಡಿದೆ.

ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡ ಟೀಮ್ ಇಂಡಿಯಾವನ್ನ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯಗೆ ಎರಡು ಅಭ್ಯಾಸ ಪಂದ್ಯಗಳಿಂದ ಹೊರಗಿಡಲಾಗಿದೆ. ಹೀಗಾಗಿ ಡರ್ಬಿಶೈರ್ ವಿರುದ್ಧದ ಟಿ20 ಅಭ್ಯಾಸ ಪಂದ್ಯ ಮತ್ತು ಜುಲೈ 3ರಂದು ನಡೆಯಲಿರುವ ನಾರ್ಥಾಂಪ್ಟನ್‌ಶೈರ್ ಪಂದ್ಯಕ್ಕೆ ಕಾರ್ತಿಕ್‌ ನಾಯಕನಾಗಿದ್ದಾರೆ. ಡರ್ಬಿಯ ಕೌಂಟಿ ಗ್ರೌಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ENG vs IND 5th Tets: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್​​ನ ಮೊದಲ ದಿನದಾಟದ ರೋಚಕ ಫೋಟೋಗಳು ನೋಡಿ

ಬ್ಯಾಟಿಂಗ್​ಗೆ ಇಳಿದ ಡರ್ಬಿಶೈರ್ ಉಮ್ರಾನ್ ಮಲಿಕ್ ಮತ್ತು ಅರ್ಶ್​​ದೀಪ್ ಸಿಂಗ್ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡ ಡರ್ಬಿಶೈರ್​ಗೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಆಸರೆಯಾದರು. ಮಡ್ಸೇನ್ 23 ಎಸೆತಗಳಲ್ಲಿ 28 ರನ್ ಗಳಿಸಿದರೆ, ಕಾರ್ಟ್​​​ವ್ರೈಟ್ 27, ಬ್ರೂಕ್ ಗೆಸ್ಟ್ 23 ಹಾಗೂ ಅಲೆಕ್ಸ್ ಹಗ್ಸ್ 24 ರನ್ ಗಳಿಸಿದರು. ಪರಿಣಾಮ ಡರ್ಬಿಶೈರ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿತು. ಇಂಡಿಯನ್ಸ್ ತಂಡದ ಪರ ಅರ್ಶ್​​ದೀಪ್ ಹಾಗೂ ಮಲಿಕ್ ತಲಾ 2 ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್ ಹಾಗೂ ವೆಂಕಟೇಶ್ ತಲಾ 1 ವಿಕೆಟ್ ಪಡೆದರು.

ಸವಾಲಿನ ಗುರಿ ಬೆನ್ನಟ್ಟಿದ ಇಂಡಿಯನ್ಸ್ ಕೂಡ ಮೊದಲ ಓವರ್​ನಲ್ಲೇ ರುತುರಾಜ್ ಗಾಯಕ್ವಾಡ್ (3) ವಿಕೆಟ್ ಕಳೆದುಕೊಂಡಿತು. ಈ ಮೂಲಕ ಗಾಯಕ್ವಾಡ್ ಕಳಪೆ ಫಾರ್ಮ್ ಇಲ್ಲೂ ಮುಂದುವರೆದಿದೆ. ಆದರೆ, ಎರಡನೇ ವಿಕೆಟ್​ಗೆ ಸಂಜು ಸ್ಯಾಮ್ಸನ್ ಹಾಗೂ ದೀಪಕ್ ಹೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮತ್ತೊಮ್ಮೆ ಅಬ್ಬರಿಸಿದ ಈ ಜೋಡಿ 55 ರನ್​ಗಳ ಕಾಣಿಕೆ ನೀಡಿದರು. ಸಂಜು 30 ಎಸೆತಗಳಲ್ಲಿ 38 ರನ್ ಸಿಡಿಸಿ ಔಟಾದರು.

ನಂತರ ಹೂಡ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಡರ್ಬಿಶೈರ್ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ಹೂಡ ಮತ್ತೊಮ್ಮೆ ಆಕರ್ಷಕ ಅರ್ಧಶತಕ ಸಿಡಿಸಿದರು. ಕೇವಲ 37 ಎಸೆತಗಳಲ್ಲಿ 5 ಫೋರ್, 2 ಸಿಕ್ಸರ್ ನೆರವಿನಿಂದ 59 ರನ್ ಚಚ್ಚಿದರು. ಸೂರ್ಯ 22 ಎಸೆತಗಳಲ್ಲ 36 ರನ್ ಗಳಿಸಿ ಔಟಾಗದೆ ಉಳಿದರೆ ನಾಯಕ ದಿನೇಶ್ ಕಾರ್ತಿಕ್ ಅಜೇಯ 7 ರನ್ ಗಳಿಸಿದರು. ಪರಿಣಾಮ ಭಾರತ 16.4 ಓವರ್​ನಲ್ಲೇ 3 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿ ಭರ್ಜರಿ ಗೆಲುವು ಕಂಡಿತು. ಇಂಡಿಯನ್ಸ್ ತಂಡ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಜುಲೈ 3ರಂದು ನಾರ್ಥಾಂಪ್ಟನ್‌ಶೈರ್ ವಿರುದ್ಧ ಆಡಲಿದೆ.

ಇದನ್ನೂ ಓದಿ

Rishabh Pant: ರಿಷಭ್ ಪಂತ್ ಶತಕ ಸಿಡಿಸಿದಾಗ ಡಗೌಟ್​ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾಡಿದ್ದೇನು ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada