AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishabh Pant: ರಿಷಭ್ ಪಂತ್ ಶತಕ ಸಿಡಿಸಿದಾಗ ಡಗೌಟ್​ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾಡಿದ್ದೇನು ನೋಡಿ

IND vs ENG 5th Test: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್​​ನಲ್ಲಿ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಎದುರಾಳಿಯ ಮಾರಕ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದರು. ಕೇವಲ 89 ಎಸೆತಗಳಲ್ಲಿ ಪಂತ್ ಶತಕ ಬಾರಿಸುತ್ತಿದ್ದಂತೆಯೇ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಸಂಭ್ರಮ ಅಕ್ಷರಶಃ ಮುಗಿಲು ಮುಟ್ಟಿತ್ತು.

Rishabh Pant: ರಿಷಭ್ ಪಂತ್ ಶತಕ ಸಿಡಿಸಿದಾಗ ಡಗೌಟ್​ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾಡಿದ್ದೇನು ನೋಡಿ
Rishabh Pant and Rahul Dravid
TV9 Web
| Updated By: Vinay Bhat|

Updated on:Jul 02, 2022 | 8:02 AM

Share

ಮರು ನಿಗದಿಯಾಗಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಐದನೇ ಟೆಸ್ಟ್​ ಪಂದ್ಯ ಆರಂಭವಾಗಿದ್ದು ಮೊದಲ ದಿನವೇ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡ ಪರಿಣಾಮ ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ವೈಫಲ್ಯ ಅನುಭವಿಸಿತು. ಆದರೆ, ನಂತರ ನಡೆದಿದ್ದು ರಿಷಭ್ ಪಂತ್ (Rishabh Pant) ಆಟ. 98 ರನ್​ಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದ ಭಾರತಕ್ಕೆ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ (Ravindra Jadeja) ಆಸರೆಯಾಗಿ ನಿಂತರು. ಸಂತಸದ ಅಲೆಯಲ್ಲಿ ತೇಲುತ್ತಿದ್ದ ಇಂಗ್ಲೆಂಡ್ ಬೌಲರ್​ಗಳ ಬೆವರಿಳಿಸಿದ ಇವರಿಬ್ಬರು ಬರೋಬ್ಬರಿ 222 ರನ್​​ಗಳ ಜೊತೆಯಾಟ ಆಡಿದರು. ಪಂತ್ ದಾಖಲೆಯ ಶತಕ ಸಿಡಿಸಿ ಔಟ್ ಆದರೆ, ಜಡೇಜಾ ಸೆಂಚುರಿಯ ಹೊಸ್ತಿಲಲ್ಲಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 73 ಓವರ್​​ನಲ್ಲಿ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.

ಭಾರತ ಪರ ಮೊದಲ ಇನ್ನಿಂಗ್ಸ್​ ಆರಂಭಿಸಿದ ಶುಭ್ಮನ್ ಗಿಲ್ (17) ಹಾಗೂ ಚೇತೇಶ್ವರ್ ಪೂಜಾರ (13) ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಎರಡು ವಿಕೆಟ್‌ಗಳು ಜೇಮ್ಸ್ ಆ್ಯಂಡರ್ಸನ್ ಪಾಲಾಯಿತು. ಹನುಮ ವಿಹಾರಿ ಆಟ ಕೂಡ 20 ರನ್​ಗೆ ಅಂತ್ಯವಾಯಿತು. ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭರವಸೆ ಮೂಡಿಸಿದ್ದ ವಿರಾಟ್ ಕೊಹ್ಲಿ  11 ರನ್​ಗೆ ಕ್ಲಿನ್ ಬೌಲ್ಡ್ ಆಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಶ್ರೇಯಸ್ ಅಯ್ಯರ್ (15) ಕೂಡ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿಲ್ಲ.

ಇದನ್ನೂ ಓದಿ
Image
IND vs ENG: ವಿರಾಟ್ ಮತ್ತೆ ಫೇಲ್; ನಾಲ್ಕನೇ ಟೆಸ್ಟ್ ಆಡುತ್ತಿರುವ ಬೌಲರ್​ಗೆ ಕೊಹ್ಲಿ ಬಲಿ! ಸಂಕಷ್ಟದಲ್ಲಿ ಭಾರತ
Image
IND vs ENG: ಹಾರ್ದಿಕ್​ ಪಾಂಡ್ಯಗೆ ವಿಶ್ರಾಂತಿ; ದಿನೇಶ್ ಕಾರ್ತಿಕ್​ಗೆ ಟಿ20 ನಾಯಕತ್ವ! ದ್ರಾವಿಡ್ ಅಚ್ಚರಿ ಆಯ್ಕೆ
Image
IND vs SL: ಮಿಂಚಿದ ಕ್ಯಾಪ್ಟನ್; ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ!
Image
IND vs ENG: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ! ಯಾರಿಗೆಲ್ಲ ಚಾನ್ಸ್?

IND vs ENG: ಇಂಗ್ಲೆಂಡ್​ನಲ್ಲಿ ಮತ್ತೊಮ್ಮೆ ದಾಖಲೆಯ ಶತಕ ಸಿಡಿಸಿದ ರಿಷಬ್ ಪಂತ್! ಸಾಥ್ ನೀಡಿದ ಜಡೇಜಾ

ಈ ಸಂದರ್ಭ ಜೊತೆಯಾದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಎದುರಾಳಿಯ ಮಾರಕ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದರು. ಅದರಲ್ಲೂ ಪಂತ್ ಸಾಲು ಸಾಲು ಟೀಕೆಗಳಿಗೆ ದಿಟ್ಟ ಬ್ಯಾಟಿಂಗ್ ಮೂಲಕ ಉತ್ತರ ನೀಡಿ ದಾಖಲೆಯ ಶತಕ ಸಿಡಿಸಿದರು. ಕೇವಲ 89 ಎಸೆತಗಳಲ್ಲಿ ಪಂತ್ ಶತಕ ಬಾರಿಸುತ್ತಿದ್ದಂತೆಯೇ ಟೀಮ್ ಇಂಡಿಯಾ ಮುಖ್ಯ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಅವರ ಸಂಭ್ರಮ ಅಕ್ಷರಶಃ ಮುಗಿಲು ಮುಟ್ಟಿತ್ತು. ಎಂಥದ್ದೇ ಸಂದರ್ಭದಲ್ಲಿ ಬಹಳಾ ವಿನಯವಾಗಿ ಹಾಗೂ ಶಾಂತಿಯಿಂದ ನಡೆದುಕೊಳ್ಳುವ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ದ್ರಾವಿಡ್‌ ಅವರು ಈ ಭಾರಿ ಪಂತ್‌ ಅವರ ವೀರಾವೇಶದ ಶತಕ ಕಂಡು ಡ್ರೆಸಿಂಗ್‌ ರೂಮ್‌ನಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

111 ಎಸೆಗಳಲ್ಲಿ 20 ಫೋರ್‌ ಮತ್ತು 4 ಸಿಕ್ಸರ್‌ಗಳೊಂದಿಗೆ 146 ರನ್‌ ಚಚ್ಚುವ ಮೂಲಕ ಪಂತ್ ತಮ್ಮ ಸ್ಪೋಟಕ ಇನಿಂಗ್ಸ್‌ ಅಂತ್ಯಗೊಳಿಸಿದರು. ಈ ವಿಶೇಷ ಶತಕದೊಂದಿಗೆ ಪಂತ್‌ ಹಲವು ದಾಖಲೆಗಳನ್ನು ನುಚ್ಚು ನೂರು ಮಾಡಿದ್ದಾರೆ ಕೂಡ. 6ನೇ ವಿಕೆಟ್‌ಗೆ 222 ರನ್‌ಗಳ ದಾಖಲೆಯ ಜೊತೆಯಾಟವನ್ನು ರಿಷಭ್ ಪಂತ್‌ ಹಾಗೂ ರವೀಂದ್ರ ಜಡೇಜಾ ಆಡಿದರು. ಇದು ವಿದೇಶದ ನೆಲದಲ್ಲಿ 6ನೇ ವಿಕೆಟ್‌ಗೆ ಭಾರತದ ಜಂಟಿ ಗರಿಷ್ಠ ರನ್‌ ಜೊತೆಯಾಟವಾಗಿದೆ. ಅದಲ್ಲದೆ, ಇಂಗ್ಲೆಂಡ್‌ ನೆಲದಲ್ಲಿ 6ನೇ ವಿಕೆಟ್‌ಗೆ ಭಾರತದ ಗರಿಷ್ಠ ರನ್‌ ಜೊತೆಯಾಟ ಎನಿಸಿದೆ.

ಇನ್ನು ಕ್ಯಾಲೆಂಡರ್‌ ವರ್ಷವೊಂದರಲ್ಲಿ ಎರಡು ಶತಕ ಬಾರಿಸಿದ ಕೇವಲ 4ನೇ ಭಾರತೀಯ ವಿಕೆಟ್‌ ಕೀಪರ್‌ ರಿಷಭ್‌ ಪಂತ್. ಇದಕ್ಕೂ ಮುನ್ನ 1964ರಲ್ಲಿ ಬುಧಿ ಕುಂದರನ್, 2009ರಲ್ಲಿ ಎಂಎಸ್ ಧೋನಿ ಹಾಗೂ 2017ರಲ್ಲಿ ವೃದ್ಧಿಮಾನ್‌ ಸಾಹ ಈ ಸಾಧನೆ ಮಾಡಿದ್ದರು. ಸದ್ಯ ಮೊದಲ ದಿನದ ಅಂತ್ಯಕ್ಕೆ ಭಾರತ ತಂಡ 73 ಓವರ್‌ಗಳಲ್ಲಿ 338/7 ರನ್‌ಗಳಿಸಿದೆ. ಜಡೇಜಾ 83 ರನ್ ಗಳಿಸಿ ಮತ್ತು ಮೊಹಮ್ಮದ್ ಶಮಿ ಖಾತೆ ತೆರೆಯದೆ ಕ್ರೀಸ್​​ನಲ್ಲಿದ್ದಾರೆ.

Malaysia Open 2022: ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಸಿಂಧು, ಪ್ರಣಯ್ ಪಯಣವೂ ಅಂತ್ಯ

Published On - 8:02 am, Sat, 2 July 22

ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ