IND vs ENG: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ! ಯಾರಿಗೆಲ್ಲ ಚಾನ್ಸ್?
IND vs ENG: ಭಾರತ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕತ್ವವು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರದ್ದಾಗಿದೆ.
ಭಾರತ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ (T20 and ODI series) ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕತ್ವವು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ (Jos Buttler) ಅವರದ್ದಾಗಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಂತರ ಎರಡು ತಂಡಗಳ ನಡುವೆ ಮೂರು ODI ಮತ್ತು ಮೂರು T20 ಪಂದ್ಯಗಳ ಸರಣಿ ನಡೆಯಲಿದೆ. ಭಾರತ ವಿರುದ್ಧದ ಈ ಸರಣಿಯೊಂದಿಗೆ ಇಂಗ್ಲೆಂಡ್ ಕ್ರಿಕೆಟ್‌ನ ಹೊಸ ಇನ್ನಿಂಗ್ಸ್ ಆರಂಭವಾಗಲಿದೆ. ಸುಮಾರು ಏಳೂವರೆ ವರ್ಷಗಳ ಬಳಿಕ ತಂಡ ಹೊಸ ನಾಯಕನೊಂದಿಗೆ ಏಕದಿನ ಪಂದ್ಯಕ್ಕೆ ಇಳಿಯಲಿದೆ. ಇಯಾನ್ ಮಾರ್ಗನ್ (Eoin Morgan) ನಿವೃತ್ತಿಯ ನಂತರ, ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ಏಕದಿನ ಮತ್ತು ಟಿ 20 ಮಾದರಿಗಳಲ್ಲಿ ತಂಡದ ನಾಯಕರನ್ನಾಗಿ ಮಾಡಲಾಗಿದೆ.
ಟೆಸ್ಟ್ ತಂಡದ ಆಟಗಾರರಿಗೆ ಟಿ20 ಸರಣಿಯಲ್ಲಿ ವಿಶ್ರಾಂತಿ
ಭಾರತದಂತೆಯೇ ಇಂಗ್ಲೆಂಡ್ ಕೂಡ ಟಿ20 ಸರಣಿಯಲ್ಲಿ ತಮ್ಮ ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಎಡ್ಜ್‌ಬಾಸ್ಟನ್ ಟೆಸ್ಟ್ ಜುಲೈ 5 ರಂದು ಕೊನೆಗೊಳ್ಳಲಿದೆ. ಕೇವಲ ಎರಡು ದಿನಗಳ ನಂತರ, ಜುಲೈ 7 ರಿಂದ ಟಿ 20 ಸರಣಿಯು ಪ್ರಾರಂಭವಾಗಲಿದೆ. ಈ ಕಾರಣಕ್ಕಾಗಿ, ಸರಣಿಯ ಮೊದಲ ಪಂದ್ಯಕ್ಕೆ ಟೆಸ್ಟ್ ಆಡುವ ತನ್ನ ಆಟಗಾರರಿಗೆ ಭಾರತವೂ ವಿಶ್ರಾಂತಿ ನೀಡಿದೆ.
ಸ್ಯಾಮ್ ಕರ್ರನ್ ವಾಪಸ್
ಸ್ಯಾಮ್ ಕರ್ರನ್ ಸುಮಾರು ಒಂದು ವರ್ಷದ ನಂತರ ಇಂಗ್ಲೆಂಡ್‌ನ T20 ತಂಡಕ್ಕೆ ಮರಳಿದ್ದಾರೆ. ಇತ್ತೀಚೆಗಷ್ಟೇ ಅವರು ಪ್ರಥಮ ದರ್ಜೆ ಪಂದ್ಯದಲ್ಲಿ ಸರ್ರೆ ಪರ ಶತಕ ಬಾರಿಸಿದ್ದರು. 75 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 126 ರನ್ ಗಳಿಸಿದರು. ಅದೇ ಸಮಯದಲ್ಲಿ, 34 ವರ್ಷದ ವೇಗದ ಬೌಲರ್ ಗ್ಲೀಸನ್‌ಗೆ ಮೊದಲ ಬಾರಿಗೆ ಟಿ20 ತಂಡದಲ್ಲಿ ಅವಕಾಶ ನೀಡಲಾಗಿದೆ. ತಂಡದ ಬೌಲರ್ ಆದಿಲ್ ರಶೀದ್‌ಗೆ ಹಜ್ ಯಾತ್ರೆಗೆ ರಜೆ ನೀಡಲಾಗಿದೆ.
ODI ಮತ್ತು T20 ಸರಣಿ ವೇಳಾಪಟ್ಟಿ
ಜುಲೈ 7ರಂದು ಟಿ20 ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯ ಸೌತಾಂಪ್ಟನ್ನಲ್ಲಿ ನಡೆಯಲಿದೆ. ಇದರ ನಂತರ, ಜುಲೈ 9 ರಂದು ಎರಡನೇ ಟಿ20 ಬರ್ಮಿಂಗ್‌ಹ್ಯಾಮ್‌ನಲ್ಲಿ ಮತ್ತು ಜುಲೈ 10 ರಂದು ಸರಣಿಯ ಕೊನೆಯ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.
ಇದಾದ ಬಳಿಕ ಜುಲೈ 12ರಿಂದ ಮೂರು ಏಕದಿನ ಪಂದ್ಯಗಳು ಆರಂಭವಾಗಲಿದ್ದು, ಸರಣಿಯ ಮೊದಲ ಪಂದ್ಯ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ. ಎರಡನೇ ODI ಜುಲೈ 14 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದ್ದು, ಕೊನೆಯ ಪ್ರವಾಸದ ಕೊನೆಯ ಪಂದ್ಯವು ಜುಲೈ 17 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.
ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ – ಜೋಸ್ ಬಟ್ಲರ್, ಮೊಯಿನ್ ಅಲಿ, ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಬ್ರೇಡೆನ್ ಕಾರ್ಸ್, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟನ್, ಕ್ರೇಗ್ ಓವರ್‌ಟನ್, ಮ್ಯಾಟ್ ಪಾರ್ಕಿನ್ಸನ್, ಜೋ ರೂಟ್, ಜೇಸನ್ ರಾಯ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ ಮತ್ತು ಡೇವಿಡ್ ವಿಲ್ಲಿ
T20I ಸರಣಿಗಾಗಿ ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್, ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್ಟನ್, ಡೇವಿಡ್ ಮಲನ್, ಟಿಮಲ್ ಮಿಲ್ಸ್, ಮ್ಯಾಟ್ ಪಾರ್ಕಿನ್ಸನ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ.
Published On - 5:26 pm, Fri, 1 July 22