Eoin Morgan: ನಿವೃತ್ತಿ ಬಳಿಕ ಹೊಸ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್
Eoin Morgan: ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಇಯಾನ್ ಮಾರ್ಗನ್ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಹಲವಾರು ವರ್ಷಗಳಿಂದ ಫಾರ್ಮ್ ಕೊರತೆ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಈ ಸ್ಟಾರ್ ಕ್ರಿಕೆಟಿಗ ಆಟಕ್ಕೆ ವಿದಾಯ ಹೇಳಿದ್ದಾರೆ.
ವಿಶ್ವಕಪ್ (World Cup)ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಇಯಾನ್ ಮಾರ್ಗನ್ (Eoin Morgan) ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಹಲವಾರು ವರ್ಷಗಳಿಂದ ಫಾರ್ಮ್ ಕೊರತೆ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಈ ಸ್ಟಾರ್ ಕ್ರಿಕೆಟಿಗ ಆಟಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ಬ್ಯಾಟಿಂಗ್ ಜೊತೆಗೆ, ಮಾರ್ಗನ್ 13 ವರ್ಷಗಳ ಕಾಲ ಇಂಗ್ಲೆಂಡ್ ತಂಡದ ನಾಯಕರಾಗಿದ್ದಾರೆ. ಅವರು 2019 ರ ODI ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದರು ಮತ್ತು ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದರು. ನಿವೃತ್ತಿ ಘೋಷಿಸಿದ ಕೆಲವೇ ದಿನಗಳಲ್ಲಿ, ಸ್ಟಾರ್ ಆಟಗಾರ ತಮ್ಮ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. ಮುಂಬರುವ ಭಾರತ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಯಿಂದ ವಿವರಣೆಗಾರನ್ನಾಗಿ ಕಾಣಿಸಿಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ. ಇತ್ತೀಚೆಗೆ ಮೋರ್ಗಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವ ಸ್ಕೈ ನೆಟ್‌ವರ್ಕ್ ಕೂಡ ಇದನ್ನು ಖಚಿತಪಡಿಸಿದೆ. ಮೋರ್ಗನ್ ತಮ್ಮ ಕಾಮೆಂಟರಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಹೇಳಿಕೊಂಡಿದೆ.
ಇಂಗ್ಲೆಂಡ್ ತವರಿನಲ್ಲಿ ಆಡಲಿರುವ ಮುಂದಿನ ಸರಣಿಯಿಂದ ಮಾರ್ಗನ್ ಸ್ಕೈ ನೆಟ್‌ವರ್ಕ್‌ನ ಪಾಲುದಾರರಾಗಲಿದ್ದಾರೆ. ಅಂದರೆ ಮುಂಬರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯಿಂದ ಮಾಜಿ ನಾಯಕ ಕಾಮೆಂಟೇಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲಿದ್ದಾರೆ. ಮೋರ್ಗನ್ ಐರ್ಲೆಂಡ್ ಪರ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ನಂತರ ಇಂಗ್ಲೆಂಡ್ ತಂಡಕ್ಕೆ ತೆರಳಿದರು. ಮಾರ್ಗನ್ ಏಳು ವರ್ಷಗಳ ಕಾಲ ಇಂಗ್ಲೆಂಡ್ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ ಅವರು ತಮ್ಮ ಸಂಪೂರ್ಣ ವೃತ್ತಿಜೀವನದಲ್ಲಿ 16 ಟೆಸ್ಟ್, 248 ODI ಮತ್ತು 115 T20I ಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 2 ಶತಕ ಮತ್ತು 3 ಅರ್ಧಶತಕಗಳೊಂದಿಗೆ 700 ರನ್ ಗಳಿಸಿದರು. ಜೊತೆಗೆ 14 ಶತಕ ಮತ್ತು ಅರ್ಧ ಶತಕಗಳ ಸಹಾಯದಿಂದ ಏಕದಿನ ಪಂದ್ಯಗಳಲ್ಲಿ 7,701 ರನ್ ಗಳಿಸಿದ್ದಾರೆ. 14 ಅರ್ಧಶತಕಗಳ ನೆರವಿನಿಂದ ಟಿ20ಯಲ್ಲಿ 2,458 ರನ್ ಗಳಿಸಿದ್ದಾರೆ.
ಮಾರ್ಗನ್ ಸ್ಥಾನಕ್ಕೆ ಬಟ್ಲರ್
ಇಂಗ್ಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಈಗ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಇಯಾನ್ ಮಾರ್ಗನ್ ನಂತರ, ತಂಡವು ಹೊಸ ನಾಯಕನನ್ನು ಹುಡುಕುತ್ತಿತ್ತು, ಅದು ಬಟ್ಲರ್ ಆಯ್ಕೆಯೊಂದಿಗೆ ಕೊನೆಗೊಂಡಿದೆ. ಇಯಾನ್ ಮಾರ್ಗನ್ ಸುಮಾರು ಏಳೂವರೆ ವರ್ಷಗಳ ಕಾಲ ತಂಡದ ನಾಯಕರಾಗಿದ್ದರು. ಆ ಸಮಯದಲ್ಲಿ ಬಟ್ಲರ್ ತಂಡದ ಉಪನಾಯಕನ ಜವಾಬ್ದಾರಿಯನ್ನು ಹೊತ್ತಿದ್ದರು. ಈ ಸಮಯದಲ್ಲಿ, ಅವರು ಒಂಬತ್ತು ODI ಮತ್ತು ಐದು T20 ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು. ನೆದರ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಮಾರ್ಗನ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವವನ್ನೂ ವಹಿಸಿಕೊಂಡರು.