Jos Buttler: ಇಂಗ್ಲೆಂಡ್ ತಂಡಕ್ಕೆ ಹೊಸ ನಾಯಕ; ಏಕದಿನ ಮತ್ತು ಟಿ20 ತಂಡದ ನಾಯಕನಾಗಿ ಜೋಸ್ ಬಟ್ಲರ್ ಆಯ್ಕೆ..!
Jos Buttler: ಇಂಗ್ಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಈಗ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಇಂಗ್ಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ (Jos Buttler) ಈಗ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಇಯಾನ್ ಮಾರ್ಗನ್ (Eoin Morgan) ನಂತರ, ತಂಡವು ಹೊಸ ನಾಯಕನನ್ನು ಹುಡುಕುತ್ತಿತ್ತು, ಅದು ಬಟ್ಲರ್ ಆಯ್ಕೆಯೊಂದಿಗೆ ಕೊನೆಗೊಂಡಿದೆ. ಇಯಾನ್ ಮಾರ್ಗನ್ ಸುಮಾರು ಏಳೂವರೆ ವರ್ಷಗಳ ಕಾಲ ತಂಡದ ನಾಯಕರಾಗಿದ್ದರು. ಆ ಸಮಯದಲ್ಲಿ ಬಟ್ಲರ್ ತಂಡದ ಉಪನಾಯಕನ ಜವಾಬ್ದಾರಿಯನ್ನು ಹೊತ್ತಿದ್ದರು. ಈ ಸಮಯದಲ್ಲಿ, ಅವರು ಒಂಬತ್ತು ODI ಮತ್ತು ಐದು T20 ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು. ನೆದರ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಮಾರ್ಗನ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವವನ್ನೂ ವಹಿಸಿಕೊಂಡರು.
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಇಂಗ್ಲೆಂಡ್ ಪರ ಸೀಮಿತ ಓವರ್‌ಗಳಲ್ಲಿ ಜೋಸ್ ಬಟ್ಲರ್ ಅದ್ಭುತ ಬ್ಯಾಟಿಂಗ್ ಮಾಡಿದರು. ಅವರು ಈ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ನೆದರ್ಲ್ಯಾಂಡ್ಸ್ ವಿರುದ್ಧ ಆಮ್ಸ್ಟೆಲ್ವೀನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ODI ಸಮಯದಲ್ಲಿ, ಅವರು ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ನ ವಿಶ್ವ ದಾಖಲೆಯ 498 ಸ್ಕೋರ್‌ನಲ್ಲಿ 70 ಎಸೆತಗಳಲ್ಲಿ ಅಜೇಯ 162 ರನ್ ಗಳಿಸಿದರು.
The wins. The losses. The lessons.
They’ve all led you here…
Now is your time, @josbuttler ? pic.twitter.com/yFFHz2F0L4
— England Cricket (@englandcricket) June 30, 2022
ಮಾರ್ಗನ್ಗೆ ಧನ್ಯವಾದ ಹೇಳಿದ ಬಟ್ಲರ್
ಜೋಸ್ ಬಟ್ಲರ್ ಆಟದ ಪ್ರತಿಯೊಂದು ಸ್ವರೂಪದಲ್ಲಿ ಶತಕ ಗಳಿಸಿದ ಕೇವಲ ಮೂವರು ಇಂಗ್ಲೆಂಡ್ ಕ್ರಿಕೆಟಿಗರಲ್ಲಿ ಒಬ್ಬರು. ಇವರಲ್ಲದೆ ಡೇವಿಡ್ ಮಲಾನ್ ಮತ್ತು ಹೀದರ್ ನೈಟ್ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ಸ್ವರೂಪದ ನಾಯಕನಾದ ನಂತರ, ಜೋಸ್ ಬಟ್ಲರ್, ‘ಕಳೆದ ಏಳು ವರ್ಷಗಳಲ್ಲಿ ಇಯಾನ್ ಮಾರ್ಗನ್ ಅವರ ಅತ್ಯುತ್ತಮ ನಾಯಕತ್ವಕ್ಕಾಗಿ ನನ್ನ ಹೃತ್ಪೂರ್ವಕ ಧನ್ಯವಾದ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ಎಲ್ಲರಿಗೂ ಅತ್ಯಂತ ಸ್ಮರಣೀಯ ಸಮಯವಾಗಿದೆ. ಅವರು ಸ್ಪೂರ್ತಿದಾಯಕ ನಾಯಕರಾಗಿದ್ದು, ಅವರ ನಾಯಕತ್ವದಲ್ಲಿ ಆಡುವುದು ಅದ್ಭುತವಾಗಿತ್ತು. ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದಿದ್ದಾರೆ.
ಬಟ್ಲರ್ 2011 ರಲ್ಲಿ ತಮ್ಮ ಮೊದಲ T20 ಪಂದ್ಯವನ್ನು ಆಡಿದರು. ಇದರ ನಂತರ ಮೊದಲ ODI ಪಂದ್ಯವನ್ನು ಮುಂದಿನ ವರ್ಷ ಆಡಿದರು. ಬಟ್ಲರ್ ತಮ್ಮ ವೃತ್ತಿಜೀವನದಲ್ಲಿ ಇಂಗ್ಲೆಂಡ್ ಪರ 151 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 41.20 ಸರಾಸರಿಯಲ್ಲಿ 4120 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 10 ಶತಕಗಳನ್ನು ಕೂಡ ಬಾರಿಸಿದ್ದಾರೆ. ಇಂಗ್ಲೆಂಡ್ ಪರ 88 ಟಿ20 ಪಂದ್ಯಗಳನ್ನೂ ಆಡಿದ್ದು, 141.20 ಸ್ಟ್ರೈಕ್ ರೇಟ್‌ನಲ್ಲಿ 2140 ರನ್ ಗಳಿಸಿದ್ದಾರೆ.
Published On - 9:04 pm, Thu, 30 June 22