IND vs ENG: ಅಂತಿಮ ಟೆಸ್ಟ್​ಗೆ ಬುಮ್ರಾ ಕ್ಯಾಪ್ಟನ್! 35 ವರ್ಷಗಳ ನಂತರ ವೇಗದ ಬೌಲರ್​ಗೆ ನಾಯಕತ್ವ

Jasprit Bumrah: 35 ವರ್ಷಗಳ ನಂತರ ಒಬ್ಬ ವೇಗದ ಬೌಲರ್ ಭಾರತವನ್ನು ಟೆಸ್ಟ್‌ನಲ್ಲಿ ಮುನ್ನಡೆಸುತಿದ್ದಾರೆ. ಪತ್ರಿಕಾಗೋಷ್ಠಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಪಿಚ್‌ಗೆ ಭೇಟಿ ನೀಡಿದ್ದರು. ಇದರಿಂದ ಬುಮ್ರಾ ಎಡ್ಜ್‌ಬಾಸ್ಟನ್ ಟೆಸ್ಟ್​ಗೆ ಭಾರತದ ನಾಯಕತ್ವವಹಿಸಿಕೊಳ್ಳುವುದು ಸ್ಪಷ್ಟವಾಗಿತ್ತು.

IND vs ENG: ಅಂತಿಮ ಟೆಸ್ಟ್​ಗೆ ಬುಮ್ರಾ ಕ್ಯಾಪ್ಟನ್! 35 ವರ್ಷಗಳ ನಂತರ ವೇಗದ ಬೌಲರ್​ಗೆ ನಾಯಕತ್ವ
ಜಸ್ಪ್ರೀತ್ ಬುಮ್ರಾ, ಕಪಿಲ್ ದೇವ್
Follow us
TV9 Web
| Updated By: ಪೃಥ್ವಿಶಂಕರ

Updated on:Jun 30, 2022 | 7:23 PM

ವೇಗಿಗಳಿಗೆ ನಾಯಕತ್ವ ನಿಭಾಯಿಸುವ ಸಾಮಥ್ಯ್ರ ಇಲ್ಲವೇ? ಇಲ್ಲ, ಬ್ಯಾಟ್ಸ್‌ಮನ್‌ಗಳು ಮಾತ್ರ ಇದಕ್ಕೆ ಸಮರ್ಥರೇ? ಎಂಬ ಪ್ರಶ್ನೆಗಳು ಕ್ರಿಕೆಟ್ ದುನಿಯಾದಲ್ಲಿ ಯಾವಾಗಲೂ ಚರ್ಚೆಯ ವಿಚಾರವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಕಪಿಲ್ ದೇವ್ (Kapil Dev) ನಂತರ ಯಾವುದೇ ವೇಗಿ ಭಾರತವನ್ನು ಟೆಸ್ಟ್‌ನಲ್ಲಿ ಮುನ್ನಡೆಸಿರಲಿಲ್ಲ. ಸ್ಪಿನ್ನರ್​ಗಳಲ್ಲಿ ಅನಿಲ್ ಕುಂಬ್ಳೆ (Anil Kumble) ಕೊನೆಯವರಾಗಿದ್ದರು. 35 ವರ್ಷಗಳ ನಂತರ ಒಬ್ಬ ವೇಗದ ಬೌಲರ್ ಭಾರತವನ್ನು ಟೆಸ್ಟ್‌ನಲ್ಲಿ ಮುನ್ನಡೆಸುತಿದ್ದಾರೆ. ಪತ್ರಿಕಾಗೋಷ್ಠಿಗೂ ಮುನ್ನ ಜಸ್ಪ್ರೀತ್ ಬುಮ್ರಾ (Jaspreet Bumra) ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಪಿಚ್‌ಗೆ ಭೇಟಿ ನೀಡಿದ್ದರು. ಇದರಿಂದ ಬುಮ್ರಾ ಎಡ್ಜ್‌ಬಾಸ್ಟನ್ ಟೆಸ್ಟ್​ಗೆ ಭಾರತದ ನಾಯಕತ್ವವಹಿಸಿಕೊಳ್ಳುವುದು ಸ್ಪಷ್ಟವಾಗಿತ್ತು. ಆದರೆ, ಹಿಂದಿನ ದಿನ ಸುದ್ದಿಗೋಷ್ಠಿಯಲ್ಲಿ ನಾಯಕತ್ವದ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಏನನ್ನೂ ಬಹಿರಂಗಪಡಿಸಲಿಲ್ಲ. ರೋಹಿತ್‌ಗಾಗಿ ಕಾಯುತ್ತೇನೆ ಎಂದು ಹೇಳಿದ್ದರು. ಇದಕ್ಕೂ ಮುನ್ನ, ರೋಹಿತ್ ಇಂದು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಇದರಲ್ಲಿ ಅವರಿಗೆ ಕೊರೊನಾ ಇರುವುದು ಪತ್ತೆಯಾಗಿದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಎಡ್ಜ್‌ಬಾಸ್ಟನ್ ಟೆಸ್ಟ್​ಗೆ ತಂಡವನ್ನು ಮುನ್ನಡೆಸಲಿದ್ದಾರೆ. ಜೊತೆಗೆ ಉಪನಾಯಕರಾಗಿ ರಿಷಬ್ ಪಂತ್​ (Rishabh Panth) ಆಯ್ಕೆಯಾಗಿದ್ದಾರೆ.

ಬುಮ್ರಾ ಟೆಸ್ಟ್ ವೃತ್ತಿ ಬದುಕು

ಬೌಲರ್ ಆಗಿ ಟೆಸ್ಟ್ ನಾಯಕತ್ವವಹಿಸಿಕೊಂಡಿರುವ ಬುಮ್ರಾ ಅವರ ಸಣ್ಣ ಟೆಸ್ಟ್ ವೃತ್ತಿಜೀವನದಲ್ಲಿ 29 ಪಂದ್ಯಗಳನ್ನು ಆಡಿದ್ದು, 123 ವಿಕೆಟ್ಗಳನ್ನು ಪಡೆದಿದ್ದಾರೆ. ಜೊತೆಗೆ 21.83 ಸರಾಸರಿಯಲ್ಲಿ ವಿಕೆಟ್ ಪಡೆದಿದ್ದಾರೆ. ಬುಮ್ರಾ ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು ವೆಸ್ಟ್ ಇಂಡೀಸ್ ವಿರುದ್ಧವಿದ್ದು 26 ರನ್​ಗಳಿಗೆ 6 ವಿಕೆಟ್ ಪಡೆದಿದ್ದಾರೆ. ಜಮೈಕಾದಲ್ಲಿ ನಡೆದ ಈ ಟೆಸ್ಟ್​ ಪಂದ್ಯದ ಒಂದು ಇನ್ನಿಂಗ್ಸ್‌ನಲ್ಲಿ ಬುಮ್ರಾ ಹ್ಯಾಟ್ರಿಕ್ ಗಳಿಸಿದರು. ಬುಮ್ರಾ ಬ್ಯಾಟಿಂಗ್‌ನಲ್ಲೂ ಕ್ರಮೇಣ ಸುಧಾರಣೆ ಕಂಡಿದ್ದು, ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಮೊಹಮ್ಮದ್ ಶಮಿ ಅವರೊಂದಿಗೆ 69 ರನ್‌ಗಳ ಮುರಿಯದ ಜೊತೆಯಾಟವನ್ನು ಮಾಡಿದರು.

ಇದನ್ನೂ ಓದಿ
Image
IND vs ENG: ಅಂತಿಮ ಟೆಸ್ಟ್​ನಿಂದ ರೋಹಿತ್ ಶರ್ಮಾ ಔಟ್! ಬುಮ್ರಾಗೆ ನಾಯಕತ್ವ
Image
ENG vs IND: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಗೆದ್ದು 15 ವರ್ಷಗಳ ನಂತರ ಇತಿಹಾಸ ನಿರ್ಮಿಸುತ್ತಾ ಭಾರತ?

ಕಳೆದ ಒಂದು ವರ್ಷದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ನಾಯಕತ್ವದಲ್ಲಿ ಭಾರಿ ಬದಲಾವಣೆಯಾಗಿದೆ. ನಾಯಕತ್ವದ ವಿಚಾರದಲ್ಲಿ ಭಾರತದ ಪರವಾಗಿ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶಿಖರ್ ಧವನ್, ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ರಿಷಬ್ ಪಂಥ್, ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಈಗ ಈ ಪಟ್ಟಿಗೆ ಹೊಸ ಸೇರ್ಪಡೆ ಜಸ್ಪ್ರೀತ್ ಬುಮ್ರಾ. ಭಾರತ ಕಳೆದ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ್ದು, ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಕೇವಲ ಒಂದು ಟೆಸ್ಟ್‌ಗೆ ಉಪ ನಾಯಕರಾಗಿ ಪಂತ್​ ಅವರನ್ನು ಹೆಸರಿಸಲಾಗಿದೆ.

ರೋಹಿತ್ ಶರ್ಮಾ ಗಾಯದ ಕಾರಣ ದಕ್ಷಿಣ ಆಫ್ರಿಕಾದ ಕೊನೆಯ ಪ್ರವಾಸವನ್ನು ಆಡದಿದ್ದಾಗ ಜಸ್ಪ್ರೀತ್ ಬುಮ್ರಾ ODI ಸರಣಿಯಲ್ಲಿ ತಂಡದ ಉಪನಾಯಕರಾಗಿದ್ದರು. ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಲೋಕೇಶ್ ರಾಹುಲ್ ಮುನ್ನಡೆ ಸಾಧಿಸಿದ್ದರು. ಜಸ್ಪ್ರೀತ್ ಬುಮ್ರಾ ಅವರು ಉಪನಾಯಕರಾಗಿದ್ದರು. ರಿಷಭ್ ಪಂತ್ ಅವರು ಹಲವಾರು ಸರಣಿಗಳ ಸಹ-ನಾಯಕರಾಗಿದ್ದು, ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಐದು ಪಂದ್ಯಗಳ T20 ಸರಣಿಯನ್ನು ಮುನ್ನಡೆಸಿದ್ದಾರೆ. ರೋಹಿತ್ ಶರ್ಮಾ ಅವರ ಕೋವಿಡ್ ಮತ್ತು ಲೋಕೇಶ್ ರಾಹುಲ್ ಅನುಪಸ್ಥಿತಿಯಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್​ ಅವರನ್ನು ಎಡ್ಜ್‌ಬಾಸ್ಟನ್‌ ಟೆಸ್ಟ್​ಗೆ ನಾಐಕ ಹಾಗೂ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.

Published On - 7:23 pm, Thu, 30 June 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ