AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಮಿಂಚಿದ ಕ್ಯಾಪ್ಟನ್; ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ!

IND vs SL: ಶುಕ್ರವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಶ್ರೀಲಂಕಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. 172 ರನ್‌ಗಳ ಗುರಿಯನ್ನು ಭಾರತ ತಂಡ 38 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ಸಾಧಿಸಿತು.

IND vs SL: ಮಿಂಚಿದ ಕ್ಯಾಪ್ಟನ್; ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ!
IND vs SL
TV9 Web
| Updated By: ಪೃಥ್ವಿಶಂಕರ|

Updated on:Jul 01, 2022 | 6:34 PM

Share

ಶುಕ್ರವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಶ್ರೀಲಂಕಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. 172 ರನ್‌ಗಳ ಗುರಿಯನ್ನು ಭಾರತ ತಂಡ 38 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ಸಾಧಿಸಿತು. ಭಾರತದ ಮಾಜಿ ನಾಯಕಿ ಮತ್ತು ಶ್ರೇಷ್ಠ ಬ್ಯಾಟರ್ ಮಿಥಾಲಿ ರಾಜ್ (Mithali Raj) ನಿವೃತ್ತಿಯ ನಂತರ, ಟೀಮ್ ಇಂಡಿಯಾ ಏಕದಿನ ಪಂದ್ಯವನ್ನು ಆಡಲು ಬಂದಿರುವುದು ಇದೇ ಮೊದಲು. ಇದರೊಂದಿಗೆ ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದಲ್ಲಿ ತಂಡವು ಗೆಲುವಿನೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಿದೆ.

ಭಾರತದ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ 44 ರನ್, ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 35 ಮತ್ತು ಹರ್ಲೀನ್ ಡಿಯೋಲ್ 34 ರನ್​ಗಳ ಕೊಡುಗೆ ನೀಡಿದರು. ಭಾರತ ಮಹಿಳಾ ತಂಡ ಶ್ರೀಲಂಕಾವನ್ನು 48.2 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟ್ ಮಾಡಿತು. ಭಾರತದ ಪರ ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಮೂರು ವಿಕೆಟ್ ಪಡೆದರು.

ಭಾರತದ ಬೌಲರ್‌ಗಳ ಮುಂದೆ ಶ್ರೀಲಂಕಾ ಬ್ಯಾಟರ್​ಗಳು ವಿಫಲ

ಇದನ್ನೂ ಓದಿ
Image
IND vs ENG: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ! ಯಾರಿಗೆಲ್ಲ ಚಾನ್ಸ್?
Image
IND vs ENG: ಭಾರತದ ವಿರುದ್ಧ ಇಂಗ್ಲೆಂಡ್‌ನಲ್ಲಿ ಸೂಪರ್ ಸೆಂಚುರಿ ಸಿಡಿಸಿದ ಜೇಮ್ಸ್ ಆಂಡರ್ಸನ್..!

ಟಾಸ್ ಸೋತು ಫೀಲ್ಡಿಂಗ್ ಮಾಡಿದ ಭಾರತದ ರೇಣುಕಾ ಮೂರನೇ ಓವರ್‌ನಲ್ಲಿಯೇ ಎದುರಾಳಿ ತಂಡದ ನಾಯಕಿ ಚಾಮರಿ ಅಟಪಟ್ಟು (ಎರಡು ರನ್) ಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದರು.ನಂತರ ದೀಪ್ತಿ, ಹನ್ಸಿಮಾ ಕರುಣರತ್ನೆಗೆ ಖಾತೆ ತೆರೆಯಲೂ ಸಹ ಅವಕಾಶ ನೀಡಲಿಲ್ಲ. ಆರಂಭಿಕರಾದ ಹಾಸಿನಿ ಮತ್ತು ಹರ್ಷಿತಾ ಮಾದವಿ (28) ಮೂರನೇ ವಿಕೆಟ್‌ಗೆ 34 ರನ್‌ಗಳ ಜೊತೆಯಾಟದೊಂದಿಗೆ ತಂಡವನ್ನು ಮರಳಿ ಕಟ್ಟಲು ಪ್ರಯತ್ನಿಸಿದರು. 54 ಎಸೆತಗಳ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳನ್ನು ಬಾರಿಸಿದ ಹಾಸಿನಿಯನ್ನು ದೀಪ್ತಿ ಔಟ್ ಮಾಡಿದರು, ನಂತರ ಹರ್ಮನ್‌ಪ್ರೀತ್ ಕವಿಶಾ ದಿಲ್ಹಾರಿಗೆ ಖಾತೆ ತೆರೆಯುವ ಅವಕಾಶವನ್ನು ನೀಡಲಿಲ್ಲ.

ಇನಿಂಗ್ಸ್‌ನ 19 ನೇ ಓವರ್‌ನಲ್ಲಿ ಅರ್ಧದಷ್ಟು ತಂಡವು 65 ರನ್‌ಗಳಿಗೆ ಪೆವಿಲಿಯನ್‌ಗೆ ಹಿಂತಿರುಗಿದ ನಂತರ ಶ್ರೀಲಂಕಾ ತಂಡವು ತೊಂದರೆಗೆ ಸಿಲುಕಿತು. ಆದರೆ ನೆಲಾಕ್ಷಿ ಸ್ಕೋರ್ ಅನ್ನು 140 ರ ಗಡಿ ದಾಟಿಸಲು ಸಹಾಯ ಮಾಡಿದರು. ಅವರಿಗೆ ವಿಕೆಟ್ ಕೀಪರ್ ಅನುಷ್ಕಾ ಸಂಜೀವನಿ (18) ಮತ್ತು ಇಬ್ಬರಿಂದಲೂ ಉತ್ತಮ ಬೆಂಬಲ ದೊರೆಯಿತು. ಆರನೇ ವಿಕೆಟ್‌ಗೆ 47 ರನ್ ಸೇರಿಸಿದರು. ಇದಾದ ಬಳಿಕ ತಂಡದ ಬ್ಯಾಟರ್​ಗಳು ಸ್ಕೋರ್ 170ರನ್‌ ದಾಟಲು ಪರದಾಡಿದರು. ದೀಪ್ತಿ ಮತ್ತು ರೇಣುಕಾ ತಲಾ ಮೂರು ವಿಕೆಟ್ ಪಡೆದರೆ, ಪೂಜಾ ವಸ್ತ್ರಾಕರ್ ಎರಡು ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ತಲಾ ಒಂದು ವಿಕೆಟ್ ಪಡೆದರು. ಶ್ರೀಲಂಕಾ ಪರ ನೀಲಾಕ್ಷಿ ಡಿ ಸಿಲ್ವಾ 43 ರನ್ ಗಳಿಸಿದರೆ, ಹಾಸಿನಿ ಪೆರೇರಾ 37 ರನ್ ಗಳಿಸಿದರು.

Published On - 6:08 pm, Fri, 1 July 22