IND vs ENG: ಭಾರತದ ವಿರುದ್ಧ ಇಂಗ್ಲೆಂಡ್‌ನಲ್ಲಿ ಸೂಪರ್ ಸೆಂಚುರಿ ಸಿಡಿಸಿದ ಜೇಮ್ಸ್ ಆಂಡರ್ಸನ್..!

IND vs ENG: ಆಂಡರ್ಸನ್ ಈಗಾಗಲೇ ಭಾರತದ ವಿರುದ್ಧ ಟೆಸ್ಟ್‌ನಲ್ಲಿ 100 ವಿಕೆಟ್‌ಗಳನ್ನು ಪಡೆದಿದ್ದರೂ, ಆದರೆ ಈ ಬಾರಿ ಅವರು ಇಂಗ್ಲೆಂಡ್‌ನಲ್ಲಿ ಮಾತ್ರ 100 ವಿಕೆಟ್‌ಗಳನ್ನು ಪೂರೈಸಿದ್ದಾರೆ.

IND vs ENG: ಭಾರತದ ವಿರುದ್ಧ ಇಂಗ್ಲೆಂಡ್‌ನಲ್ಲಿ ಸೂಪರ್ ಸೆಂಚುರಿ ಸಿಡಿಸಿದ ಜೇಮ್ಸ್ ಆಂಡರ್ಸನ್..!
ಜೇಮ್ಸ್ ಆಂಡರ್ಸನ್
Follow us
TV9 Web
| Updated By: ಪೃಥ್ವಿಶಂಕರ

Updated on:Jul 01, 2022 | 4:54 PM

ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ (India and England) ನಡುವಿನ ಐದು ಟೆಸ್ಟ್‌ಗಳ ಸರಣಿಯ ಕೊನೆಯ ಟೆಸ್ಟ್ ಪಂದ್ಯವು ಶುಕ್ರವಾರ, ಜುಲೈ 1 ರಂದು ಪ್ರಾರಂಭವಾಗಿದೆ. ಇದು ಕಳೆದ ವರ್ಷ ಪ್ರಾರಂಭವಾದ ಈ ಸರಣಿಯ ಕೊನೆಯ ಪಂದ್ಯವಾಗಿದ್ದು, ಆಗ ಕೊರೊನಾದಿಂದಾಗಿ ಆ ಪಂದ್ಯವನ್ನು ಆಡಲಾಗಲಿಲ್ಲ, ಈಗ ಅದು ಪೂರ್ಣಗೊಳ್ಳುತ್ತಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ತಂಡದ ಆರಂಭ ಉತ್ತಮವಾಗಿಲ್ಲ. ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಮೊದಲ 10 ಓವರ್‌ಗಳಲ್ಲೇ ಪೆವಿಲಿಯನ್​ಗೆ ಮರಳಿದ್ದಾರೆ. ಗಿಲ್ ಅವರ ವಿಕೆಟ್ ಅನ್ನು ಇಂಗ್ಲೆಂಡ್‌ನ ದಂತಕಥೆ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ( James Anderson) ಪಡೆದರು. ಇದರೊಂದಿಗೆ ಅವರು ತಮ್ಮ ನೆಲದಲ್ಲಿ ಭಾರತದ ವಿರುದ್ಧ 100 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ.

39 ವರ್ಷದ ಸೂಪರ್‌ಸ್ಟಾರ್ ಇಂಗ್ಲಿಷ್ ವೇಗಿ ಜೇಮ್ಸ್ ಆಂಡರ್ಸನ್ ಭಾರತದ ವಿರುದ್ಧ ಅಬ್ಬರಿಸಿದ್ದು, ಈ ಪ್ರವೃತ್ತಿ ಇನ್ನೂ ಮುಂದುವರೆದಿದೆ. ಬರ್ಮಿಂಗ್ಹ್ಯಾಮ್ ಟೆಸ್ಟ್‌ನ ಮೊದಲ ಅರ್ಧ ಗಂಟೆಯಲ್ಲಿ, ಆಂಡರ್ಸನ್ ಅವರನ್ನು ಮೀರಿಸುವುದು ಸುಲಭವಲ್ಲ ಎಂದು ತೋರಿಸಿದರು. ಟಾಸ್ ಸೋತ ನಂತರ, ಭಾರತ ತಂಡವು ಮೊದಲು ಬ್ಯಾಟಿಂಗ್‌ಗೆ ತೆರಳಿತು. ಆರಂಭದಲ್ಲಿ ಗಿಲ್ ಕೆಲವು ಉತ್ತಮ ಹೊಡೆತಗಳನ್ನು ಹೊಡೆದು ಬೌಂಡರಿ ಪಡೆದರು, ಆದರೆ ಏಳನೇ ಓವರ್‌ನಲ್ಲಿ, ಆಂಡರ್ಸನ್ ಭಾರತೀಯ ಆರಂಭಿಕರನ್ನು ಆಫ್ ಸ್ಟಂಪ್ ಹೊರಗೆ ಚೆಂಡನ್ನು ಆಡುವ ತಪ್ಪನ್ನು ಮಾಡುವಂತೆ ಒತ್ತಾಯಿಸಿದರು. ಇದರಿಂದ ಗಿಲ್​ ಸ್ಲಿಪ್​ನಲ್ಲಿ ನಿಂತಿದ್ದ ಫೀಲ್ಡರ್​ಗೆ ಕ್ಯಾಚ್​ ನೀಡಿದರು.

ಇದನ್ನೂ ಓದಿ: India vs England 5th Test Match Playing 11: ಟಾಸ್ ಗೆದ್ದ ಇಂಗ್ಲೆಂಡ್; ಪೂಜಾರ ಓಪನರ್, ಭಾರತದ ಪ್ಲೇಯಿಂಗ್ XI

ಇದನ್ನೂ ಓದಿ
Image
SL vs AUS: ಕ್ರೀಡಾಂಗಣ ದಾಟಿ ರಸ್ತೆಯಲ್ಲಿ ಬಿದ್ದ ಪ್ಯಾಟ್ ಕಮ್ಮಿನ್ಸ್ ಬಾರಿಸಿದ ಸಿಕ್ಸರ್! ದಂಗಾದ ಫ್ಯಾನ್ಸ್; ವಿಡಿಯೋ
Image
India vs England 5th Test Match Playing 11: ಟಾಸ್ ಗೆದ್ದ ಇಂಗ್ಲೆಂಡ್; ಪೂಜಾರ ಓಪನರ್, ಭಾರತದ ಪ್ಲೇಯಿಂಗ್ XI
Image
SL vs AUS: 17 ಎಸೆತಗಳಲ್ಲಿ 4 ವಿಕೆಟ್, 5 ರನ್ ಟಾರ್ಗೆಟ್; ಲಂಕಾ ಎದುರು ಸುಲಭವಾಗಿ ಗೆದ್ದ ಆಸ್ಟ್ರೇಲಿಯಾ

ಇಂಗ್ಲೆಂಡ್‌ನಲ್ಲಿ ಭಾರತ ವಿರುದ್ಧ ಶತಕ

ಗಿಲ್ ವಿಕೆಟ್‌ನೊಂದಿಗೆ, ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಮತ್ತೊಂದು ಶತಕವನ್ನು ಪೂರ್ಣಗೊಳಿಸಿದರು. ಆಂಡರ್ಸನ್ ಈಗಾಗಲೇ ಭಾರತದ ವಿರುದ್ಧ ಟೆಸ್ಟ್‌ನಲ್ಲಿ 100 ವಿಕೆಟ್‌ಗಳನ್ನು ಪಡೆದಿದ್ದರೂ, ಆದರೆ ಈ ಬಾರಿ ಅವರು ಇಂಗ್ಲೆಂಡ್‌ನಲ್ಲಿ ಮಾತ್ರ 100 ವಿಕೆಟ್‌ಗಳನ್ನು ಪೂರೈಸಿದ್ದಾರೆ. ಆಂಡರ್ಸನ್ ಅವರು ತಮ್ಮ ನೆಲದಲ್ಲಿ ಭಾರತದ ವಿರುದ್ಧ 22 ನೇ ಟೆಸ್ಟ್ ಆಡುತ್ತಿದ್ದಾರೆ. ಅವರ 43 ನೇ ಇನ್ನಿಂಗ್ಸ್‌ನಲ್ಲಿ ಅವರು ಈ 100 ವಿಕೆಟ್‌ಗಳನ್ನು ಪೂರೈಸಿದ್ದಾರೆ. ಒಟ್ಟಾರೆಯಾಗಿ, ಆಂಡರ್ಸನ್ ಭಾರತದ ವಿರುದ್ಧ 35 ಟೆಸ್ಟ್‌ಗಳಲ್ಲಿ 134 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ, ಇದರಲ್ಲಿ ಅವರು ಐದು ಬಾರಿ ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದಾರೆ.

ಭಾರತ ವಿರುದ್ಧ ಆಂಡರ್ಸನ್ ಸೂಪರ್‌ಸ್ಟಾರ್‌

ಆಂಡರ್ಸನ್ ಅವರ ಈ ಯಶಸ್ಸಿನಲ್ಲಿ ಮತ್ತೊಂದು ವಿಶೇಷತೆಯಿದೆ ಮತ್ತು ಅವರು ಮೂರು ವಿಭಿನ್ನ ಸುತ್ತಿನ ಭಾರತೀಯ ಬ್ಯಾಟಿಂಗ್‌ನಲ್ಲಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ದಿಗ್ಗಜ ವೇಗಿ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರನ್ನು 9 ಬಾರಿ ಬಲಿಪಶು ಮಾಡಿದರು. ನಂತರ ಪ್ರಸ್ತುತ ಪೀಳಿಗೆಯ ಇಬ್ಬರು ದಂತಕಥೆಗಳಾದ ಚೇತೇಶ್ವರ ಪೂಜಾರ 11 ಬಾರಿ ಮತ್ತು ವಿರಾಟ್ ಕೊಹ್ಲಿಯನ್ನು 7 ಬಾರಿ ಔಟ್ ಮಾಡಿದ್ದಾರೆ. ಇದೇ ವೇಳೆ ಭಾರತ ತಂಡದ ಭವಿಷ್ಯದ ತಾರೆ ಶುಭಮನ್ ಗಿಲ್ ಕೂಡ ಮೂರನೇ ಬಾರಿ ಪೆವಿಲಿಯನ್​ಗೆ ಮರಳಿದ್ದಾರೆ. ಇದಲ್ಲದೇ 8 ಬಾರಿ ಅಜಿಂಕ್ಯ ರಹಾನೆ ಅವರನ್ನೂ ಬಲಿ ಪಡೆದಿದ್ದಾರೆ.

Published On - 4:54 pm, Fri, 1 July 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್