IND vs ENG: ವಿರಾಟ್ ಮತ್ತೆ ಫೇಲ್; ನಾಲ್ಕನೇ ಟೆಸ್ಟ್ ಆಡುತ್ತಿರುವ ಬೌಲರ್ಗೆ ಕೊಹ್ಲಿ ಬಲಿ! ಸಂಕಷ್ಟದಲ್ಲಿ ಭಾರತ
IND vs ENG: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಭರವಸೆ ಇತ್ತು, ಆದರೆ ಮಾಜಿ ನಾಯಕ ಕೂಡ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ.
ಭಾರತ ಕ್ರಿಕೆಟ್ ತಂಡಕ್ಕೆ (Indian cricket team) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಕಂತು ಉತ್ತಮ ರೀತಿಯಲ್ಲಿ ಆರಂಭವಾಗಿಲ್ಲ. ಶುಕ್ರವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 1 ರಂದು ಆರಂಭವಾದ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್‌ನ ಮೊದಲ ದಿನವೇ ಭಾರತೀಯ ಬ್ಯಾಟಿಂಗ್‌ನ ಅಗ್ರ ಕ್ರಮಾಂಕ ಕುಸಿದಿದೆ. ರೋಹಿತ್ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ, ವಿರಾಟ್ ಕೊಹ್ಲಿ (Virat Kohli) ಮೇಲೆ ಹೆಚ್ಚಿನ ಭರವಸೆ ಇತ್ತು, ಆದರೆ ಮಾಜಿ ನಾಯಕ ಕೂಡ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಯುವ ವೇಗದ ಬೌಲರ್ ಮ್ಯಾಥ್ಯೂ ಪಾಟ್ಸ್‌ಗೆ ಕೊಹ್ಲಿ ಬಲಿಯಾದರು. ತಿಂಗಳ ಹಿಂದೆಯಷ್ಟೇ ಟೆಸ್ಟ್‌ಗೆ ಪದಾರ್ಪಣೆ ಮಾಡಿ ಮೊದಲ ಇನಿಂಗ್ಸ್‌ನಿಂದಲೂ ದಿಗ್ಗಜರನ್ನು ಬೇಟೆಯಾಡಿದ ಅದೇ ಮ್ಯಾಥ್ಯೂ ಪಾಟ್ಸ್ (Matthew Potts) ಈಗ ಕೊಹ್ಲಿ ವಿಕೆಟ್ ಪಡೆದಿದ್ದಾರೆ.
ಸುದೀರ್ಘ ಸಮಯದಿಂದ ರನ್‌ಗಾಗಿ ಹೋರಾಡುತ್ತಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿನ ಈ ಕೊನೆಯ ಟೆಸ್ಟ್‌ನೊಂದಿಗೆ ತಮ್ಮ ಕೆಟ್ಟ ಹಂತವನ್ನು ಕೊನೆಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಲೀಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಎರಡು ಉತ್ತಮ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಭರವಸೆ ಮೂಡಿಸಿದರು. ನಂತರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ತಂಡದ ಕಳಪೆ ಆರಂಭದ ನಂತರ ಅವರು ದೀರ್ಘಕಾಲ ಕ್ರೀಸ್‌ನಲ್ಲಿ ಉಳಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅವರು ಕ್ರೀಸ್‌ಗೆ ಬಂದ 6 ಓವರ್‌ಗಳಲ್ಲಿ ಈ ಭರವಸೆ ಹುಸಿಯಾಯಿತು.
ಬ್ಯಾಟಿಂಗ್ ಮರೆತರಾ ಕೊಹ್ಲಿ?
ಚೇತೇಶ್ವರ ಪೂಜಾರ ಔಟಾದ ನಂತರ ಮೊದಲ ಸೆಷನ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಕೊಹ್ಲಿ ಕೆಲವೇ ಎಸೆತಗಳನ್ನು ಆಡಿದರು, ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ನಂತರ ಎರಡು ಗಂಟೆಗಳ ನಂತರ ಆಟ ಪುನರಾರಂಭವಾಯಿತು. ಈ ಬಾರಿ ಸತತ ಎರಡನೇ ಸೆಷನ್‌ನ ಆಟ ಆರಂಭಗೊಂಡಿದ್ದು, ಕೆಲವೇ ಓವರ್‌ಗಳಲ್ಲಿ ಭಾರತ ಮೊದಲು ಹನುಮ ವಿಹಾರಿ ಮತ್ತು ನಂತರ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಎರಡೂ ವಿಕೆಟ್‌ಗಳನ್ನು 2 ಓವರ್‌ಗಳೊಳಗೆ ಮ್ಯಾಥ್ಯೂ ಪಾಟ್ಸ್ ಪಡೆದರು. ಆದರೆ ಕೊಹ್ಲಿ ತಮ್ಮ ನಿರ್ಧಾರದಲ್ಲಿನ ತಪ್ಪಿನಿಂದಾಗಿ ಔಟಾದರು. ವಾಸ್ತವವಾಗಿ, ಕೊಹ್ಲಿ ಪಾಟ್ಸ್ ಎಸೆದ ಚೆಂಡನ್ನು ಆಡುವುದೋ ಅಥವಾ ಬಿಡುವುದೋ ಎಂಬ ದ್ವಂದ್ವದಿಂದಲೇ ವಿಕೆಟ್ ಒಪ್ಪಿಸಿದರು.
ಕೊಹ್ಲಿ ಮುಂಭಾಗದ ಪಾದವನ್ನು ಸಾಕಷ್ಟು ದೂರ ತೆಗೆದುಕೊಂಡು ಆ ಎಸೆತವನ್ನು ಮೊದಲು ರಕ್ಷಿಸಲು ಯೋಚಿಸಿದರು, ಆದರೆ ಕೊನೆಯ ಕ್ಷಣದಲ್ಲಿ ಚೆಂಡನ್ನು ವಿಕೆಟ್‌ಕೀಪರ್‌ಗೆ ಬಿಡಲು ನಿರ್ಧರಿಸಿದರು. ಆದರೆ ಅಷ್ಟರಲ್ಲಿ ಅದು ತುಂಬಾ ತಡವಾಗಿತ್ತು. ಕೊಹ್ಲಿ ತಮ್ಮ ಬ್ಯಾಟ್ ಅನ್ನು ಮೇಲೆ ಎತ್ತಲು ಪ್ರಯತ್ನಿಸಿದರು ಆದರೆ ಚೆಂಡು ಬ್ಯಾಟ್‌ನ ಕೆಳಭಾಗಕ್ಕೆ ಬಡಿದು ಸ್ಟಂಪ್‌ಗೆ ಬಡಿಯಿತು.
EDGBASTON GOES POTTY! ?
Scorecard/Videos: https://t.co/jKoipF4U01
??????? #ENGvIND ?? pic.twitter.com/X5G3B2HsRU
— England Cricket (@englandcricket) July 1, 2022
ಭಾರತದ ಬ್ಯಾಟಿಂಗ್‌ನ ಕೆಟ್ಟ ಸ್ಥಿತಿ
ಕೊಹ್ಲಿ ಮಾತ್ರವಲ್ಲ, ಭಾರತ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳ ಸ್ಥಿತಿಯೂ ಚೆನ್ನಾಗಿರಲಿಲ್ಲ. ಆರಂಭಿಕರಾದ ಶುಭಮನ್ ಗಿಲ್ ಅವರು ತ್ವರಿತ ಆರಂಭವನ್ನು ಮಾಡಿ, ಕೆಲವು ಉತ್ತಮ ಸ್ಟ್ರೋಕ್ ಮಾಡಿದರು, ಆದರೆ 17 ರನ್ ಗಳಿಸಿದ ನಂತರ ಜೇಮ್ಸ್ ಆಂಡರ್ಸನ್‌ಗೆ ಬಲಿಯಾದರು. ಅವರೊಂದಿಗೆ ಓಪನಿಂಗ್ಗೆ ಬಂದಿದ್ದ ಚೇತೇಶ್ವರ ಪೂಜಾರ ಕೂಡ ಒಂದು ಗಂಟೆಗೂ ಹೆಚ್ಚು ಕಾಲ ಕಳೆದರೂ ದೊಡ್ಡ ಇನ್ನಿಂಗ್ಸ್ ಆಡಲಾಗದೆ ಆ್ಯಂಡರ್ಸನ್ಗೆ ಬಲಿಯಾದರು. ಅದೇ ಸಮಯದಲ್ಲಿ, ವಿಹಾರಿ ಕೂಡ ವಿಫಲರಾಗಿ ಪಾಟ್ಸ್‌ಗೆ ಮೊದಲ ಬಲಿಯಾದರು. ನಂತರ ಶ್ರೇಯಸ್ ಅಯ್ಯರ್ ಸಹ ಭಾರತ 100 ರನ್ ಗಳಿಸುವ ಮೊದಲು ಪೆವಿಲಿಯನ್‌ಗೆ ಮರಳಿದರು.